ಸುಬ್ರಹ್ಮಣ್ಯ – ಸಕಲೇಶಪುರದಲ್ಲಿ ರೈಲ್ವೇ ವಿದ್ಯುದೀಕರಣ ; ಡಿಸೆಂಬರ್ ವರೆಗೆ ಮಂಗಳೂರು- ಬೆಂಗಳೂರು ಮಧ್ಯೆ ರೈಲು ಸಂಚಾರ ವ್ಯತ್ಯಯ

Picture of Savistara

Savistara

Bureau Report

ಸಕಲೇಶಪುರ- ಸುಬ್ರಹ್ಮಣ್ಯ ರೋಡ್ ನಡುವೆ ನಡೆಯುತ್ತಿರುವ ರೈಲ್ವೆ ವಿದ್ಯುದ್ದೀಕರಣ ಕಾರ್ಯದಿಂದಾಗಿ, ಮಂಗಳೂರು ಬೆಂಗಳೂರು ನಡುವೆ ಸಂಚರಿಸುವ ಹಲವು ರೈಲುಗಳ ಸಮಯದಲ್ಲಿ ವ್ಯತ್ಯಯವಾಗಲಿದ್ದು, ಕೆಲವು ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದೆ.

ಮಂಗಳೂರು, ಅ.25: ಸಕಲೇಶಪುರ- ಸುಬ್ರಹ್ಮಣ್ಯ ರೋಡ್ ನಡುವೆ ನಡೆಯುತ್ತಿರುವ ರೈಲ್ವೆ ವಿದ್ಯುದ್ದೀಕರಣ ಕಾರ್ಯದಿಂದಾಗಿ, ಮಂಗಳೂರು ಬೆಂಗಳೂರು ನಡುವೆ ಸಂಚರಿಸುವ ಹಲವು ರೈಲುಗಳ ಸಮಯದಲ್ಲಿ ವ್ಯತ್ಯಯವಾಗಲಿದ್ದು, ಕೆಲವು ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದೆ.ವಿದ್ಯುದ್ದೀಕರಣ ಕಾಮಗಾರಿ ನವೆಂಬರ್ 2 ರಿಂದ ಡಿಸೆಂಬರ್ 15ರ ವರೆಗೆ ನಡೆಯಲಿದ್ದು ಈ ವೇಳೆ ಹಲವು ರೈಲುಗಳ ಸೇವೆಯನ್ನು ರದ್ದುಪಡಿಸಲಾಗಿದೆ. ಈ ಕುರಿತು ನೈರುತ್ಯ ರೈಲ್ವೆ ಪ್ರಕಟಣೆ ಹೊರಡಿಸಿದೆ. ಕಾಮಗಾರಿ ನಡುವೆ ಪ್ರತಿ ದಿನ ನಾಲ್ಕು ಗಂಟೆಗಳಿಗೊಮ್ಮೆ ಲೈನ್ ಬ್ಲಾಕ್ ತೆರೆದುಕೊಳ್ಳಲಿದೆ. ಈ ವೇಳೆ ಮಾತ್ರ ರೈಲುಗಳ ಸಂಚಾರ ಇರಲಿದೆ.ರೈಲು ಸಂಖ್ಯೆ 16539 ಯಶವಂತಪುರ-ಮಂಗಳೂರು ಜಂಕ್ಷನ್ ಸಾಪ್ತಾಹಿಕ ಎಕ್ಸ್‌’ಪ್ರೆಸ್ ರೈಲು ಮೊದಲು 01.11.2025 ರ ವರೆಗೆ ರದ್ದುಗೊಂಡಿತ್ತು 08.11.2025 80 13.12.2025 ថថ ರದ್ದುಗೊಳ್ಳಲಿದೆ.

ರೈಲು ಸಂಖ್ಯೆ 16540 ಮಂಗಳೂರು ಜಂಕ್ಷನ್-ಯಶವಂತಪುರ ಸಾಪ್ತಾಹಿಕ ಎಕ್ಸ್‌’ಪ್ರೆಸ್ ರೈಲು ಮೊದಲು 02.11.2025 ರ ವರೆಗೆ ರದ್ದುಗೊಂಡಿತ್ತು. ಈಗ 09.11.2025 ರಿಂದ 14.12.2025 ರವರೆಗೆ ರದ್ದುಗೊಳ್ಳಲಿದೆ. ರೈಲು ಸಂಖ್ಯೆ 16575 ಯಶವಂತಪುರ ಮಂಗಳೂರು ಜಂಕ್ಷನ್ ಗೋಮಟೇಶ್ವರ ಟ್ರೈನ್‌-ವೀಕ್ಲಿ ಎಕ್ಸ್‌’ಪ್ರೆಸ್ ಮೊದಲು 30.10.2025 ರ ವರೆಗೆ ರದ್ದುಗೊಂಡಿತ್ತು. ಈಗ 02.11.2025 ರಿಂದ 14.12.2025 ರ ವರೆಗೆ ರದ್ದುಗೊಳ್ಳಲಿದೆ.

ರೈಲು ಸಂಖ್ಯೆ 16576 ಮಂಗಳೂರು ಜಂಕ್ಷನ್ ಯಶವಂತಪುರ ಟ್ರೈ-ವೀಕ್ಲಿ ಎಕ್ಸ್‌’ಪ್ರೆಸ್‌ ಮೊದಲು 30.10.20250 ರದ್ದುಗೊಂಡಿದ್ದು. ಈಗ 03.11.2025 ರಿಂದ 15.12.2025 ರವರೆಗೆ ರದ್ದುಗೊಳ್ಳಲಿದೆ. ರೈಲು ಸಂಖ್ಯೆ 16515 ಯಶವಂತಪುರ ಕಾರವಾರ ಟ್ರೈ-ವೀಕ್ಲಿ ಎಕ್ಸ್‌’ಪ್ರೆಸ್‌ ಮೊದಲು 31.10.2025 ರವರೆಗೆ ರದ್ದುಗೊಂಡಿತ್ತು. ಈಗ 03.11.2025 80 15.12.2025 ថថ ថថ.ರೈಲು ಸಂಖ್ಯೆ 16516 ಕಾರವಾರ – ಯಶವಂತಪುರ ಟ್ರೈ-ವೀಕ್ಲಿ ಎಕ್ಸ್‌ಪ್ರೆಸ್‌ ಮೊದಲು 01.11.2025 ರವರೆಗೆ ರದ್ದುಗೊಂಡಿತ್ತು. ಈಗ 04.11.2025 ರದ್ದುಗೊಳ್ಳಲಿದೆ. ರಿಂದ 16.12.2025 ರವರೆಗೆ

ಬೆಳಗಿನ ರೈಲು ರದ್ದು ವಿಸ್ತರಣೆ

ಭಾರಿ ಮಳೆಯ ಕಾರಣ ರದ್ದಾಗಿದ್ದ ಮಂಗಳೂರು ಬೆಂಗಳೂರು ಬೆಳಗಿನ ರೈಲುಗಳ ರದ್ದು ನಿರ್ಧಾರವನ್ನು ಕಳೆದ ತಿಂಗಳು ವಿಸ್ತರಣೆ ಮಾಡಲಾಗಿದೆ. ವಿದ್ಯುದ್ದೀಕರಣ ಕಾಮಗಾರಿ ಹಿನ್ನಲೆಯಲ್ಲಿ ಈ ರೈಲು ಸಂಚಾರವನ್ನು ಡಿಸೆಂಬ‌ರ್ 16ರ ವರೆಗೆ ರದ್ದು ಮಾಡಲಾಗಿದೆ.

[t4b-ticker]
error: Content is protected !!