ಅಮೆರಿಕದಲ್ಲಿ ವಲಸಿಗರ ಕೆಲಸದ ಪರವಾನಗಿಯ ಸ್ವಯಂ ನವೀಕರಣ ರದ್ದು!

Picture of Savistara

Savistara

Bureau Report

ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್ ಅಮೆರಿಕದ ಚುಕ್ಕಾಣಿ ಹಿಡಿದ ಬಳಿಕಆಡಳಿತದಲ್ಲಿ ಹಲವು ಬದಲಾವಣೆಯನ್ನು ತಂದಿದೆ. ವಲಸಿಗರ ವಿರುದ್ಧ ಕಠಿಣ ಕ್ರಮಕೈಗೊಂಡಿದ್ದ ಸರ್ಕಾರ ಇದೀಗ ವಲಸೆ ಕಾರ್ಮಿಕರ ಉದ್ಯೋಗ ಅಧಿಕಾರ ದಾಖಲೆಗಳನ್ನು (ಇಎಡಿ) ಸ್ವಯಂಚಾಲಿತವಾಗಿ ವಿಸ್ತರಿಸಲು ನಿರಾಕರಿಸಿದೆ. ಈ ಮಹತ್ವದ ಮಾಹಿತಿಯನ್ನು ಅಮೆರಿಕದ ಗೃಹ ಭದ್ರತಾ ಇಲಾಖೆ ತಿಳಿಸಿದೆ. ಈ ಕ್ರಮವು ಸಾವಿರಾರು ವಿದೇಶಿ ಉದ್ಯೋಗಿಗಳ ಮೇಲೆ, ವಿಶೇಷವಾಗಿ ವಲಸಿಗ ಉದ್ಯೋಗಿಗಳ ದೊಡ್ಡ ಭಾಗವಾಗಿರುವ ಭಾರತೀಯರ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.ಅ.30 ರ ಗುರುವಾರ ಅಥವಾ ನಂತರ ತಮ್ಮ ಇಎಡಿ ನವೀಕರಿಸಲು ಅರ್ಜಿ ಸಲ್ಲಿಸುವ ವಿದೇಶಿಯರು ಇನ್ನು ಮುಂದೆ ತಮ್ಮ ಇಎಡಿ ಯ ಸ್ವಯಂಚಾಲಿತ ವಿಸ್ತರಣೆಯನ್ನು ಸ್ವೀಕರಿಸುವುದಿಲ್ಲ” ಎಂದು ಇಲಾಖೆ ಬುಧವಾರ ಹೇಳಿಕೆಯಲ್ಲಿ ತಿಳಿಸಿದೆ. ಇದರರ್ಥ, ಅಕ್ಟೋಬರ್ 30 ರ ಮೊದಲು ಸ್ವಯಂಚಾಲಿತವಾಗಿ ವಿಸ್ತರಿಸಲಾದ ಇಎಡಿ ಗಳು ಪರಿಣಾಮ ಬೀರುವುದಿಲ್ಲ. ಹೊಸ ನಿಯಮವು “ಸಾರ್ವಜನಿಕ ಸುರಕ್ಷತೆ, ರಾಷ್ಟ್ರೀಯ ಭದ್ರತೆಯನ್ನು ರಕ್ಷಿಸಲು ಪರಿಶೀಲನೆ ಮತ್ತು ಸ್ಟೀನಿಂಗ್” ಗೆ ಆದ್ಯತೆ ನೀಡುತ್ತದೆ ಎಂದು ಟ್ರಂಪ್‌ ಆಡಳಿತ ತಿಳಿಸಿದೆ.ವಲಸಿಗರು ತಮ್ಮ ಕೆಲಸದ ಪರವಾನಗಿ ಅವಧಿ ಮುಗಿದ ನಂತರವೂ 540 ದಿನಗಳವರೆಗೆ ಅಮೆರಿಕದಲ್ಲಿ ಕೆಲಸ ಮಾಡಲು ಬಿಡನ್ ಆಡಳಿತ ಅವಕಾಶ ನೀಡಿತ್ತು. ಆದರೆ ಇದೀಗ ಈ ನಿಯಮವನ್ನು ರದ್ದು ಮಾಡಲಾಗಿದೆ. ಈ ನಿಯಮಕ್ಕೆ ಸೀಮಿತ ವಿನಾಯಿತಿಗಳಿವೆ, ಇದರಲ್ಲಿ ಕಾನೂನಿನಿಂದ ಒದಗಿಸಲಾದ ವಿಸ್ತರಣೆಗಳು ಅಥವಾ TPS-ಸಂಬಂಧಿತ ಉದ್ಯೋಗ ದಾಖಲಾತಿಗಾಗಿ ಫೆಡರಲ್ ರಿಜಿಸ್ಟರ್ ಸೂಚನೆಯ ಮೂಲಕ ಒದಗಿಸಲಾಗಿದೆ” ಎಂದು US ಡಿಪಾರ್ಟೆಂಟ್ ಆಫ್ ಹೋಸ್ಟ್ಯಾಂಡ್ ಸೆಕ್ಯುರಿಟಿಯ ಹೇಳಿಕೆಯಲ್ಲಿ ತಿಳಿಸಲಾಗಿದೆ.

[t4b-ticker]
error: Content is protected !!