₹2,000 ಮುಖಬೆಲೆಯ ₹5,817 ಕೋಟಿ ಮೌಲ್ಯದ ನೋಟುಗಳು ಇನ್ನೂ ಚಲಾವಣೆಯಲ್ಲಿ: ಆರ್ ಬಿ ಐ

Picture of Savistara

Savistara

Bureau Report

ಮುಂಬೈ: ₹2,000 ಮುಖಬೆಲೆಯ ₹5,817 ಕೋಟಿ ಮೌಲ್ಯದ ನೋಟುಗಳು ಇನ್ನೂ ಚಲಾವಣೆಯಲ್ಲಿವೆ ಎಂದು ಶನಿವಾರ ಭಾರತೀಯ ರಿಸರ್ವ್ ಬ್ಯಾಂಕ್ (ಆ‌ಬಿಐ) ಬಿಡುಗಡೆ ಮಾಡಿದ ಪ್ರಕಟಣೆಯಿಂದ ತಿಳಿದುಬಂದಿದೆ.

₹2,000 ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುತ್ತಿರುವುದಾಗಿ 2023ರ ಮೇ 19ರಂದು ಆರ್‌ಬಿಐ ಘೋಷಿಸಿತ್ತು.2023ರ ಮೇ 19ರಂದು ವ್ಯವಹಾರ ಮುಕ್ತಾಯದ ಸಮಯದಲ್ಲಿ ₹3.56 ಲಕ್ಷ ಕೋಟಿ ಮೌಲ್ಯದ ₹2,000 ಮುಖಬೆಲೆಯ ನೋಟುಗಳು ಚಲಾವಣೆಯಲ್ಲಿದ್ದವು. 2025ರ ಅಕ್ಟೋಬರ್ 31ರ ವ್ಯವಹಾರ ಮುಕ್ತಾಯದ ಸಮಯದಲ್ಲಿ ₹5,817 ಕೋಟಿ ಮೌಲ್ಯದ ನೋಟುಗಳು ಚಲಾವಣೆಯಲ್ಲಿವೆ ಎಂದು ಆರ್‌ಬಿಐ ಪ್ರಕಟಣೆ ತಿಳಿಸಿದೆ.₹2,000 ಮುಖಬೆಲೆಯ ನೋಟುಗಳ ಪೈಕಿ ಶೇ 98.37 ರಷ್ಟು ಹಿಂತಿಪಡೆಯಲಾಗಿದೆ ಎಂದು ಅದು ಹೇಳಿದೆ.

2023ರ ಮೇ 19ರಿಂದ ಆರ್‌ಬಿಐನ 19 ವಿತರಣಾ ಕಚೇರಿಗಳಲ್ಲಿ ₹2,000 ನೋಟುಗಳ ವಿನಿಮಯ ಸೌಲಭ್ಯ ಲಭ್ಯವಿದೆ.

[t4b-ticker]
error: Content is protected !!