ಏಕದಿನ ಕ್ರಿಕೆಟ್‌ನಲ್ಲಿ 52ನೇ ಶತಕ ಬಾರಿಸಲು ವಿರಾಟ್ ಕೊಹ್ಲಿ ಸನ್ನದ್ಧ!

Picture of Savistara

Savistara

Bureau Report

ಭಾರತೀಯ ಕ್ರಿಕೆಟ್ ಸೂಪರ್‌ಸ್ಟಾ‌ರ್ ವಿರಾಟ್ ಕೊಹ್ಲಿ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಮುಂಬರುವ ಏಕದಿನ ಸರಣಿಯಲ್ಲಿ ಅನೇಕ ಮಹತ್ವದ ದಾಖಲೆಗಳನ್ನು ಮುರಿಯುವ ಸನಿಹದಲ್ಲಿದ್ದಾರೆ.

ಶತಕಗಳ ‘ಸಚಿನ್’ ದಾಖಲೆ ಮುರಿಯುವ ಸವಾಲು:

Advertisement

ವಿರಾಟ್ ಕೊಹ್ಲಿ ಸದ್ಯ ಏಕದಿನ ಸ್ವರೂಪದಲ್ಲಿ 51 ಶತಕಗಳನ್ನು ಗಳಿಸಿದ್ದಾರೆ. ಇದು ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಅತಿ ಹೆಚ್ಚು ಏಕದಿನ ಶತಕಗಳ ದಾಖಲೆಗೆ ಸರಿಸಮವಾಗಿದೆ. ಈ ಸರಣಿಯಲ್ಲಿ ಕೊಹ್ಲಿ ಒಂದು ಶತಕ ಬಾರಿಸಿದರೆ, ಅವರು ಸಚಿನ್ ಅವರನ್ನು ಹಿಂದಿಕ್ಕಿ ಒಂದೇ ಸ್ವರೂಪದಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

Advertisement

ಸಚಿನ್ ತೆಂಡೂಲ್ಕರ್ (ಟೆಸ್ಟ್) – 51 ಶತಕಗಳು

Advertisement

ವಿರಾಟ್ ಕೊಹ್ಲಿ (ಏಕದಿನ) – 51 ಶತಕಗಳು

Advertisement

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 28,000 ರನ್‌ಗಳ ಮೈಲಿಗಲ್ಲನ್ನು ತಲುಪಲು ‘ಕಿಂಗ್ ಕೊಹ್ಲಿ ಅವರಿಗೆ ಕೇವಲ 337 ರನ್‌ಗಳ ಅವಶ್ಯಕತೆಯಿದೆ.

Advertisement

ಸದ್ಯಕ್ಕೆ ವಿಶ್ವ ಕ್ರಿಕೆಟ್‌ನಲ್ಲಿ ಈ ಸಾಧನೆಯನ್ನು ಮಾಡಿರುವುದು ಕೇವಲ ಇಬ್ಬರು ದಿಗ್ಗಜರು:

Advertisement

ಸಚಿನ್ ತೆಂಡೂಲ್ಕರ್ ಮತ್ತು ಕುಮಾ‌ರ್ ಸಂಗಕ್ಕಾರ.

Advertisement

ಸಚಿನ್ ತೆಂಡೂಲ್ಕರ್ (ಭಾರತ) – 34357 ರನ್‌ಗಳು

ಕುಮಾರ್ ಸಂಗಕ್ಕಾರ (ಶ್ರೀಲಂಕಾ) – 28016 ರನ್‌ಗಳು

ವಿರಾಟ್ ಕೊಹ್ಲಿ (ಭಾರತ) – 27673 ರನ್‌ಗಳು

ಒಂದೇ ಸರಣಿಯಲ್ಲಿ ಈ ಮೈಲಿಗಲ್ಲನ್ನು ತಲುಪುವುದು ಕೊಹ್ಲಿಗೆ ಸವಾಲಾಗಿದ್ದರೂ, ಅವರು ಈ ಗಣ್ಯರ ಪಟ್ಟಿಯಲ್ಲಿ ಸೇರ್ಪಡೆಗೊಳ್ಳುವುದು ಬಹುತೇಕ ಖಚಿತ.

ದಕ್ಷಿಣ ಆಫ್ರಿಕಾ ನೆಲದಲ್ಲಿ ಪ್ರಭಾವಶಾಲಿ ಪ್ರದರ್ಶನ:

ದಕ್ಷಿಣ ಆಫ್ರಿಕಾ ವಿರುದ್ಧ ವಿರಾಟ್ ಕೊಹ್ಲಿ ಉತ್ತಮ ದಾಖಲೆ ಹೊಂದಿದ್ದಾರೆ.ಇಲ್ಲಿಯವರೆಗೆ, ಅವರು ದಕ್ಷಿಣ ಆಫ್ರಿಕಾ ವಿರುದ್ಧ ಆಡಿರುವ 31 ಏಕದಿನ ಪಂದ್ಯಗಳಲ್ಲಿ (29ಇನ್ನಿಂಗ್ಸ್ ) 65.39ರ ಅತ್ಯುತ್ತಮ ಸರಾಸರಿಯಲ್ಲಿ 1504 ರನ್‌ಗಳನ್ನು ಗಳಿಸಿದ್ದಾರೆ. ಕೇವಲ 32 ರನ್‌ಗಳನ್ನು ಗಳಿಸಿದರೆ, ಅವರು ದಕ್ಷಿಣ ಆಫ್ರಿಕಾದ ದಂತಕಥೆ ಜಾಕ್ವೆಸ್ ಕಾಲಿಸ್ (1535 ರನ್‌ಗಳು) ಅವರನ್ನು ಹಿಂದಿಕ್ಕಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರನಾಗಲಿದ್ದಾರೆ.

News Updates

ಐವರ್ನಾಡು – ನನ್ಯಡ್ಕ ಎಸ್.ಸಿ ಕಾಲೋನಿ ರಸ್ತೆ ಕಾಂಕ್ರೀಟೀಕರಣಕ್ಕೆ ಅನುದಾನ ಮಂಜೂರಾತಿಗೆ ಮನವಿ: ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ಬಿಜೆಪಿ ಶಕ್ತಿ ಕೇಂದ್ರದಿಂದ ಒತ್ತಾಯ | ಸರ್ವೆ ಕಾರ್ಯ ಪೂರ್ಣ, ಶೀಘ್ರ ಅನುದಾನ ಬಿಡುಗಡೆಗೊಳಿಸುವಂತೆ ಕೋರಿಕೆ

[t4b-ticker]
error: Content is protected !!