ಇನ್ನು ಸಿಮ್ ಇದ್ದರಷ್ಟೇ ಮೆಸೇಜಿಂಗ್ ಆ್ಯಪ್ ಬಳಕೆಗೆ ಅವಕಾಶ: ಕೇಂದ್ರ ಸರ್ಕಾರ ನಿರ್ದೇಶನ

Picture of Savistara

Savistara

Bureau Report

ಆ್ಯಪ್‌ಗಳ ದುರ್ಬಳಕೆ, ಸೈಬರ್ ಅಪರಾಧ ತಡೆಯಲು ನೂತನ ಕ್ರಮ 6 ತಾಸಿನ ಬಳಿಕ ವಾಟ್ಸಾಪ್ ವೆಬ್ ಲಾಗ್‌ಔಟ್‌: ಮತ್ತೆ ಲಾಗಿನ್ ಅಗತ್ಯ

ನವದೆಹಲಿ: ವಾಟ್ಸಾಪ್‌, ಟೆಲಿಗ್ರಾಂ, ಅರಟ್ಟೆ ನಂತಹಸಾಮಾಜಿಕ ಮಾಧ್ಯಮಗಳನ್ನು ಬಳಸುವ ಮೊಬೈಲ್ ಗಳಲ್ಲಿ, ಅವುಗಳ ಖಾತೆಗಳಿಗೆ ಲಿಂಕ್ ಆಗಿರುವ ಸಂಖ್ಯೆಯ ಸಿಮ್ ಇರುವುದನ್ನು ಕಡ್ಡಾಯ ಮಾಡುವಂತೆ ಕೇಂದ್ರ ಸರ್ಕಾರ, ಈ ಆ್ಯಪ್ ಗಳಿಗೆ ನಿರ್ದೇಶನ ನೀಡಿದೆ. ಸೈಬರ್ ಅಪರಾಧ ತಪ್ಪಿಸಲು ಈ ಕ್ರಮವನ್ನು ಸೂಚಿಸಲಾಗಿದೆ. 2025ರ ಹೊಸ ದೂರಸಂಪರ್ಕ ಸೈಬರ್ ಭದ್ರತಾ ತಿದ್ದುಪಡಿ ನಿಯಮಗಳ ಅಡಿ ಭಾರತದಲ್ಲಿ ಇಂತಹ ಬದಲಾವಣೆಗೆ ಆದೇಶಿಸಲಾಗಿದೆ. ಇದರ ಪ್ರಕಾರ 90 ದಿನಗಳೊಳಗಾಗಿ ವಾಟ್ಸಾಪ್‌, ಟೆಲಿಗ್ರಾಂ, ಸಿಗ್ನಲ್, ಅರಟ್ಟೆನಂತಹ ಆ್ಯಪ್‌ಗಳ ಬಳಕೆಗೆ ಸಿಮ್ ಕಾರ್ಡ್ ಇರುವುದು ಕಡ್ಡಾಯ. ಅಂತೆಯೇ,

ವಾಟ್ಸಾಪ್ ವೆಬ್‌ನಂತಹ ವೆಬ್‌ಸೈಟ್ ಮೂಲಕ ಲಾಗ್‌ಇನ್ ಆದರೆ, ಪ್ರತಿ 6 ಗಂಟೆಗೊಮ್ಮೆ ಅದು ತನ್ನಷ್ಟಕ್ಕೇ ಲಾಗ್‌ಔಟ್ ಆಗಲಿದೆ. ನಂತರ ಮತ್ತೊಮ್ಮೆ ಲಾಗ್‌ಇನ್ ಮಾಡಬೇಕಾಗುತ್ತದೆ. 120 ದಿನಗಳ ಒಳಗಾಗಿ ಇದರಪಾಲನಾವರದಿಯನ್ನು ಸಲ್ಲಿಸುವಂತೆಯೂ ಆ್ಯಪ್‌ಗಳಿಗೆ ಸೂಚನೆ ನೀಡಲಾಗಿದೆ.

ಉದ್ದೇಶವೇನು?: ಪ್ರಸ್ತುತ ಆ್ಯಪ್‌ಗಳಲ್ಲಿ ಲಾಗ್ಇನ್ ಆಗುವಾಗಷ್ಟೇ ಮೊಬೈಲ್ ಸಂಖ್ಯೆ ಕೇಳಲಾಗುತ್ತದೆ. ಬಳಿಕ, ಸಿಮ್ ಇಲ್ಲದೆಯೂ ಅವುಗಳನ್ನು ಬಳಸಬಹುದು. ಇದರಿಂದಾಗಿ ಸೈಬ‌ರ್ ಅಪರಾಧಿಗಳು, ದೇಶದ ಹೊರಗಿದ್ದು ಕೊಂಡು, ಸಿಮ್ ನಿಷ್ಕ್ರಿಯಗೊಳಿಸಿ ಆ್ಯಪ್‌ಗಳನ್ನು ಬಳಸುತ್ತಾರೆ. ಇದನ್ನು ತಪ್ಪಿಸಲು, ಹೊಸ ಕ್ರಮಕ್ಕೆ ಆದೇಶಿಸಲಾಗಿದೆ.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!