ನಂದಿನಿ ಪಾರ್ಲರ್ ಗಳಲ್ಲಿ ಬೇರೆ ಬ್ರಾಂಡ್ ಪ್ರಾಡಕ್ಟ್ ಇಡುವಂತಿಲ್ಲ, ಇಟ್ರೆ ಲೈಸೆನ್ಸ್ ಕ್ಯಾನ್ಸಲ್

Picture of Savistara

Savistara

Bureau Report

ನಂದಿನಿ ಪಾರ್ಲ‌್ರಗಳಲ್ಲಿ ಬೇರೆ ಬೇರೆ ಬ್ರಾಂಡ್ ಮಾರಾಟಕ್ಕೆ ಬ್ರೇಕ್ ಹಾಕಲು ಕೆಎಂಎಫ್ ಕಠಿಣ ನಿರ್ಧಾರಕ್ಕೆ ಮುಂದಾಗಿದ್ದು, ಲೈಸೆನ್ಸ್ ರದ್ದು ಮಾಡೋದಾಗಿ ಖಡಕ್‌ ಎಚ್ಚರಿಕೆ ನೀಡಿದೆ.ಶುದ್ಧತೆ ಹಾಗೂ ಗುಣಮಟ್ಟಕ್ಕೆ ಹೆಸರಾಗಿರುವ ನಂದಿನಿ ತುಪ್ಪದ ಹೆಸರಿನಲ್ಲಿ ನಕಲಿ ತುಪ್ಪ ಮಾರಾಟ ಮಾಡುತ್ತಿದ್ದ ಗ್ಯಾಂಗ್‌ ಬಂಧನದ ನಂತರ ಕೆಎಂಎಫ್ ಕಠಿಣ ನಿರ್ಧಾರಕ್ಕೆ ಮುಂದಾಗಿದ್ದು, ಮತ್ತಷ್ಟು ಖಡಕ್ ಆಗಿ ನಕಲಿ ಶೂರರ ಹೆಡೆಮುರಿ ಕಟ್ಟಲು ನಿರ್ಧರಿಸಿದೆ.

ಸಿಸಿಬಿ ಪೊಲೀಸರು ಮತ್ತು ಕೆಎಂಎಫ್‌ನ ಜಾಗೃತ ದಳ ನಡೆಸಿದ ಕಾರ್ಯಾಚರಣೆಯಲ್ಲಿ ನಕಲಿ ತುಪ್ಪದ ಜಾಲ ಬಲೆಗೆ ಬಿದ್ದಿತ್ತು. ಕೆಎಂಎಫ್‌ನಿಂದ ನಂದಿನಿ ತುಪ್ಪವನ್ನು ಖರೀದಿಸುತ್ತಿದ್ದ ಆರೋಪಿಗಳು, ಬಳಿಕ ತಮಿಳುನಾಡಿನ ತಿರುಪೂರ್ ಜಿಲ್ಲೆಗೆ ಕಳುಹಿಸಿ ಅಲ್ಲಿನ ಗೋದಾಮು ಒಂದರಲ್ಲಿ ಕಲಬೆರಕೆ ಮಾಡುತ್ತಿದ್ದರು. ಪ್ಯಾಕೇಟ್ ಒಂದೇ ರೀತಿಯಿದ್ದ ಕಾರಣ ಅವರ ಮೋಸ ಸಲೀಸಾಗಿ ನಡೆಯುತ್ತಿತ್ತು. ಹೀಗಾಗಿ ಸದ್ಯ ಇವೆಲ್ಲವನ್ನೂ ಸರಿ ಮಾಡಿಕೊಂಡು ಮತ್ತಷ್ಟು ಕಠಿಣ ನಿಯಮಗಳಿಗೆ ಕೆಎಂಎಫ್ ಮುಂದಾಗಿದೆ. ಅದರಲ್ಲಿ ಪ್ರಮುಖವಾಗಿರೋದು ನಂದಿನಿ ಪಾರ್ಲ‌್ರಗಳಲ್ಲಿ ಬೇರೆ ಬೇರೆ ಬ್ರಾಂಡ್ ಮಾರಾಟಕ್ಕೆ ಬ್ರೇಕ್ ಹಾಕಲು ಎಚ್ಚರಿಕೆ ನೀಡಿದೆ.

Advertisement

ನಂದಿನಿ ಬ್ರಾಂಡ್‌ಗೆ ಕೆಟ್ಟ ಹೆಸರು ತಂದ್ರೆ ಹುಷಾರ್. ಯಾವುದೇ ಕಾರಣಕ್ಕೂ ನಮ್ಮ ಹೆಮ್ಮೆಯ ಬ್ರಾಂಡ್‌ಗೆ ಕೆಟ್ಟ ಹೆಸರು ತರಲು ಬಿಡಲ್ಲ. ಈಗಾಗಲೇ ನಾವು ನಮ್ಮ ಪಾರ್ಲ‌್ರಗಳಲ್ಲಿ ಬೇರೆ ಬ್ರಾಂಡ್‌ಗಳಿಗೆ ಅವಕಾಶ ನೀಡಿಲ್ಲ. ಒಂದು ವೇಳೆ ಬೇರೆ ಬ್ರಾಂಡ್ ಮಾರಾಟ ಮಾಡಿದ್ರೆ ಎಚ್ಚರ. ನಂದಿನಿ ಹೊರತುಪಡಿಸಿ ಬೇರೆ ಬ್ರಾಂಡ್ ಮಾಡಿದ್ದಕ್ಕೆ ಈಗಾಗಲೇ ಕೆಲವು ಕಡೆ ನೋಟಿಸ್‌ ನೀಡಿದ್ದೇವೆ. ಇನ್ನೇಲೆ ಸಂಪೂರ್ಣ ಲೈಸೆನ್ಸ್ ರದ್ದು ಮಾಡ್ತೀವಿ ಎಂದು ಎಚ್ಚರಿಕೆ ನೀಡಿದ್ದಾರೆ.

Advertisement
News Updates

ಐವರ್ನಾಡು – ನನ್ಯಡ್ಕ ಎಸ್.ಸಿ ಕಾಲೋನಿ ರಸ್ತೆ ಕಾಂಕ್ರೀಟೀಕರಣಕ್ಕೆ ಅನುದಾನ ಮಂಜೂರಾತಿಗೆ ಮನವಿ: ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ಬಿಜೆಪಿ ಶಕ್ತಿ ಕೇಂದ್ರದಿಂದ ಒತ್ತಾಯ | ಸರ್ವೆ ಕಾರ್ಯ ಪೂರ್ಣ, ಶೀಘ್ರ ಅನುದಾನ ಬಿಡುಗಡೆಗೊಳಿಸುವಂತೆ ಕೋರಿಕೆ

[t4b-ticker]
error: Content is protected !!