ಪೈಲೆಟ್ ಗಳ ರಜಾ ನಿಯಮ ಸಡಿಲಿಸಿದ ಡಿಜಿಸಿಎ

Picture of Savistara

Savistara

Bureau Report

ಮುಂಬೈ: ಇಂಡಿಗೊ ವಿಮಾನ ಕಾರ್ಯಾಚರಣೆಯಲ್ಲಿ ಭಾರಿ ಅಡಚಣೆ ಉಂಟಾಗಿರುವ ಬೆನ್ನಲ್ಲೇ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ), ಪೈಲಟ್‌ಗಳ ರಜಾ ನಿಯಮಗಳನ್ನು ಸಡಿಲಿಸಿದೆ.

ಸಿಬ್ಬಂದಿ ಕರ್ತವ್ಯ ಅವಧಿ ಮಿತಿ (ಎಫ್‌ಡಿಟಿಎಲ್) ಮಾನದಂಡಗಳ ಪ್ರಕಾರ, ವಾರದ ವಿಶ್ರಾಂತಿ ಜೊತೆ ಯಾವುದೇ ರಜೆ ಹೊಂದಾಣಿಕೆ ಮಾಡಿಕೊಳ್ಳಲಾಗುವುದಿಲ್ಲ. ಅಂದರೆ ವಾರದ ವಿಶ್ರಾಂತಿ ಅವಧಿ ಮತ್ತು ರಜೆಗಳನ್ನು ಪ್ರತ್ಯೇಕವಾಗಿ ಪರಿಗಣಿಸಲಾಗುತ್ತದೆ.ಪೈಲಟ್‌ಗಳಲ್ಲಿ ಹೆಚ್ಚಿನ ಕೆಲಸದ ಒತ್ತಡವನ್ನು ಬಗೆಹರಿಸುವ ನಿಟ್ಟಿನಲ್ಲಿ ಈ ಬದಲಾವಣೆ ಮಾಡಲಾಗಿದೆ.ವಿಮಾನಯಾನ ಸಿಬ್ಬಂದಿ ವಾರದ ವಿಶ್ರಾಂತಿ ರಜೆಯನ್ನು ಬದಲಾಯಿಸಬಾರದು ಎಂಬ ನಿಬಂಧನೆಯನ್ನು ಹಿಂಪಡೆದುಕೊಳ್ಳಲು ಡಿಜಿಸಿಎ ನಿರ್ಧರಿಸಿದೆ.

ಎರಡನೇ ಹಂತದ ವಿಮಾನದ ಸಿಬ್ಬಂದಿ ಕರ್ತವ್ಯ ಅವಧಿ ಮಿತಿ ನಿಯಮಗಳ ಜಾರಿಯಿಂದಾಗಿ ಇಂಡಿಗೊ ವಿಮಾನಯಾನ ಸಂಸ್ಥೆಯು ಭಾರಿ ಪ್ರಮಾಣದ ಸಿಬ್ಬಂದಿ ಕೊರತೆ ಎದುರಿಸಿತ್ತು.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!