ಸುಳ್ಯ ನಗರದಲ್ಲಿ ‘ಜಲ್ ಜೀವನ್ ಮಿಷನ್ – ಹರ್ ಘರ್ ಜಲ್’ ಯೋಜನೆಯಡಿ ನಳ್ಳಿ ನೀರು ಸರಬರಾಜು ಟ್ರಯಲ್ ಆರಂಭವಾಗಿದೆ.
ಸುಳ್ಯ ನಗರದ ಬೊರುಗುಡ್ಡೆ, ಜಟ್ಟಿಪಳ್ಳ, ಕನಿಕರಪಳ್ಳ, ಬೊಳಿಯಮಜಲು, ಕೊಡಿಯಾಲ್ ಬೈಲು, ಅಮೈ ಪರಿಸರದ ಹಲವು ಭಾಗಗಳಲ್ಲಿ ಜಲ್ ಜೀವನ್ ಮಿಷನ್ ಯೋಜನೆಯಡಿ ಹೊಸ ನಳ್ಳಿ ನೀರು ಸರಬರಾಜಿನ ಟ್ರಯಲ್ ನಡೆದಿದ್ದುಕೇಂದ್ರ ಸರಕಾರದ ಮಹತ್ವಕಾoಕ್ಷೆಯ ಯೋಜನೆ ‘ಜಲ್ ಜೀವನ್ ಮಿಷನ್ – ಹರ್ ಘರ್ ಜಲ್’ ಯೋಜನೆಯು ಪ್ರತಿ ಮನೆಗೆ ಸಂಪರ್ಕದ ಮೂಲಕ ಶುದ್ಧ ಹಾಗೂ ಸುರಕ್ಷಿತ ಕುಡಿಯುವ ನೀರನ್ನು ಒದಗಿಸುವ ಮಹತ್ವದ ಗುರಿಯಾಗಿದೆ.ಕರ್ನಾಟಕದಲ್ಲಿ ಈ ಯೋಜನೆಯನ್ನು ‘ಮನೆ ಮನೆಗೆ ಗಂಗೆ’ ಎಂಬ ಹೆಸರಿನಡಿ ಜಾರಿಗೊಳಿಸಲಾಗುತ್ತಿದೆ ನಗರದಲ್ಲಿ ಈ ಯೋಜನೆಯ ಅನುಷ್ಠಾನದ ವೇಳೆ ಕೆಲವೊಂದು ಸ್ಥಳೀಯ ಸಮಸ್ಯೆಗಳು ಎದುರಾದರೂ,ರಸ್ತೆಗಳ ಅಗೆತ ಹಾಗೂ ಪೈಪ್‌ಲೈನ್ ಅಳವಡಿಕೆಯ ವೇಳೆ ಸಾರ್ವಜನಿಕರಿಗೆ ತೊಂದರೆಗಳಾಗಿದ್ದರೂ,ಸಾರ್ವಜನಿಕರ ಸಹಕಾರ,ಅಧಿಕಾರಿಗಳ ಪ್ರಯತ್ನದಿಂದ ಯೋಜನೆ ಸಾಕಾರವಾಗಿದೆ.
ಸುಳ್ಯ ನಗರದ ಬೊರುಗುಡ್ಡೆ, ಜಟ್ಟಿಪಳ್ಳ, ಕನಿಕರಪಳ್ಳ, ಬೊಳಿಯಮಜಲು, ಕೊಡಿಯಾಲ್ ಬೈಲು ಹಾಗೂ ಅಮೈ ಪರಿಸರದ ಹಲವು ಭಾಗಗಳಲ್ಲಿ ಜಲ್ ಜೀವನ್ ಮಿಷನ್ ಯೋಜನೆಯಡಿ ಹೊಸ ನಳ್ಳಿ ನೀರು ಸರಬರಾಜಿನ ಟ್ರಯಲ್ ಯಶಸ್ವಿಯಾದ ಬಳಿಕ ಒಂದು ವಾರದ ಬಳಿಕ ಶಾಶ್ವತವಾಗಿ ಮನೆ ಮನೆಗೆ ಶುದ್ಧ ಕುಡಿಯುವ ನೀರಿನ ಪೂರೈಕೆ ಆರಂಭವಾಗಲಿದೆ ಈ ಮೂಲಕ ಸಾರ್ವಜನಿಕರಿಗೆ ಅನುಕೂಲವಾಗಲಿದೆ.












































