ಸುಳ್ಯ 14 ಮಂಡಲಗಳಲ್ಲಿ ಜನವರಿ 18 ರಿಂದ ಪೆಬ್ರವರಿ 2 ರವರೆಗೆ ಹಿಂದೂ ಸಂಗಮ ಕಾರ್ಯಕ್ರಮ | ಪಂಚಪರಿವರ್ತನೆ ಮೂಲಕ ಸಂಘಟಿತ ಸಮಾಜಕ್ಕೆ ಪಣ

Picture of Savistara

Savistara

Bureau Report

ಜಗತ್ತಿನ ಅತೀ ದೊಡ್ಡ ಸಾಮಾಜಿಕ ಸಂಘಟನೆ ಅರೆಸೆಸ್ ಕಳೆದ ನೂರು ವರ್ಷಗಳಲ್ಲಿ ಅನೇಕ ಸಾಮಾಜಿಕ ಪರಿವರ್ತನೆ ಮಾಡುತ್ತ ಬಂದಿದ್ದು ಇದೀಗ ಶತಾಬ್ದಿ ವರ್ಷ ದ ಹಿನ್ನಲೆ ಪಂಚ ಪರಿವರ್ತನೆ ಧ್ಯೇಯದೊಂದಿಗೆ ಹಿಂದೂ ಸಂಗಮ ಕಾರ್ಯಕ್ರಮ ವನ್ನು ದೇಶದ್ಯಾoತ ಹಮ್ಮಿಕೊಂಡಿದೆ. ಐದು ಅಂಶಗಳ ಪಂಚ ಪರಿವರ್ತನೆ ಮುಖ್ಯವಾಗಿ “ಸಾಮರಸ್ಯ, ಕುಟುಂಬ ಪ್ರಬೋಧನಾ, ಪರಿಸರ ಸಂರಕ್ಷಣೆ, ಸ್ವದೇಶಿ ಜೀವನಶೈಲಿ ಹಾಗೂ ನಾಗರಿಕ ಶಿಷ್ಟಾಚಾರ ಪಾಲನೆ. ಈ ಹಿನ್ನೆಲೆಯಲ್ಲಿ ಸಾಮರಸ್ಯ’ ಎಂಬ ತತ್ವವನ್ನು ವ್ರತದಂತೆ ಪಾಲಿಸಬೇಕೆಂಬುದು ಸಂಘದ ನಿಲುವಾಗಿದೆ. ದೇವಸ್ಥಾನ, ಸ್ಮಶಾನ, ಜಲಮೂಲಗಳ ಬಳಕೆ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಜಾತೀ ಯ ತೆ ಸಲ್ಲ. ಜಾತಿ ಮೀರಿದ ಬಾಂಧವ್ಯ ಸಮಾಜದಲ್ಲಿ ಬೆಳೆಯಬೇಕೆಂಬುದು ಈ ಪೈಕಿ ಮೊದಲನೆಯದಾಗಿದೆ.ಎರಡನೆಯದಾಗಿ “ಕುಟುಂಬ ಪ್ರಬೋಧನಾ’. ಸಮಾಜದಲ್ಲಿ ಮೌಲ್ಯಗಳು ಶಿಥಿಲಗೊಳ್ಳುತ್ತಿವೆ ಎಂಬ ಮಾತು ಎಲ್ಲೆಡೆ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ 6 ಅಂಶಗಳ ಮೂಲಕ ಭಾರತೀಯ ಕುಟುಂಬ ಸಂಸ್ಕಾರದ ಮರು ಸ್ಥಾಪನೆ ಸಂಘದ ಉದ್ದೇಶವಾಗಿದೆ. ಭಾಷಾ (ಮಾತೃ ಭಾಷೆ ಪಾಲನೆ), ಭೂಷ (ಭಾರತೀಯ ವಸ್ತ್ರ ಪದ್ಧತಿ), ಭಜನ್ (ಆರಾಧನಾ ವಿಧಾನ), ಭೋಜನ (ಭಾರತೀಯ ಆಹಾರ ಪದ್ಧತಿ), ಭ್ರಮಣ್ ( ಕೌಟುಂಬಿಕ ಪ್ರವಾಸ) ಹಾಗೂ ಭವನ ( ಭಾರತೀಯ ಕುಟುಂಬ ಕಲ್ಪನೆ) ಇದರ ಭಾಗವಾಗಿದೆ.ಪರಿಸರ ಸಂರಕ್ಷಣೆ 3ನೇ ಅಂಶವಾಗಿದ್ದು, ಸಸ್ಯ ಪಾಲನೆ, ಜಲ ಸಂರಕ್ಷಣೆ ಹಾಗೂ ಪ್ಲಾಸ್ಟಿಕ್ ಹಠಾವೋ ಇದರಲ್ಲಿ ಸೇರುತ್ತದೆ. 4ನೇ ವಿಚಾರ ಸ್ವದೇಶಿ ಜೀವನ ಶೈಲಿಗೆ ಸಂಬಂಧಪಟ್ಟಿದ್ದು, ಇದರಲ್ಲಿ ಮಾತೃಭಾಷಾ ಶಿಕ್ಷಣವೂ ಸೇರಿದೆ. 5ನೇಯದು ಸಂಘದ ದೃಷ್ಟಿಯಲ್ಲಿ ಅತ್ಯಂತ ಮಹತ್ವಪೂರ್ಣವಾಗಿದ್ದು, ಸಂವಿಧಾನದಲ್ಲಿ ಉಲ್ಲೇಖಿತವಾದ ಮೂಲಭೂತ ಕರ್ತವ್ಯದ ಪಾಲನೆಯೂ ಸೇರಿದಂತೆ ಸಮಾಜದಲ್ಲಿ ನಾಗರಿಕ ಶಿಷ್ಟಾಚಾರ ಹಾಗೂ ನಾವೇ ಮಾಡಿದ ಕಾನೂನುಗಳ ಸ್ವಯಂ ಪಾಲನೆ ಸೇರಿದೆ ಈ ಎಲ್ಲಾ ಅಂಶವನ್ನಿಟ್ಟುಕೊಂಡು ಸಮಾಜದ ಜಾಗೃತಿ ಹಿಂದೂ ಸಂಗ ಉದ್ದೇಶವಾಗಿದೆ. ಸುಳ್ಯ ತಾಲೂಕಿನ 14 ಮಂಡಲ ಗಳಲ್ಲಿ ಈ ಕಾರ್ಯಕ್ರಮ ಜನವರಿ 18 ರಿಂದ ಪೆಬ್ರವರಿ 2 ರವರೆಗೆ ನಡೆಯಲಿದೆ

[t4b-ticker]
error: Content is protected !!