ಸಂಘದ ಉದ್ದೇಶವೇ ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರ ನಿರ್ಮಾಣದ ಗುರಿ ಹೊಂದಲಾಗಿದೆ.ಸಂಘಟನೆ ಇರುವುದೇ ಕಲಿಯುಗದ ಶಕ್ತಿ. ಸಂಘಕ್ಕೆ ಬಂದ ವ್ಯಕ್ತಿ ಅವನು ಬೆಳೆಯುತ್ತಾನೆ, ಅವನಿಂದ ಮನೆ ಬೆಳಗುತ್ತದೆ, ಸಮಾಜ ಬೆಳಗುವಂತಾಗುತ್ತದೆ ಎಂದು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಹಿರಿಯ ಪ್ರಚಾರಕ, ವಿಕ್ರಮ ಪತ್ರಿಕೆಯ ಗೌರವ ಸಂಪಾದಕ ನಾ.ನಾಗರಾಜ್ ಅವರು ಹೇಳಿದರು.ಅವರು ಗುತ್ತಿಗಾರಿನಲ್ಲಿ ಜ.೧೮ ರಂದು ನಡೆದ ಹಿಂದೂವಿನ ಮನದೊಳು ವಿಶ್ವಗುರುವಿನ ಪಥದೊಳು ಎಂಬ ಧೈಯ ವಾಕ್ಯದೊಂದಿಗೆ ನಡೆದ ಹಿಂದೂ ಸಂಗಮ ಕಾರ್ಯಕ್ರಮ ಉದ್ದೇಶಿಸಿ ಮಾತನಾಡುತಿದ್ದರು.
ಆರ್ ಎಸ್ ಎಸ್ ನ೧೦೦ ವರ್ಷದ ಪ್ರಚಾರ ಮಾಡುವ ಕಾರ್ಯಕ್ರಮಗಳನ್ನು ನಾವು ಮಾಡುತ್ತಿಲ್ಲ, ಪಥ ಸಂಚಲನ ಮಾಡಿ ವಿಶ್ವ ರೂಪ ದರ್ಶನ ಮಾಡುತ್ತದೆ ಎಂದರು.ಹಿಂದೂ ಸಂಗಮ ತಾಲ್ಲೂಕು ಸಮಿತಿ ಅಧ್ಯಕ್ಷ ಎಂ.ಬಿ ಸದಾಶಿವ ಮಾತನಾಡಿ, ದೇಶದ ಐಕ್ಯತೆಗೆ ಕಾರಣ ಈ ದೇಶದ ಒಗ್ಗೂಡುವಿಕೆಯಾಗಿದೆ.ಸಮಾನತೆ ಎಂಬ ಸೂತ್ರದಂತೆ ನಾವು ಬೆಳೆಯುವ ದೇಶದಲ್ಲಿ ಪ್ರತಿದಿನ ೨೬ ಸಾವಿರ ಟನ್ ಪ್ಲಾಸ್ಟಿಕ್ ಉತ್ಪಾದನೆ ಆಗುತ್ತಿದೆ ಶೇ ೮ ಪ್ಲಾಸ್ಟಿಕ್ ಅಷ್ಟೆ ಮರುಬಳಕೆ ಆಗುತ್ತಿದೆ ಅಷ್ಟೆ. ನೆಲ, ಜಲ, ಗಾಳಿ ರಕ್ಷಿಸಿ ಪರಿಸರ ಉಳಿಸುವ ಕೆಲಸ ನಾವುಗಳು ಮಾಡಬೇಕು ಎಂದ ಅವರು ದೇಶದಲ್ಲಿ ವಿಚ್ಚೆದನ ದಂತಹ ಗಂಭೀರ ಸಮಸ್ಯೆ ಇತ್ತೀಚೆಗೆ ಹೆಚ್ಚಾಗುತ್ತಿದೆ. ದಾರಿ ತಪ್ಪುತ್ತಿರುವ ಕೌಟುಂಬಿಕ ವ್ಯವಸ್ಥೆಯನ್ನು ಮತ್ತೆ ಸರಿ ಮಾಡಬೇಕಾದರೆ ಇಂತಹ ಅನುಭವಯುತ ಸಂಘಟನೆಯಿಂದ ಮಾತ್ರ ಸಾಧ್ಯ ಎಂದರು. ಒಂದು ದೇವಸ್ಥಾನದ ಮೊಕೇಸರನಾಗಿರುವ ನಾನು ಹಿಂದೂ ಸಂಗಮ ದಲ್ಲಿ ಪಾಲ್ಗೊಳ್ಳದೇ ಮತ್ಯಾವುದರಲ್ಲಿ ಭಾಗವಹಿಸಲು ಸಾದ್ಯ ಎಂದು ತಮ್ಮನ್ನು ಪ್ರಶ್ನಿಸುವವರಿಗೆ ಉತ್ತರಿಸಲು ಬಯಸುತ್ತೇನೆ ಎಂದರು.ಆರಂಭದಲ್ಲಿ
ಮುತ್ತಪ್ಪ ನಗರದಿಂದ ಆರಂಭವಾದ ಅದ್ದೂರಿ ಮೆರವಣಿಗೆಗೆ ನಿವೃತ್ತ ಶಿಕ್ಷಕ ಶಿವರಾಮ ಶಾಸ್ತ್ರೀ, ಚಾಲನೆ ನೀಡಿದರು. ವೇದಿಕೆಯಲ್ಲಿ ಹಿರಿಯರಾದ ಬೆಳ್ಯಪ್ಪ ಗೌಡ, ಶಿವರಾಮ ಶಾಸ್ತ್ರೀ, ರಮೇಶ್ ಮೆಟ್ಟಿನಡ್ಕ, ಚಂದ್ರಮತಿ ಪೂಂಬಾಡಿ, ನಾಟಿ ವೈದ್ಯೆ ಸೀತಮ್ಮ, ಶ್ರೀಕಾಂತ್ ಮಾವಿನಕಟ್ಟೆ ಉಪಸ್ಥಿತರಿದ್ದರು.
ಸಭೆಯಲ್ಲಿ ವಾರದ ಒಂದು ದಿನ ಒಂದು ಹಿಂದೂವಿನ ಮನೆಯಲ್ಲಿ ಕನಿಷ್ಠ ಹತ್ತು ನಿಮಿಷಗಳ ಭಜನಾ ಸಂಕೀರ್ತನ ನಡೆಸುವ ಬಗ್ಗೆ, ಪ್ಲಾಸ್ಟಿಕ್ ಮುಕ್ತ ಕಾರ್ಯಕ್ರಮದ ಅಂಗವಾಗಿ ವಳಲಂಬೆ ಭಾಗದಲ್ಲಿ ಪ್ರತಿ ಮನೆಗಳಿಗೆ ಚೀಲ ವಿತರಿಸಿ ಪ್ಲಾಸ್ಟಿಕ್ ಮುಕ್ತ ಮಾಡುವ ನಿರ್ಣಯ ಕೈಗೊಳ್ಳಲಾಯಿತು.
ಶ್ರೀಕಾಂತ್ ಮಾವಿನಕಟ್ಟೆ ಪ್ರಸ್ತಾವಿಕ ಮಾತುಗಳನ್ನಾಡಿದರು. ಜಯಪ್ರಕಾಶ್ ಮೊಗ್ರ ಸ್ವಾಗತಿಸಿ, ಚಂದ್ರಶೇಖರ ಬಾಳುಗೋಡು ವಂದಿಸಿದರು. ಕಿಶೋರ್ ಕುಮಾರ್ ಬೊಮ್ಮದೇರೆ ಕಾರ್ಯಕ್ರಮ ನಿರೂಪಿಸಿದರು.












































