ತಮಿಳುನಾಡು ಎಐಎಡಿಎಂಕೆ ಪ್ರಣಾಳಿಕೆ ಬಿಡುಗಡೆ | ಅಧಿಕಾರಕ್ಕೆ ಬಂದರೆ ಪುರುಷರಿಗೂ ಬಸ್ ಫ್ರೀ ಫ್ರೀ

Picture of Savistara

Savistara

Bureau Report

ತಮಿಳುನಾಡು ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ರಂಗೇರಿದ್ದು, ಪ್ರಮುಖ ವಿರೋಧ ಪಕ್ಷವಾದ ಎಐಎಡಿಎಂಕೆ (AIADMK) ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.ಮತದಾರರನ್ನು ಸೆಳೆಯಲು ಬಂಪ‌ರ್ ಕೊಡುಗೆಗಳನ್ನು ಘೋಷಿಸಿರುವ ಎಐಎಡಿಎಂಕೆ, ಪುರುಷರಿಗೂ ಉಚಿತ ಬಸ್ ಪ್ರಯಾಣ ಸೇರಿದಂತೆ ಐದು ಪ್ರಮುಖ ‘ಗ್ಯಾರಂಟಿ’ಗಳನ್ನು ನೀಡಿದೆ.

ಪ್ರಣಾಳಿಕೆಯ ಪ್ರಮುಖ ಭರವಸೆಗಳು:

ಉಚಿತ ಬಸ್‌ ಪ್ರಯಾಣ: ಮಹಿಳೆಯರ ಜೊತೆಗೆಪುರುಷರಿಗೂ ನಗರ ಬಸ್‌ಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯ.

ಮಾಸಿಕ ಧನಸಹಾಯ: ಪಡಿತರ ಚೀಟಿ ಹೊಂದಿರುವಪ್ರತಿ ಕುಟುಂಬಕ್ಕೆ ತಿಂಗಳಿಗೆ 2,000 ರೂ. ನಗದು ಸಹಾಯ.

ಉದ್ಯೋಗ ಖಾತ್ರಿ ವಿಸ್ತರಣೆ: ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯಡಿ ಕೆಲಸದ ಅವಧಿಯನ್ನು 125 ದಿನಗಳಿಂದ 150 ದಿನಗಳಿಗೆ ಹೆಚ್ಚಳ.

ನಗರ ವಸತಿ ಯೋಜನೆ: ನಗರ ಪ್ರದೇಶಗಳಲ್ಲಿ ವಸತಿ ರಹಿತರಿಗೆ ಮನೆ ಕಟ್ಟಿಕೊಡುವ ಭರವಸೆ.

ದ್ವಿಚಕ್ರ ವಾಹನ ಸಬ್ಸಿಡಿ: 5 ಲಕ್ಷ ಮಹಿಳೆಯರಿಗೆ ದ್ವಿಚಕ್ರ ವಾಹನ ಖರೀದಿಸಲು ತಲಾ 25,000 ರೂ.ಗಳ ರಿಯಾಯಿತಿ (ಸಬ್ಸಿಡಿ).

ಇದು ನಮ್ಮ ಪ್ರಣಾಳಿಕೆಯ ನಕಲು: ಡಿಎಂಕೆ ಟೀಕೆ

ಎಐಎಡಿಎಂಕೆ ಪ್ರಣಾಳಿಕೆಯನ್ನು ಆಡಳಿತಾರೂಢ ಡಿಎಂಕೆ (DMK) ಕಟುವಾಗಿ ಟೀಕಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಎಂಕೆ ಸಂಸದ ಟಿ.ಆ‌ರ್.ಬಿ ರಾಜಾ, “ಎಐಎಡಿಎಂಕೆಯು ನಮ್ಮ ಯೋಜನೆಯನ್ನೇ ಕಾಪಿ ಮಾಡಿದೆ. ಇದು ಡಿಎಂಕೆ ಪ್ರಣಾಳಿಕೆಯ ಸಂಪೂರ್ಣ ನಕಲು” ಎಂದು ಲೇವಡಿ ಮಾಡಿದ್ದಾರೆ.

News Updates

ನಿಮ್ಮಪ್ಪನಿಂದಲೇ ಆರ್‌ಎಸ್‌ಎಸ್‌ಗೆ ಏನು ಮಾಡೋಕೆ ಆಗಿಲ್ಲ, ನಿಮ್ಮಿಂದ ಆಗುತ್ತಾ? ಅಧಿಕಾರದಲ್ಲಿ ಮೆರೆದವರಿಗೆ ಬಂಗಾಳದ ಜನ್ನು ಅಟ್ಟಾಡಿಸಿ ಹೊಡೆಯುತ್ತಿದ್ದಾರೆ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಸಿಟಿ ರವಿ ವಾಗ್ದಾಳಿ

[t4b-ticker]
error: Content is protected !!