ಕರಾವಳಿಗೂ ಯುದ್ಧ ಬಿಸಿ: ಮಂಗಳೂರಿನಿಂದ ಗಲ್ಫ್ ರಾಷ್ಟ್ರಗಳಿಗೆ ತೆರಳುವ ಎಲ್ಲ ವಿಮಾನ ಸೇವೆ ರದ್ದು

Picture of Savistara

Savistara

Bureau Report

ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಯುದ್ಧ ಕಾರ್ಮೋಡ ಕವಿದಿರುವ ಹಿನ್ನೆಲೆಯಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಗಲ್ಫ್ ರಾಷ್ಟ್ರಗಳಿಗೆ ತೆರಳುವ ವಿಮಾನ ಸಂಚಾರ ಮಾರ್ಚ್ 4ರವರೆಗೆ ರದ್ದುಗೊಂಡಿದೆ.

ಪ್ರಯಾಣಿಕರ ಸುರಕ್ಷತೆ ಗಮನದಲ್ಲಿಟ್ಟುಕೊಂಡು ಈ ನಿರ್ಧಾರಕ್ಕೆ ಬರಲಾಗಿದೆ.

ಮಾರ್ಚ್ 3 ರಂದು ಮಂಗಳೂರು-ದೋಹಾ (IX 821), ದೋಹಾ-ಮಂಗಳೂರು (IX 822), ಮಂಗಳೂರು-ದುಬೈ (IX 813), ಮಂಗಳೂರು-ಕುವೈತ್‌ (IX 851), ಮಂಗಳೂರು-ದಮ್ಮಾಮ್ (IX 847), ಮತ್ತು ಮಂಗಳೂರು-ಅಬುಧಾಬಿ ವಿಮಾನಗಳನ್ನು ರದ್ದುಗೊಳಿಸಲಾಗಿದ್ದು, ಮಾರ್ಚ್ 4 ರಂದು ದುಬೈ ಮಂಗಳೂರು (IX 814), ಕುವೈತ್-ಮಂಗಳೂರು (IX 852), ದಮ್ಮಾಮ್-ಮಂಗಳೂರು (IX 848), ಮತ್ತು ಅಬುಧಾಬಿ-ಮಂಗಳೂರು (IX 816) ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದುವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ. ಗಲ್ಫ್ ರಾಷ್ಟ್ರಗಳಿಗೆ ಪ್ರಯಾಣಿಸಲು ಯೋಜಿಸಿದ್ದ ಪ್ರಯಾಣಿಕರು ಹೆಚ್ಚಿನ ಮಾಹಿತಿಗಾಗಿ ಆಯಾ ವಿಮಾನಯಾನ ಸಂಸ್ಥೆಗಳನ್ನು ಸಂಪರ್ಕಿಸಲು ಸೂಚಿಸಲಾಗಿದೆ.

[t4b-ticker]
error: Content is protected !!