ಕರ್ನಾಟಕ BJP ಹೊಸ ಪ್ರಭಾರಿಗಳ ನೇಮಕ: ಮಂಗಳೂರು, ಮೈಸೂರು, ದಾವಣಗೆರೆ ಸೇರಿ 10 ವಿಭಾಗಕ್ಕೆ 21 ಮುಖಂಡರ ಆಯ್ಕೆ

Picture of Savistara

Savistara

Bureau Report

ಬೆಂಗಳೂರು: ಕರ್ನಾಟಕ ಬಿಜೆಪಿ 10 ವಿಭಾಗಗಳಿಗೆ ಹೊಸ ಪ್ರಭಾರಿಗಳು ಹಾಗೂ ಸಹ ಪ್ರಭಾರಿಗಳನ್ನು ನೇಮಕ ಮಾಡಿದೆ. ಮಂಗಳೂರು, ಮೈಸೂರು, ದಾವಣಗೆರೆ ಸೇರಿ ವಿವಿಧ ವಿಭಾಗಗಳಿಗೆ 21 ಮುಖಂಡರ ಆಯ್ಕೆ ಮಾಡಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆದೇಶ ಹೊರಡಿಸಿದ್ದಾರೆ.

ಬಿಜೆಪಿಯು ಕರ್ನಾಟಕದಲ್ಲಿ 37 ಸಂಘಟನಾತ್ಮಕ ಜಿಲ್ಲೆಗಳಿಗಳಿವೆ. ಅಂತೆಯೇ ಮೈಸೂರು, ಮಂಗಳೂರು, ಶಿವಮೊಗ್ಗ, ಧಾರವಾಡ, ಬೆಳಗಾವಿ, ಕಲಬುರಗಿ, ಬಳ್ಳಾರಿ, ದಾವಣಗೆರೆ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಎಂಬ 10 ವಿಭಾಗಗಳನ್ನು ರಚಿಸಿಕೊಂಡಿದೆ. ವಿವಿಧ ವಿಧಾನಸಭಾ ಕ್ಷೇತ್ರಗಳು, ಲೋಕಸಭಾ ಕ್ಷೇತ್ರಗಳು, ಜಿಲ್ಲಾ, ತಾಲೂಕು ಪಂಚಾಯತಿಗಳು ಈ ವಿಭಾಗಗಳ ವ್ಯಾಪ್ತಿಗೆ ಬರುತ್ತವೆ. ಸದ್ಯ ಇವುಗಳಿಗೆ ಹೊಸ ಪ್ರಭಾರಿಗಳ ನೇಮಕ ಮಾಡಲಾಗಿದೆ.

ಬಿಜೆಪಿ 10 ವಿಭಾಗಗಳಿಗೆ ಹೊಸ ನೇಮಕವಾದ ಪ್ರಭಾರಿಗಳು – ಸಹ ಪ್ರಭಾರಿಗಳು

ಈ ಬಗ್ಗೆ ಟ್ವೀಟ್‌ ಮಾಡಿರುವ ಕರ್ನಾಟಕ ಬಿಜೆಪಿ, “ರಾಜ್ಯಾಧ್ಯಕ್ಷರಾದ ಬಿವೈ ವಿಜಯೇಂದ್ರ ಅವರು 10 ವಿಭಾಗಗಳಿಗೆ ವಿಭಾಗ ಪ್ರಭಾರಿ, ಸಹಪ್ರಭಾರಿಗಳನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ ” ಎಂದು ತಿಳಿಸಿದೆ.

ಗ್ರಾಮ, ಜಿಲ್ಲಾ ತಾಲೂಕು ಪಂಚಾಯತಿ ಚುನಾವಣೆಗೆ ತಯಾರಿ

ಮುಂದಿನ ಮೂರು ತಿಂಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಸರ್ಕಾರ ಮುಂದಾಗಿದೆ. ಅದಕ್ಕೆ ಅಗತ್ಯ ತಯಾರಿಯನ್ನು ರಾಜ್ಯ ಚುನಾವಣಾ ಆಯೋಗ ಮಾಡಿಕೊಳ್ಳುತ್ತಿದೆ. ಸದ್ಯ ಕಾಂಗ್ರೆಸ್‌ ಸ್ಥಳೀಯ ಮುಖಂಡರಿಗೆ ಕರೆಕೊಟ್ಟಿದ್ದು, ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಆರಂಭಿಸಿದೆ. ಇತ್ತ ಬಿಜೆಪಿ ಕೂಡ ಸ್ಥಳೀಯ ಚುನಾವಣೆ ಗೆಲ್ಲಲೇ ಬೇಕು ಎಂದು ಪಣತೊಟ್ಟಿದ್ದು, ಸ್ಥಳೀಯ ನಾಯಕತ್ವವನ್ನು ಬಿಗಿ ಮಾಡುತ್ತಿದೆ. ಅದರ ಭಾಗವಾಗಿ ವಿಭಾಗಗಳ ಪ್ರಭಾರಿಗಳು, ಸಹ ಪ್ರಭಾರಿಗಳ ನೇಮಕ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

[t4b-ticker]
error: Content is protected !!