ಹಾರ್ಮುಜ್ ಜಲಸಂಧಿಯ ಮೇಲೆ ಟ್ರಂಪ್ ಕಣ್ಣು: ಶೀಘ್ರದಲ್ಲೇ ಓಪನ್ ಮಾಡುವೆ ಎಂದ ದೊಡ್ಡಣ್ಣ!

Picture of Savistara

Savistara

Bureau Report

ಮಧ್ಯಪ್ರಾಚ್ಯ ಯುದ್ಧ 15ನೇ ದಿನಕ್ಕೆ ಕಾಲಿಟ್ಟಿದ್ದು, ಸದ್ಯಕ್ಕೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಈಗಾಗಲೇ ಇರಾನ್ ವಿರುದ್ಧ ದಾಳಿ ಮೇಲೆ ದಾಳಿ ನಡೆಸುತ್ತಿರುವ ಅಮೆರಿಕ ಮತ್ತೊಂದು ಎಚ್ಚರಿಕೆಯನ್ನು ನೀಡಿದೆ.ಹಾರ್ಮುಜ್ ಜಲಸಂಧಿಯ ಮೇಲೆ ಕಣ್ಣಿಟ್ಟಿರುವ ಟ್ರಂಪ್, ಶೀಘ್ರದಲ್ಲೇ ಓಪನ್ ಆಗಲಿದೆ ಎಂದು ತಿಳಿಸಿದ್ದಾರೆ.ನಾವು ಹಾರ್ಮುಜ್ ಜಲಸಂಧಿಯನ್ನು ತೆರೆಯಲು ಏನು ಬೇಕಾದರೂ ಮಾಡಲು ಸಿದ್ದ. ಅದಕ್ಕಾಗಿ ಅಲ್ಲಿನ ಕರಾವಳಿ ಪ್ರದೇಶಕ್ಕೆ ದಾಳಿ ನಡೆಸಲು ರೆಡಿಯಾಗಿಯೇ ಇದ್ದೇವೆ ಎಂದು ಟ್ರಂಪ್‌ ಎಚ್ಚರಿಕೆ ನೀಡಿದ್ದಾರೆ.ಈ ಬಗ್ಗೆ ಟ್ರುತ್ ಸೋಷಿಯಲ್‌ನಲ್ಲಿ ಪೋಸ್ಟ್ ಮಾಡಿದ ಟ್ರಂಪ್‌, ಶೀಘ್ರದಲ್ಲೇ ಹಾರ್ಮುಜ್ ಜಲಸಂಧಿಯನ್ನು ಸುರಕ್ಷಿತವಾಗಿ ಮುಕ್ತಗೊಳಿಸುತ್ತೇವೆ. ಇದಕ್ಕಾಗಿ ಚೀನಾ, ಫ್ರಾನ್ಸ್, ಜಪಾನ್, ದಕ್ಷಿಣ ಕೊರಿಯಾ ಮತ್ತು ಯುನೈಟೆಡ್ ಕಿಂಗ್‌ಡಮ್ (ಇಂಗ್ಲೆಂಡ್) ಸೇರಿದಂತೆ ಇತರೆ ದೇಶಗಳಿಗೆ ಹಾರ್ಮುಜ್‌ ಜಲಸಂಧಿಯ ಪ್ರದೇಶಕ್ಕೆ ಹಡಗುಗಳನ್ನು ಕಳುಹಿಸುವಂತೆ ಟ್ರಂಪ್‌ ಸಂದೇಶ ನೀಡಿದ್ದಾರೆ.

ಈಗಾಗಲೇ ನಾನು ಇರಾನ್ 100% ಮಿಲಿಟರಿ ಸಾಮರ್ಥ್ಯವನ್ನು ನಾಶಪಡಿಸಿದೆ, ಆದರೂ ಕೂಡ ಅವರ ನಡೆಯನ್ನು ನಂಬಲು ಸಾಧ್ಯವಿಲ್ಲ. ಮುಂದೆಯೂ ಡೋನ್‌ಗಳು, ಅಲ್ಪ-ಶ್ರೇಣಿಯ ಕ್ಷಿಪಣಿಗಳನ್ನು ಬಳಸಿಕೊಂಡು ಸಣ್ಣ ಪ್ರಮಾಣದ ದಾಳಿ ನಡೆಸುವ ಸಾಧ್ಯತೆಯಿದೆ. ಹೀಗಾಗಿ ಜಲಸಂಧಿ ವಿಚಾರದಲ್ಲಿ ಇರಾನ್‌ನ ಬೆದರಿಕೆಗಳನ್ನು ಹಿಮ್ಮೆಟ್ಟಿಸಲು ಇತರ ರಾಷ್ಟ್ರಗಳ ಸಹಾಯವನ್ನು ಟ್ರಂಪ್‌ ಕೇಳಿಕೊಂಡಿದ್ದಾರೆ.

[t4b-ticker]
error: Content is protected !!