ದಕ್ಷಿಣ ಕನ್ನಡ-ಉಡುಪಿ ಭಾಗದಲ್ಲಿ 8-10% ಎಳೆ ಅಡಿಕೆ ಉದುರಿದೆ…!, ರಾಜ್ಯದಲ್ಲಿ ಎಳೆ ಚುಕ್ಕಿ ರೋಗ ದಿಂದ 88,559 ಹೆಕ್ಟೇ‌ರ್ ಹಾನಿ

Picture of Savistara

Savistara

Bureau Report

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಕೆಲ ಭಾಗಗಳಲ್ಲಿ ಎಳೆ ಅಡಿಕೆ (ನಳ್ಳಿ) ಉದುರುವ ಸಮಸ್ಯೆ ಕಾಣಿಸಿಕೊಂಡಿದ್ದು, ಅಂದಾಜು 8 ರಿಂದ 10 ಶೇಕಡಾ ಮಟ್ಟಿಗೆ ಬೆಳ ನಷ್ಟವಾಗಿದೆ ಎಂದು ತೋಟಗಾರಿಕೆ ಇಲಾಖೆಯ ಅಂದಾಜು ತಿಳಿಸಿದೆ.

ಅಡಿಕೆ ಬೆಳೆಯ ಸಮಸ್ಯೆಯ ಬಗ್ಗೆ ವಿಧಾನಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ ಅವರು ಸದನದಲ್ಲಿ “ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಕೆಲ ಭಾಗಗಳಲ್ಲಿ ಎಳೆ ಅಡಿಕೆ (ನಳ್ಳಿ) ಉದುರುವ ಸಮಸ್ಯೆ ಉಂಟಾಗಿದ್ದು ಅಂದಾಜು ಎಷ್ಟು ಪ್ರಮಾಣದ ಬೆಳ ನಷ್ಟವಾಗಿದ,; ಎಷ್ಟು ಪ್ರಮಾಣದ ಪರಿಹಾರ ಮೊತ್ತವನ್ನು ವಿತರಿಸಲಾಗಿದೆ” ಎಂದು ಕೇಳಿರುವ ಪ್ರಶ್ನೆಗೆ ಉತ್ತರಿಸಿದ ತೋಟಗಾರಿಕಾ ಸಚಿವರು, ಬೆಳೆ ನಷ್ಟವಾದ ಸಂದರ್ಭಗಳಲ್ಲಿ ತೋಟಗಾರಿಕೆ ಇಲಾಖೆಯಿಂದ ನೇರ ಪರಿಹಾರ ನೀಡುವ ಕಾರ್ಯಕ್ರಮ ಇಲ್ಲದಿದ್ದರೂ, ಮರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಅಡಿಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಸೇರಿದಂತೆ ಅಡಿಕೆ ಬೆಳೆಯನ್ನು ಅಧಿಸೂಚಿತ ಬೆಳೆಗಳ ಪಟ್ಟಿಗೆ ಸೇರಿಸಲಾಗಿದೆ. ಹವಾಮಾನ ವೈಪರೀತ್ಯದಿಂದ ನಷ್ಟ ಉಂಟಾದರೆ ವಿಮಾ ಪರಿಹಾರ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ವೇಳೆ, ರಾಜ್ಯದ ಹಲವು ಜಿಲ್ಲೆಗಳಲ್ಲಿ ತಾಪಮಾನ ಏರಿಕೆ ಹಾಗೂ ಅಕಾಲಿಕ ಮಳೆಯ ಪರಿಣಾಮವಾಗಿ ಹಿಂಗಾರು ಸಾಯುವುದು, ಕರಟುವುದು ಹಾಗೂ ಎಲೆಚುಕ್ಕೆ ರೋಗ ಹೆಚ್ಚುತ್ತಿರುವ ಬಗ್ಗೆ ಸಮೀಕ್ಷೆ ನಡೆಸಲಾಗಿದೆ. ತೋಟಗಾರಿಕೆ ಇಲಾಖೆಯ ಪ್ರಕಾರ, ರಾಜ್ಯದಲ್ಲಿ ಒಟ್ಟು 88,559 ಹೆಕ್ಟೇ‌ರ್ ಅಡಿಕೆ ತೋಟಗಳು ಎಲೆಚುಕ್ಕೆ ರೋಗದಿಂದ ಹಾನಿಗೊಳಗಾಗಿವೆ.

ಜಿಲ್ಲಾವಾರು ಎಲೆಚುಕ್ಕೆ ರೋಗ ಹಾನಿ (ಹೆಕ್ಟೇ‌ರ್)

ಚಿಕ್ಕಮಗಳೂರು – 25,210

ಶಿವಮೊಗ್ಗ – 32,124

ಉತ್ತರ ಕನ್ನಡ – 8,730

ಹಾಸನ – 360

ದಕ್ಷಿಣ ಕನ್ನಡ – 20,830

ಉಡುಪಿ – 455

ಕೊಡಗು – 850

ಇನ್ನೊಂದೆಡೆ, ಎಲೆಚುಕ್ಕೆ ನಿಯಂತ್ರಣಕ್ಕಾಗಿ ಶಿಫಾರಸ್ಸಾಗಿರುವ ಪ್ರೋಪಿಕೊನಜೋಲ್ ಸೇರಿದಂತೆ ರಾಸಾಯನಿಕ ಸಿಂಪಡಣೆಗಳು ಜೇನು ಸಾಕಾಣಿಕೆಗೆ ಹಾನಿಕಾರಕವಾಗುವ ಸಾಧ್ಯತೆ ಇದೆ ಎಂಬ ವಿಚಾರ ಸರ್ಕಾರದ ಗಮನಕ್ಕೆ ಬಂದಿದ್ದು, ಈ ಹಿನ್ನೆಲೆಯಲ್ಲಿ, ಜೇನು ಕೃಷಿಗೆ ಹಾನಿಯಾಗದಂತೆ ಜೈವಿಕ ಹಾಗೂ ಜೀವಾಣುನಾಶಕ ಪರ್ಯಾಯ ವಿಧಾನಗಳನ್ನು ಪರಿಗಣಿಸಿ ಶಿಫಾರಸ್ಸು ಮಾಡುವ ಉದ್ದೇಶವಿದೆ ಎಂದು ಸಂಬಂಧಿತ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

News Updates

ನಿಮ್ಮಪ್ಪನಿಂದಲೇ ಆರ್‌ಎಸ್‌ಎಸ್‌ಗೆ ಏನು ಮಾಡೋಕೆ ಆಗಿಲ್ಲ, ನಿಮ್ಮಿಂದ ಆಗುತ್ತಾ? ಅಧಿಕಾರದಲ್ಲಿ ಮೆರೆದವರಿಗೆ ಬಂಗಾಳದ ಜನ್ನು ಅಟ್ಟಾಡಿಸಿ ಹೊಡೆಯುತ್ತಿದ್ದಾರೆ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಸಿಟಿ ರವಿ ವಾಗ್ದಾಳಿ

[t4b-ticker]
error: Content is protected !!