Gas shortage: ನಕಲಿ ಲಿಂಕ್, ಆ್ಯಪ್, ಎಪಿಕೆ ಫೈಲ್ ಬಗ್ಗೆ ಇರಲಿ ಎಚ್ಚರ

Picture of Savistara

Savistara

Bureau Report

ಉಡುಪಿ: ವಾಣಿಜ್ಯ ಅನಿಲ ಸಿಲಿಂಡರ್‌ ಅಭಾವವನ್ನೇಬಂಡವಾಳವಾಗಿಸಿಕೊಂಡಿರುವ ಸೈಬರ್ ವಂಚಕರು ಗ್ಯಾಸ್ ಬುಕ್ ಮಾಡಿದರೆ ಶೀಘ್ರ ಸಿಲಿಂಡ‌ರ್ ಸಿಗಲಿದೆ, ಒಟಿಪಿ ಶೇರ್ ಮಾಡಿದರೆ ಸಿಲಿಂಡ‌ರ್ ಮನೆಗೆ ಬರುತ್ತದೆ ಇತ್ಯಾದಿ ನಕಲಿ ಸಂದೇಶಗಳನ್ನು ಮೊಬೈಲ್‌ಗೆ ಕಳುಹಿಸುತ್ತಿದ್ದಾರೆ. ಇಂತಹ ಸಂದೇಶ ಮೊಬೈಲ್‌ನಲ್ಲಿ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಕಂಡರೂ ಯೋಚನೆ ಮಾಡಿಯೇ ಮುಂದುವರಿಯಿರಿ. ಆದಷ್ಟು ಎಚ್ಚರ ವಹಿಸುವುದೇ ಉತ್ತಮ.ಸಾಮಾನ್ಯವಾಗಿ ಈ ವಂಚಕರು ಗ್ಯಾಸ್ ಏಜೆನ್ಸಿ ಅಥವಾ ಕಂಪೆನಿ ಹೆಸರಿನಲ್ಲಿ ಕರೆಮಾಡಿ ಅಥವಾ ಸಂದೇಶ ಕಳುಹಿಸಿ ಗ್ರಾಹಕರಿಂದ ಒಟಿಪಿ ಕೇಳುವ ಸಾಧ್ಯತೆಯಿದೆ. ಶೀಘ್ರ ಗ್ಯಾಸ್ ಸಿಗಲಿದೆ ಎಂಬ ಭರವಸೆ ಯಿಂದ ಪೂರ್ವಾಪರ ಪರಿಶೀಲಿಸದೇ ತತ್‌ಕ್ಷಣ ಒಟಿಪಿ ಹಂಚಿಕೊಳ್ಳಬಾರದು. ಒಮೆ-¾ ಒಟಿಪಿ ನೀಡಿದರೆ, ಕ್ಷಣಾರ್ಧದಲ್ಲೇ ಬ್ಯಾಂಕ್ ಖಾತೆಯಿಂದ ಹಣ ಕಳವಾಗುವ ಸಾಧ್ಯತೆ ಇದೆ.ಗ್ಯಾಸ್‌ ಬುಕ್ಕಿಂಗ್‌ಗೆ ಗ್ಯಾಸ್ ಕಂಪೆನಿ ಅಥವಾ ಅಧಿಕೃತ ಏಜೆನ್ಸಿ ಗ್ರಾಹಕರಿಂದ ಒಟಿಪಿ ಕೇಳುವುದಿಲ್ಲ. ಇದಕ್ಕಾಗಿ ಅಧಿಕೃತ ಮೊಬೈಲ್ ಆ್ಯಪ್, ವೆಬ್‌ಸೈಟ್ ಅಥವಾ ನೋಂದಾಯಿತ ಫೋನ್ ಸಂಖ್ಯೆ ಬಳಸಬಹುದು. ಜನರು ಅಜಾಗರೂಕತೆಯಿಂದ ಲಿಂಕ್ ಕ್ಲಿಕ್ ಮಾಡಿದರೂ ಅಥವಾ ಒಟಿಪಿ ಹಂಚಿಕೊಂಡರೂ ಮುಂದೆ ದೊಡ್ಡ ಸಮಸ್ಯೆ ಎದುರಿಸಬೇಕಾಗುತ್ತದೆ.ಆನ್‌ಲೈನ್ ವಂಚಕರು ಸಾಮಾಜಿಕ ಜಾಲತಾಣಗಳ ಮೂಲಕ ನಕಲಿ ಲಿಂಕ್‌ಗಳು, ಆ್ಯಪ್‌ಗ್ಗು, ಎಪಿಕೆ ಫೈಲ್‌ಗಳನ್ನು ಹಬ್ಬಲು ಆರಂಭಿಸಿದ್ದು, ಜನರು ನಕಲಿ ಲಿಂಕ್ ಒತ್ತಿದರೆ ಅಥವಾ ಆ್ಯಪ್ ಹಾಗೂ ಎಪಿಕೆ ಫೈಲ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡರೆ ಬ್ಯಾಂಕ್ ಖಾತೆಯಿಂದ ಹಣ ವಂಚಕರ ಪಾಲಾಗುತ್ತದೆ. ಈ ಬಗ್ಗೆ ಜನಸಮಾನ್ಯರು ಎಚ್ಚರಿಕೆಯಿಂದ ಇರಬೇಕು ಎಂದು ಜಿಲ್ಲಾ ಪೊಲೀಸ್ ಸಲಹೆ ನೀಡಿದೆ.

ಪಾಲಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು

ಅಪರಿಚಿತ ಸಂಖ್ಯೆಯಿಂದ ಬಂದ ಗ್ಯಾಸ್ ಬುಕ್ಕಿಂಗ್ ಸಂದೇಶ ನಂಬಬಾರದು.

ಸ್ಪಷ್ಟತೆ ಇಲ್ಲದೇ ಯಾರೊಂದಿಗೂ ಒಟಿಪಿ ಹಂಚಿಕೊಳ್ಳಬಾರದು.

ಸಂದೇಶದಲ್ಲಿ ಬಂದಿರುವ ಅನುಮಾನಾಸ್ಪದ ಲಿಂಕ್‌ಗಳನ್ನು ಕ್ಲಿಕ್ ಮಾಡಬಾರದು.

ಗ್ಯಾಸ್ ಕಂಪೆನಿ ಹೆಸರಿನಲ್ಲಿ ಬಂದ ಕರೆಗಳನ್ನೂ ಪರಿಶೀಲನೆ ಮಾಡದೆ ನಂಬಬಾರದು.

ಯಾವುದೇ ಅಪ್ಲಿಕೇಶನ್‌ಗಳನ್ನು ಅಪರಿಚಿತ ಲಿಂಕ್ ಮೂಲಕ ಡೌನ್‌ಲೋಡ್ ಮಾಡಬಾರದು.

ಬ್ಯಾಂಕ್ ಖಾತೆ ವ್ಯವಹಾರಗಳ ಬಗ್ಗೆ ನಿಯಮಿತ ಪರಿಶೀಲನೆ ಅಗತ್ಯ.

ಮೋಸದ ಅನುಮಾನ ಬಂದ ಕೂಡಲೇ ಬ್ಯಾಂಕ್ ಮತ್ತು ಸೈಬ‌ರ್ ಕ್ರೈಂ ಸಹಾಯವಾಣಿಗೆ ಮಾಹಿತಿ ನೀಡಬೇಕು.

ಸಾಮಾಜಿಕ ಜಾಲತಾಣಗಳಲ್ಲಿ ಬಂದ ಮಾಹಿತಿಯನ್ನು ಪರಿಶೀಲನೆ ಮಾಡದೆ ನಂಬಬಾರದು.

[t4b-ticker]
error: Content is protected !!