ಇರಾನ್‌ನ ಇಂಧನ ಕೇಂದ್ರಗಳ ಮೇಲಿನ ದಾಳಿಯಿಂದ ಹಿಂದೆ ಸರಿದ ಟ್ರಂಪ್; 5 ದಿನಗಳವರೆಗೆ ದಾಳಿ ಮಾಡದಂತೆ ಸೂಚಿಸಿದ ಅಮೆರಿಕ ಅಧ್ಯಕ್ಷ

Picture of Savistara

Savistara

Bureau Report

“ನಮ್ಮಕಠಿಣ ಎಚ್ಚರಿಕೆ ಬಳಿಕ ಟ್ರಂಪ್ ದಾಳಿಯಿಂದ ಹಿಂದೆ ಸರಿದಿದ್ದಾರೆ”ಎಂದ ಇರಾನ್ ರಾಯಭಾರಿ ಕಚೇರಿ

ವಾಶಿಂಗ್ಟನ್: ಕಳೆದ ಎರಡು ದಿನಗಳಲ್ಲಿ ಅಮೆರಿಕಾ ಮತ್ತು ಇರಾನ್ ನಡುವೆ ನಡೆದ ಮಾತುಕತೆಗಳು ಫಲಪ್ರದವಾಗಿವೆ. ಆದ್ದರಿಂದ ಇರಾನ್‌ನ ಇಂಧನ ಕೇಂದ್ರಗಳ ಮೇಲಿನ ಅಮೆರಿಕದ ದಾಳಿಯನ್ನು ಐದು ದಿನಗಳವರೆಗೆ ಮುಂದೂಡಲು ಸೂಚಿಸಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.ಈ ಕುರಿತು ಟೂತ್ ಸೋಶಿಯಲ್‌ನಲ್ಲಿ ಪೋಸ್ಟ್ ಮಾಡಿರುವ ಡೊನಾಲ್ಡ್ ಟ್ರಂಪ್, ಇರಾನ್ ಜೊತೆ ನಡೆಯುತ್ತಿರುವ ಮಾತುಕತೆಗಳು ಫಲಪ್ರದವಾಗಿರುವ ಹಿನ್ನೆಲೆ ಇರಾನ್‌ ವಿದ್ಯುತ್ ಘಟಕಗಳು ಮತ್ತು ಇಂಧನ ಮೂಲಸೌಕರ್ಯಗಳ ಮೇಲೆ ಯೋಜಿಸಿದ್ದ ಎಲ್ಲಾ ಸೇನಾ ದಾಳಿಗಳನ್ನು 5 ದಿನಗಳ ಕಾಲ ಮುಂದೂಡಲು ಸೂಚನೆ ನೀಡಿದ್ದೇನೆ. ಮುಂದಿನ ಮಾತುಕತೆಗಳ ಯಶಸ್ಸಿನ ಮೇಲೆ ಈ ನಿರ್ಧಾರ ಅವಲಂಬಿತವಾಗಿರುತ್ತದೆ ಎಂದು ಹೇಳಿದ್ದಾರೆ.

ಇರಾನಿನ ಪರಮಾಣು ಸ್ಥಾವರಗಳ ಮೇಲಿನ ದಾಳಿಗಳನ್ನು ವಿಳಂಬಗೊಳಿಸುವಂತೆ ಟ್ರಂಪ್ ಸೂಚನೆ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಕಾಬೂಲ್‌ನಲ್ಲಿರುವ ಇರಾನ್ ರಾಯಭಾರ ಕಚೇರಿ, ಇರಾನ್ ಕಠಿಣ ಎಚ್ಚರಿಕೆ ನೀಡಿದ ನಂತರ ಟ್ರಂಪ್ ದಾಳಿಯಿಂದ ಹಿಂದೆ ಸರಿದಿದ್ದಾರೆ ಎಂದು ಹೇಳಿದೆ.

[t4b-ticker]
error: Content is protected !!