“ಪಶ್ಚಿಮ ಏಷ್ಯಾ ಯುದ್ಧವು ಭಾರತಕ್ಕೂಸವಾಲಾಗಿ ಪರಿಣಮಿಸಿದೆ”
ಹೊಸದಿಲ್ಲಿ: ಪಶ್ಚಿಮ ಏಷ್ಯಾ ಯುದ್ಧವು ಭಾರತಕ್ಕೂ ಅಪೂರ್ವ ಸವಾಲಾಗಿ ಪರಿಣಮಿಸಿದೆ. ಹಾರ್ಮುಝ್ ಜಲಸಂಧಿಯನ್ನು ಬಂದ್ ಮಾಡುವುದು, ವ್ಯಾಪಾರಿ ಹಡಗುಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಲೋಕಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಸಂಘರ್ಷದ ಪ್ರಮುಖ ಅಂಶಗಳು ಮತ್ತು ಈ ಬಗ್ಗೆ ಭಾರತದ ನಿಲುವನ್ನು ವಿವರಿಸಿದರು.”ಸಂಘರ್ಷದ ಕುರಿತು ಸರಕಾರ ಎಚ್ಚರಿಕೆಯಿಂದಿದ್ದು, ಸಹಾನುಭೂತಿಯಿಂದ ನಡೆದುಕೊಳ್ಳುತ್ತಿದೆ. ಅಗತ್ಯವಿರುವ ಎಲ್ಲಾ ಸಹಾಯವನ್ನು ನೀಡಲು ಸಿದ್ಧವಾಗಿದೆ” ಎಂದು ಮೋದಿ ಹೇಳಿದ್ದಾರೆ.













































