1 ನೇ ತರಗತಿ ದಾಖಲಾತಿಗೆ ವಯಸ್ಸಿನ ಮಿತಿ ಸಡಿಲಿಕೆಗೆ ಸರಕಾರ ನಿರ್ಧಾರ | 5 ವರ್ಷ 10 ತಿಂಗಳಾದರೆ ಅವಕಾಶ

Picture of Savistara

Savistara

Bureau Report

1 ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ ಎಂಬ ನಿಯಮವನ್ನು ಸರಕಾರ ಸರಳೀಕೃತ ಗೊಳಿಸಿದೆ.

ಈ ಕುರಿತು ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಸಚಿವರಾದ ಮಧುಬಂಗಾರಪ್ಪರು ಸದನದಲ್ಲಿ ಮಾತನಾಡಿ “2026-27 ನೇ ಸಾಲಿಗೆ 1 ನೇ ತರಗತಿಗೆ ದಾಖಲಾಗುವ ಮಕ್ಕಳಿಗೆ 60 ದಿವಸದ ವಿನಾಯಿತಿಯನ್ನು ನೀಡಲಾಗಿದೆ. ಈ ಸಂಬಂಧ ದಾಖಲಾತಿ ತಂತ್ರಾಂಶದಲ್ಲಿಯೂ ಬದಲಾವಣೆ ಮಾಡಲಾಗುವುದು. ಎಲ್.ಕೆ.ಜಿ., ಯು.ಕೆ.ಜಿ.ದಾಖಲಾತಿಗೂ ತೊಂದರೆಯಾಗುತ್ತಿದ್ದ ಅಲ್ಲಿಗೂ ಕೂಡಾ ಕಾನೂನು ನನ್ನು ತರಲಾಗುವುದು ಎಂದವರು ವಿಧಾನಸಭೆ ಅಧಿವೇಶನದಲ್ಲಿ ತಿಳಿಸಿದ್ದಾರೆ.

[t4b-ticker]
error: Content is protected !!