ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಇನ್ಮುಂದೆ 625 ಅಲ್ಲ 525 ಅಂಕಗಳು… ತೃತೀಯ ಭಾಷೆಗೆ ಸರ್ಕಾರದಿಂದ ಕೋಕ್​!

Picture of Savistara

Savistara

Bureau Report

ಬೆಂಗಳೂರು: ನಿನ್ನೆಯಷ್ಟೇ ಒಂದನೇ ತರಗತಿ ದಾಖಲಾತಿಗೆ 60 ದಿನಗಳ ವಯೋಮಿತಿ ಅಂತಹ ಮಹತ್ವ ಘೋಷಣೆ ಮಾಡಿದ್ದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಇಂದು ಮತ್ತೊಂದು ದೊಡ್ಡ ಘೋಷಣೆ ಮಾಡಿದ್ದಾರೆ. ಅದೇನೆಂದರೆ, ಈ ವರ್ಷದಿಂದಲೇ ಎಸ್ಸೆಸ್ಸೆಲ್ಸಿ ಪರೀಕ್ಷಾ ( SSLC Exam ) ಅಂಕವನ್ನು 625ಕ್ಕೆ ಬದಲಾಗಿ 525ಕ್ಕೆ ನಿಗದಿ ಮಾಡಲಾಗಿದೆ.ಇಂದು ಪತ್ರಿಕಾಗೋಷ್ಠಿ ನಡೆಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಎಸ್ಸೆಸ್ಸೆಲ್ಸಿ ಪರೀಕ್ಷೆಯ ಅಂಕವನ್ನು ಈ ವರ್ಷದಿಂದಲೇ 625 ರಿಂದ 525ಕ್ಕೆ ಇಳಿಸಿರುವುದಾಗಿ ಘೋಷಣೆ ಮಾಡಿದರು. ಅಲ್ಲದೆ, ತೃತೀಯ ಭಾಷೆಗೆ ಗ್ರೇಡ್ ಪದ್ದತಿ ಜಾರಿಗೆ ತಂದಿರುವುದಾಗಿ ತಿಳಿಸಿದರು. ಈ ಮೂಲಕ ಹಿಂದಿ, ಉರ್ದು, ಕೊಂಕಣಿ ಸೇರಿದಂತೆ ಇತರೆ ಮೂರನೇ ಭಾಷೆಗಳಿಗೆ ಗ್ರೇಡ್​ ಪದ್ಧತಿ ಅನ್ವಯವಾಗಲಿದೆ ಎಂದರು. ಹಿಂದಿ ಪರೀಕ್ಷೆಯಿಂದ ಯಾವುದೇ ರೀತಿಯಲ್ಲಿ ಪರಿಣಾಮ ಬೀರಲ್ಲ ಎಂದು ಸಚಿವರು ಇದೇ ಸಂದರ್ಭದಲ್ಲಿ ಹೇಳಿದರು.

[t4b-ticker]
error: Content is protected !!