ಎಐಎಡಿಎಕೆ ಬಿಕ್ಕಟ್ಟು ಶಮನ: ಬಂಡಾಯ ನಾಯಕರನ್ನು ಪಕ್ಷಕ್ಕೆ ಬರಮಾಡಿಕೊಂಡ ಪಳನಿಸ್ವಾಮಿ

Picture of Savistara

Savistara

Bureau Report

ಚೆನ್ನೈ: ಎಐಎಡಿಎಂಕೆಯನ್ನು ಮತ್ತಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಪಕ್ಷದ ಮುಖ್ಯಸ್ಥ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಪಕ್ಷ ತೊರೆದಿದ್ದ ಹಿರಿಯ ಮುಖಂಡರಿಗೆ ಪ್ರಮುಖ ಹುದ್ದೆಗಳನ್ನು ನೀಡುವ ಮೂಲಕ ಮತ್ತೆ ಪಕ್ಷಕ್ಕೆ ಸೇರ್ಪಡೆಗೊಳಿಸಿದ್ದಾರೆ.

ಎಸ್.ಪಿ. ವೇಲುಮಣಿ, ನಥನ್ ಆರ್ ವಿಶ್ವನಾಥನ್‌ ಮತ್ತು ಪಿ. ತಂಗಮನಿ ಅವರಿಗೆ ಪಕ್ಷದ ಪ್ರಮುಖ ಪದಾಧಿಕಾರಿಗಳ ಸ್ಥಾನ ನಿಡಿದ್ದಾರೆ.ತಮಿಳುನಾಡು ವಿಧಾನಸಭೆ ಚುನಾವಣೆ ವೇಳೆ ಟಿವಿಕೆಯನ್ನು ಬೆಂಬಲಿಸಿದ್ದ ಎಐಎಡಿಎಂಕೆ 25 ಶಾಸಕರಲ್ಲಿ, ನಾಲ್ವರು ಶಾಸಕರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು. ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ ಪಕ್ಷಕ್ಕೆ ಸೇರ್ಪಡೆ ಆಗಿದ್ದರು.ಅದಾಗಿಯೂ, ಮಾಜಿ ಸಚಿವರಾದ ಎನ್.ಆರ್. ವಿಶ್ವನಾಥನ್ ಹಾಗೂ ಪಿ. ತಂಗಮಣಿ ಅವರು ಮತ್ತೆ ಕೆ. ಪಳನಿಸ್ವಾಮಿ ಅವರನ್ನು ಭೇಟಿಯಾಗಿ ಪತ್ರ ನೀಡುವ ಮೂಲಕ ಎಐಎಡಿಎಂಕೆಗೆ ಬೆಂಬಲ ಸೂಚಿಸಿದ್ದರು.

ಎಐಎಡಿಎಂಕೆಯ ಉಭಯ ಬಣಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಂಡ ಬೆನ್ನಲ್ಲೇ, ಶಿಸ್ತು ಕ್ರಮದ ನಿರ್ಧಾರವನ್ನು ಹಿಂಪಡೆಯಲಾಗಿದೆ. ನಾಯಕರ ವಿರುದ್ಧ ಎಲ್ಲ ಅನರ್ಹತೆ ಹಾಗೂ ಶಿಸ್ತು ಕ್ರಮದ ಪ್ರಕ್ರಿಯೆಗಳನ್ನು ಕೈಬಿಡುವಂತೆ ಕೋರಿ ವಿಧಾನಸಭೆಯ ಸಭಾಪತಿಯವರಿಗೆ ಅಧಿಕೃತವಾಗಿ ಪತ್ರ ಬರೆಯಲಾಗಿದೆ ಎಂದು ವರದಿ ತಿಳಿಸಿದೆ.ಈಗ ಮತ್ತೆ ಪಕ್ಷಕ್ಕೆ ವಾಪಸ್ ಆಗಿರುವ ಹಿರಿಯ ನಾಯಕರನ್ನು ಕೆ. ಪಳನಿಸ್ವಾಮಿ ಅವರು ಸ್ವಾಗತಿಸಿದ್ದಾರೆ. ಎಸ್.ಪಿ. ವೇಲುಮಣಿ ಹಾಗೂ ಎನ್.ಆರ್. ವಿಶ್ವನಾಥನ್ ಅವರನ್ನು ಎಐಎಡಿಎಂಕೆ ಪಕ್ಷದ ಉಪ ಪ್ರಧಾನ ಕಾರ್ಯದರ್ಶಿಗಳನ್ನಾಗಿ ನೇಮಿಸಲಾಗಿದೆ. ಪಿ ತಂಗಮಣಿ ಅವರಿಗೆ ರಾಜ್ಯ ಸಂಘಟನಾ ಕಾರ್ಯದರ್ಶಿ ಹೊಣೆ ನೀಡಲಾಗಿದೆ.

[t4b-ticker]
error: Content is protected !!