“ಅವಳು ತಪ್ಪಿತಸ್ಥಳೆಂದು ಸಾಬೀತಾದರೆ ಅದೇ ಕೋಟೆಯಿಂದ ತಳ್ಳಿ ಅವಳನ್ನು ಕೊಲ್ಲಿ’ ಇದು ಪುಣೆಯಲ್ಲಿ ಭಾವಿ ಪತಿ ಕೇತನ್ ಅವರನ್ನು ಕೋಟೆಯಿಂದ ತಳ್ಳಿ ಕೊಲೆ ಮಾಡಿದ ಭಾವಿ ಪತ್ನಿ ಸಿಯಾ ತಾಯಿ ಪೂಜಾ ಆಕ್ರೋಶದ ನುಡಿಗಳಿವು.
ಪುಣೆಯ ಲೋನಾವಾಲಾ ಬಳಿಯ ಲೋಹಾಗಢ ಕೋಟೆಯಲ್ಲಿ ಭಾವಿಪತಿ ಕೇತನ್ ವಿಶಾಲ್ ಅಗರವಾಲ್ ಹತ್ಯೆ ಪ್ರಕರಣವು ದೇಶವನ್ನೇ ಬೆಚ್ಚಿಬೀಳಿಸಿದೆ. ಈ ಸಂಬಂಧ ತನಿಖೆಗೆ ಮಹಾರಾಷ್ಟ್ರ ಸರ್ಕಾರವು ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆಗೆ ನಿರ್ಧರಿಸಿದೆ.ಪುಣೆಯ ಮಾರ್ಕೆಟ್ ಯಾರ್ಡ್ ಬಿಲ್ವವಾಡಿಯ ನಿವಾಸಿ ಸಿಯಾ ಗೋಯಲ್(20) ಅವರು ಪ್ರಿಯಕರ ಕೊಂಡ್ವಾ ನಿವಾಸಿ ಚೇತನ್ ಚೌಧರಿ(23) ಸೇರಿ ಪುಣೆಯ ಕೆಫೆಯಲ್ಲಿ ಕುಳಿತು ಕೇತನ್ ಅಗರವಾಲ್ (25) ಹತ್ಯೆಗೆ ಸಂಚು ರೂಪಿಸಿದ್ದರು. ಬಳಿಕ, ಕೋಟೆಗೆ ಚಾರಣದ ನೆಪದಲ್ಲಿ ಕರೆದೊಯ್ದು ಕಣಿವೆಗೆ ನೂಕಿ ಸಾಯಿಸಿದ್ದರು. ರಾಜಸ್ಥಾನದ ಉದಯಪುರ ಅರಮನೆಯಲ್ಲಿ ಕೇತನ್ ಮತ್ತು ಸಿಯಾ ಮದುವೆ ನಿಗದಿಯಾಗಿತ್ತು. ನವೆಂಬರ್‌ನಲ್ಲಿ ಮದುವೆ ನಡೆಯಬೇಕಿತ್ತು. ಮದುವೆ ಸಿಯಾಗೆ ಇಷ್ಟವಿರಲಿಲ್ಲ. ಗೆಳೆಯ ಕೇತನ್ ಜೊತೆ ಸಹಜೀವನ ನಡೆಸುತ್ತಿದ್ದಳು ಎಂದು ತಿಳಿದುಬಂದಿದೆ.
ಕೇತನ್ ನನ್ನ ಮಗನಿದ್ದಂತೆ, ಅವನನ್ನು ಕೊಂದವಳನ್ನು ಅದೇ ಕೋಟೆಯಿಂದ ತಳ್ಳಿ
ಈ ಕುರಿತಂತೆ ವರದಿಗಾರರ ಜೊತೆ ಮಾತನಾಡಿರುವ ಸಿಯಾ ತಾಯಿ ಪೂಜಾ ಗೋಯಲ್, ನನ್ನ ಮಗಳು ಸಿಯಾ ಕೇತನ್ ಜೊತೆ ಮದುವೆ ಕುರಿತಂತೆ ಯಾವುದೇ ಅಸಮಾಧಾನ ತೋರ್ಪಡಿಸಿರಲಿಲ್ಲ.ನವೆಂಬರ್‌ನಲ್ಲಿ ಉದಯಪುರದ ಅರಮನೆಯಲ್ಲಿ ಮದುವೆ ನಡೆಯಬೇಕಿತ್ತು. ಈ ಕೃತ್ಯದಿಂದ ಅವಳು ಕೇತನ್ ಕುಟುಂಬಕ್ಕಿಂತ ನಮಗೇ ಹೆಚ್ಚು ನೋವು ನೀಡಿದ್ದಾಳೆ. ಕೇತನ್ ಸಾವು ಎರಡೂ ಕುಟುಂಬವನ್ನು ತೀವ್ರ ವಿಚಲಿತಗೊಳಿಸಿದೆ. ಅವಳು ತಪ್ಪಿತಸ್ಥಳೆಂದು ಸಾಬೀತಾದರೆ ಕಠಿಣ ಶಿಕ್ಷೆ ಕೊಡಿ. ಇಲ್ಲವೇ, ಅದೇ ಕೋಟೆಯಿಂದ ತಳ್ಳಿ ಕೊಂದುಬಿಡಿ ಎಂದಿದ್ದಾರೆ.
ಸಿಯಾ ತಂದೆ ಪ್ರವೀಣ್ ಗೋಯಲ್ ಸಹ ಇದೇ ಮಾತುಗಳನ್ನಾಡಿದ್ದಾರೆ. ಅವಳು ನನ್ನ ಮಗಳಾದರೂ ಪರವಾಗಿಲ್ಲ.
ಕೇತನ್‌ನನ್ನು ತಳ್ಳಿದ ಸ್ಥಳದಿಂದಲೇ ತಳ್ಳಿಬಿಡಬೇಕು ಎಂದಿದ್ದಾರೆ.
ಕೇತನ್ ನಮ್ಮ ಕಣ್ಣ ಮುಂದೆಯೇ ಆಡಿ ಬೆಳೆದ ಹುಡುಗ. ಅವನ ಹತ್ಯೆಯನ್ನು ಮಗಳೇ ಮಾಡಿರುವುದನ್ನು ನಂಬಲಾಗುತ್ತಿಲ್ಲ ಎಂದಿದ್ದಾರೆ. ಅವನು ನಮ್ಮ ಮಗನಂತೆಯೇ ಇದ್ದ. ಅತ್ಯಂತ ಪ್ರೀತಿ ಪಾತ್ರ, ಒಳ್ಳೆಯ ಹುಡುಗನಾಗಿದ್ದ ಎಂದಿದ್ದಾರೆ.
ಮಗಳು ಸಿಯಾ ಪ್ರಿಯಕರ ಚೇತನ್ ಬಗ್ಗೆ ತನಗೆ ತಿಳಿದಿರಲಿಲ್ಲ ಎಂದಿರುವ ಪೋಷಕರು, ನಿಶ್ಚಿತಾರ್ಥ ಆದಾಗಿನಿಂದ ಮಗಳು ಸಿಯಾ, ಚೇತನ್ ಬಗ್ಗೆ ಮಾತ್ರ ಮಾತನಾಡುತ್ತಿದ್ದಳು ಎಂದಿದ್ದಾರೆ.
ಮಗಳು ಅತ್ಯಂತ ಸರಳ ಹುಡುಗಿಯಾಗಿದ್ದು, ಅವಳ ಪ್ರೀತಿ ಬಗ್ಗೆ ತಿಳಿದಿರಲಿಲ್ಲ ಎಂದು ತಂದೆ ಹೇಳಿದ್ದಾರೆ.











































