ಸುಳ್ಯದ ಖಾಸಗಿ ಬಸ್ ನಿಲ್ದಾಣದ ಮುಂಭಾಗದ ಸ್ಕಂದ ಕಾಂಪ್ಲೆಕ್ಸ್‌ನಲ್ಲಿ ಧನ್‌ರಾಮ್ ಪಟೇಲ್ ಮಾಲಕತ್ವದಲ್ಲಿ ಸಿಂಧೂರ ಶೋರೂಂ ವಸ್ತ್ರ ಮಳಿಗೆ ಜೂ.27 ರಂದು ಶುಭಾರಂಭಗೊಂಡಿದೆ. ಉದ್ಘಾಟನಾ ಸಮಾರಂಭವನ್ನು ಸಿಂಧೂರ ವಸ್ತ್ರ ಮಳಿಗೆಯ ಮುಂಭಾಗದಲ್ಲಿ ನೆರವೇರಿಸಲಾಯಿತು.

ಸುಳ್ಯದ ಕೆ.ವಿ.ಜಿ. ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಡಾ| ಗೀತಾ ದೊಪ್ಪರವರು ದೀಪ ಬೆಳಗಿ ನೂತನ ಮಳಿಗೆಯನ್ನು ಲೋಕಾರ್ಪಣೆಗೊಳಿಸಿದರು. ಸಮಾರಂಭದಲ್ಲಿ ಗಾಯಕಿ ಶ್ರೀಮತಿ ಪೂರ್ಣಿಮಾ ಕೃಷ್ಣರಾಜ್, ಆಂಕರ್ ಶ್ರೀಮತಿ ದಯಾಮಣಿ ಹೇಮಂತ್, ಲತಾ ರೈ ಬೂಡು, ಶ್ರೀಮತಿ ಶೈಲಜಾ, ಶ್ರೀಮತಿ ಮಂಜುಳಾ ಬಡಿಗೇರ್, ಶ್ರೀಮತಿ ಮೋಹಿನಿ ವಿಶ್ವನಾಥ್, ಶ್ರೀಮತಿ ಧರ್ಮಕಲಾ, ಶ್ರೀಮತಿ ರಜನಿ, ಶ್ರೀಮತಿ ಶಾಲಿನಿ, ಶ್ರೀಮತಿ ದೇವಿಶ್ರೀ, ಶ್ರೀಮತಿ ಜಯಶ್ರೀ, ಶ್ರೀಮತಿ ಕುಸುಮಾ, ಶ್ರೀಮತಿ ಪುಷ್ಪಾ, ವರ್ತಕರ ಸಂಘದ ಗೌರವಾಧ್ಯಕ್ಷರಾದ ಸುಧಾಕರ ರೈ ಪಿ.ಬಿ., ಗಾಯಕ ಕೃಷ್ಣರಾಜ್ ಕೇರ್ಪಳ ಶುಭಹಾರೈಸಿದರು. ವಿ.ಜೆ.ವಿಖ್ಯಾತ್ ಕಾರ್ಯಕ್ರಮ ನಿರೂಪಿಸಿದರು.
ವಿಸ್ತಾರವಾದ ಮಳಿಗೆ: ಸ್ಕಂದ ಕಾಂಪ್ಲೆಕ್ಸ್‌ನ ಮೊದಲನೇ ಮಹಡಿ ಹಾಗೂ 2ನೇ ಮಹಡಿಯಲ್ಲಿ ಸಿಂಧೂರ ವಸ್ತ್ರ ಮಳಿಗೆಯನ್ನು ತೆರೆಯಲಾಗಿದ್ದು ವಿಸ್ತಾರವಾದ ಸ್ಥಳವಕಾಶವನ್ನು ಹೊಂದಿದೆ. ಪುರುಷರ, ಮಹಿಳೆಯರ ಹಾಗೂ ಮಕ್ಕಳ ವಸ್ತ್ರಗಳಿಗೆ ಪ್ರತ್ಯೇಕ ಕೌಂಟರ್‌ಗಳನ್ನು ತೆರೆಯಲಾಗಿದೆ. ಉದ್ಘಾಟನೆಯ ಪ್ರಯುಕ್ತ

1000 ಮಂದಿಗೆ ಕೊಡುಗೆ :1000 ಮಂದಿಗೆ ವಿಶೇಷ ಕೊಡುಗೆಗಳನ್ನು ನೀಡಲಾಯಿತು. ಈ ಕೊಡುಗೆ ಸ್ವೀಕರಿಸಲು ಸಿಂಧೂರ ಶೋರೂಂ ಮಳಿಗೆಯ ಎದುರು ಬೆಳಗ್ಗೆ 8:30ರಿಂದಲೇ ಜನರು ಸಾಲಾಗಿ ನಿಂತಿದ್ದರು. ಸಭಾ ಕಾರ್ಯಕ್ರಮ ಮುಗಿದ ಬಳಿಕ ಕೂಪನ್ ನೀಡಲಾಯಿತು. ಬಳಿಕ ಎಲ್ಲರೂ ಸಂಸ್ಥೆಯ ಒಳಗೆ ಹೋಗಿ ಮಹಿಳೆಯರು ಸಾರಿ ಹಾಗೂ ಪುರುಷರು ಶರ್ಟ್‌ಗಳನ್ನು ಪಡೆದುಕೊಂಡರು. 250 ಮಂದಿ ಅಟೋ ಚಾಲಕರಿಗೆ ಖಾಕಿ ಶರ್ಟ್‌ನ್ನು ಕೂಡಾ ಕೊಡುಗೆ ನೀಡಲಾಯಿತು.











































