ಕುಕ್ಕೆ ಸುಬ್ರಮಣ್ಯಕ್ಕೆ ಇಂದು ಜೂ. 30 ರಂದು ಅಂದಾಜು 40,000 ಗಿಂತಲೂ ಹೆಚ್ಚು ಭಕ್ತರ ಆಗಮನವಾಗಿದೆ. ಶುಕ್ರವಾರ ರಂಜಾನ್ ರಜೆ, ಶನಿವಾರ ನಾಲ್ಕನೇ ಶನಿವಾರ ರಜೆ, ಹಾಗೂ ಆದಿತ್ಯವಾರ ರಜೆಯಾಗಿ ಸರಣಿ ರಜೆಗಳು ಬಂದ ಕಾರಣ ಕುಕ್ಕೆಗೆ ಅಧಿಕ ಸಂಖ್ಯೆಯಲ್ಲಿ ಭಕ್ತರ ಆಗಮನವಾಗಿದೆ. ದೇವಳದ ಎಲ್ಲ ವಸತಿಗೃಹಗಳು ತುಂಬಿದ್ದು ಖಾಸಗಿ ವಸತಿ ಗ್ರಹಗಳಲ್ಲಿ ಕೂಡ ಭಕ್ತರ ಕಾದರಿಸುವಿಕೆ ಹಾಗೂ ರಾತ್ರಿ ವಾಸ್ತವ್ಯಕ್ಕಾಗಿ ಕೊಠಡಿಗಳು ಭರ್ತಿಯಾಗಿ ಅದೆಷ್ಟೋ ಭಕ್ತರು ತಂಗುವಿಕೆಗಾಗಿ ಕೊಠಡಿ ಇಲ್ಲದೆ ಶ್ರೀ ದೇವಳದ ರಥ ಬೀದಿ ಸಭಾಂಗಣದಲ್ಲಿ ಹಾಗೂ ಶ್ರೀ ದೇವಳದ ಛತ್ರಗಳಲ್ಲಿ ಆಶ್ರಯವನ್ನು ಪಡೆದಿದ್ದರು.ಇತ್ತ ಶ್ರೀ ದೇವಳದ ಸುತ್ತಮುತ್ತ ಹಾಗೂ ಆದಿಸುಬ್ರಹ್ಮಣ್ಯ ಸುತ್ತುಮುತ್ತು ಇರುವ ಪಾರ್ಕಿಂಗ್ ಪ್ರದೇಶಗಳೆಲ್ಲವೂ ವಾಹನಗಳಿಂದ ಬರ್ತಿಯಾಗಿದ್ದು ಮಾರ್ಗದ ಬದಿಯಲ್ಲಿ ವಾಹನಗಳನ್ನು ನಿಲ್ಲಿಸುವ ಪ್ರಮೇಯ ಕೂಡ ಬಂದು ಒದಗಿತ್ತು. ಶನಿವಾರ ಮುಂಜಾನೆಯಿಂದಲೇ ಕುಮಾರಧಾರ ಸ್ಥಾನಗಟ್ಟದಲ್ಲಿ ಭಕ್ತರು ತೀರ್ಥ ಸ್ನಾನ ಮಾಡಿ ದೇವಳದ ಹೊರಾಂಗಣದಿಂದಲೇ ಸರತಿ ಸಾಲಿನಲ್ಲಿ ಬಂದು ಶ್ರೀ ದೇವರ ದರ್ಶನ ಮಾಡಿದ್ದರು.
ನಿರಂತರ ಅನ್ನದಾನ : ಕುಕ್ಕೆಯಲ್ಲಿ ಶನಿವಾರ ಮುಂಜಾನೆಯಿಂದಲೇ ಅತ್ಯಧಿಕ ಭಕ್ತರು ಆಗಮಿಸಿದ್ದು ಬೆಳಗ್ಗೆ ಉಪಹಾರ 8 ಗಂಟೆಯಿಂದ 10 ಗಂಟೆವರೆಗೆ ನಿರಂತರವಾಗಿ ನಡೆದಿದ್ದು ಬಳಿಕ ಅನ್ನದಾನ ಸಂಜೆ ನಾಲ್ಕು ಗಂಟೆವರೆಗೂ ನಡೆದಿರುತ್ತದೆ. ಶ್ರೀ ದೇವಳದ ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ಸೆಕ್ಯೂರಿಟಿ ಹಾಗೂ ಸ್ಥಳೀಯ ಠಾಣೆಯ ಪೊಲೀಸ್ ಸಿಬ್ಬಂದಿಯವರು ಭಕ್ತರ ಸುಗಮ ದರ್ಶನಕ್ಕೆ ಹಾಗೂ ಅನ್ನದಾನ ಸೇವೆಗೆ ಮತ್ತು ಪಾರ್ಕಿಂಗ್ ಪ್ರದೇಶಗಳಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆಯನ್ನು ಕೈಗೊಂಡಿದ್ದರು.











































