ಅಯೋಧ್ಯೆ ದೇಣಿಗೆ ಕಳವು ಪ್ರಕರಣ: 8 ಆರೋಪಿಗಳ ಮನೆಗಳ ಮೇಲೆ ಪೊಲೀಸ್‌ ದಾಳಿ

Picture of Savistara

Savistara

Bureau Report

ಲಖನೌ: ಅಯೋಧ್ಯೆಯ ರಾಮಮಂದಿರದ ಕಾಣಿಕೆ ಕಳವು ಪ್ರಕರಣದಲ್ಲಿ ಬಂಧಿತರಾಗಿರುವ ಎಂಟು ಆರೋಪಿಗಳ ಮನೆಗಳ ಮೇಲೆ ಅಯೋಧ್ಯೆ ಪೊಲೀಸರು ಭಾನುವಾರ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಲವಕುಶ್ ಮಿಶ್ರಾ, ಅವಿನಾಶ್ ಶುಕ್ಲಾ ಮತ್ತು ರಾಮ್‌ಶಂಕ‌ರ್ ಯಾದವ್ ಸೇರಿದಂತೆ ಆರೋಪಿಗಳ ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.ಎಂಟು ಆರೋಪಿಗಳನ್ನು ಜೂನ್ 29ರವರೆಗೆ ವಶಕ್ಕೆ ಒಪ್ಪಿಸಿದ ಎರಡು ದಿನಗಳ ಬಳಿಕ ಈ ದಾಳಿ ನಡೆದಿದೆ.ಕಾಣಿಕೆ ಹಣ ಹಾಗೂ ದೇಣಿಗೆಯನ್ನು ಅಕ್ರಮವಾಗಿ ಹೇಗೆ ವರ್ಗಾಯಿಸಲಾಯಿತು ಹಾಗೂ ಎಷ್ಟು ಮೊತ್ತ ನಗದು ಕಳವು ಮಾಡಲಾಗಿದೆ ಎಂಬುದರ ಕುರಿತು ತನಿಖೆ ಮುಂದುವರಿದಿದೆ. ಸೋಮವಾರದಂದು ಆರೋಪಿಗಳನ್ನು ಕಸ್ಟಡಿಗೆ ಪಡೆಯುವುದಕ್ಕೆ ಸಂಬಂಧ ಪೊಲೀಸರು ಅಯೋಧ್ಯೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವ ನಿರೀಕ್ಷೆ ಇದೆ.

ಅವಿನಾಶ್ ಶುಕ್ಲಾ, ಅನುಕಲ್ಸ್ ಮಿಶ್ರಾ, ಲವಕುಶ್ ಮಿಶ್ರಾ, ಮನೀಶ್ ಕುಮಾರ್ ಯಾದವ್, ಕರುಣೇಶ್ ಪಾಂಡೆ, ರಾಮಶಂಕ‌ರ್ ಮಿಶ್ರಾ, ಸುಭಾಷ್ ಶ್ರೀವಾತ್ಸವ ಹಾಗೂ ರಾಮಶಂಕರ್ ಅಲಿಯಾಸ್ ಟಿನ್ನು ಯಾದವ್‌ ಬಂಧಿತರು. ಈವರೆಗೆ ಆರೋಪಿಗಳಿಂದ ₹79.85 ಲಕ್ಷ ನಗದು ವಶಕ್ಕೆ ಪಡೆಯಲಾಗಿದೆ.

[t4b-ticker]
error: Content is protected !!