ತೂಗು ಸೇತುವೆ ಸರದಾರ ಡಾ.ಗಿರೀಶ್ ಭಾರಧ್ವಾಜ್ ನಿಧನ | ಸುಳ್ಯ ಮಂಡಲ ಬಿಜೆಪಿ ಸಂತಾಪ

Picture of Savistara

Savistara

Bureau Report

ಸುಳ್ಯ : ತೂಗು ಸೇತುವೆ ಸರದಾರರು,ಗ್ರಾಮೀಣ ಪ್ರದೇಶ ಸಾಮಾನ್ಯ ಜನರಿಗೆ ತೂಗು ಸೇತುವೆ ನಿರ್ಮಿಸಿ ಸಂಪರ್ಕ ವ್ಯವಸ್ಥೆ ಕಲ್ಪಿಸಿದ ಪದ್ಮಶ್ರೀ ಡಾ.ಗಿರೀಶ್ ಭಾರಧ್ವಾಜ್ ನಿಧನರಾಗಿದ್ದು ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆಯೆಂದು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಸುಳ್ಯ ಮಾತ್ರವಲ್ಲದೆ ದೇಶದ ಆನೇಕ ಕಡೆ ನೂರಾರು ಸೇತುವೆ ನಿರ್ಮಿಸಿ ಗ್ರಾಮೀಣ ಭಾರತದ ಜನರಿಗೆ ಸಂಪರ್ಕದ ಕೊಂಡಿಯಾಗಿ ಬ್ರಿಡ್ಜ್ ಮ್ಯಾನ್ ಯೆಂದು ಗುರುತಿಸಿಕೊಂಡ ಮಹಾನ್ ವ್ಯಕ್ತಿ, ಸುಳ್ಯ ತಾಲೂಕಿನ ಆರಂಬೂರು, ಕುಕ್ಕುಂಬಳ, ಓಡಾಬೈ, ಪಂಜಿಕಲ್ಲು- ಮೂರೂರು ಹೀಗೆ ನಮ್ಮ ತಾಲೂಕಿನಲ್ಲೂ ತೂಗು ಸೇತುವೆ ನಿರ್ಮಿಸುವ ಮೂಲಕ ಜನರಿಗೆ ಸಂಪರ್ಕ ಸೇತುವೆಯಾದವರು ಗಿರೀಶ್ ಭಾರಧ್ವಾಜ್ ಅವರ ಕೊಡುಗೆಯನ್ನು ಸಮಾಜ ಎಲ್ಲಾ ಕಾಲಕ್ಕೂ ನೆನಪಿಸುತ್ತದೆ ಇವರ ಸಾಧನೆಗೆ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿರುವುದನ್ನು ನೆನಪಿಸಿಕೊಳ್ಳುತ್ತಿದ್ದೇವೆ.

ಆದರೆ ಇಂದು ನಮ್ಮ ಜೊತೆಯಿಲ್ಲ ಅವರ ಸಾಧನೆ ನಮ್ಮ ಕಣ್ಣು ಮುಂದಿದೆ ಶ್ರೀಯುತರ ಆತ್ಮಕ್ಕೆ ಸುಳ್ಯ ಬಿಜೆಪಿ ಮಂಡಲ ಸಮಿತಿ ವತಿಯಿಂದ ನಮನಗಳನ್ನು ಸಲ್ಲಿಸುತ್ತಿದ್ದೇವೆಂದು ಮಂಡಲ ಬಿಜೆಪಿ ಅಧ್ಯಕ್ಷ ವೆಂಕಟ್ ವಳಲಂಬೆ ಹೇಳಿಕೆಯಲ್ಲಿ ತಿಳಿಸಿದ್ದಾರೆ

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!