ರಾಜೀನಾಮೆ ನೀಡುವುದಿಲ್ಲ: ರಾಮಮಂದಿರ ಟ್ರಸ್ಟ್‌ ಖಜಾಂಚಿ

Picture of Savistara

Savistara

Bureau Report

ಪುಣೆ: ಅಯೋಧ್ಯೆ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಖಜಾಂಚಿ ಗೋವಿಂದ ದೇವ್ ಗಿರಿ ಮಹಾರಾಜ್ ಅವರು ರಾಮಮಂದಿರದ ಮೇಲ್ವಿಚಾರಣೆಯಲ್ಲಿ ಲೋಪಗಳಾಗಿವೆ ಎಂದು ಮಂಗಳವಾರ ಒಪ್ಪಿಕೊಂಡಿದ್ದಾರೆ. ಆದರೆ, ದೇಣಿಗೆ ಕಳವು ಪ್ರಕರಣಕ್ಕೆ ಸಂಬಂಧಿಸಿ ತಾವು ರಾಜೀನಾಮೆ ನೀಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

‘ರಾಜೀನಾಮೆ ನೀಡುವುದಿಲ್ಲ, ಏಕೆಂದರೆ ವೈಯಕ್ತಿಕವಾಗಿ ನಾವು ತಪ್ಪಿತಸ್ಥರೆಂದು ಪರಿಗಣಿಸುವುದಿಲ್ಲ’ ಎಂದು ಅವರು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.’ರಾಜೀನಾಮೆ ನೀಡುತ್ತೇನೆ ಎಂದು ಎಲ್ಲೂ ಹೇಳಿಲ್ಲ. ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿ, ಓಡಿ ಹೋಗುವವರಲ್ಲಿ ನಾನು ಸೇರಿಲ್ಲ. ಸಮಯ ಬಂದಾಗ ಹೋರಾಡುತ್ತೇನೆ, ಕ್ಷೇತ್ರ ತೊರೆಯುವುದು ನನ್ನ ಧರ್ಮದಲ್ಲಿಲ್ಲ’ ಎಂದರು.’ಈ ಪ್ರಕರಣಕ್ಕೆ ಸಂಬಂಧಿಸಿ ಬಂಧನಕ್ಕೆ ಒಳಗಾಗಿರುವ ಎಲ್ಲರೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಉದ್ಯೋಗಿಗಳು. ಬ್ಯಾಂಕ್ ಅಧಿಕಾರಿಗಳು ಅವರ ಅರ್ಹತೆಯನ್ನು ಪರಿಶೀಲಿಸಬೇಕಾಗಿತ್ತು ಮತ್ತು ಹೆಚ್ಚು ಜಾಗರೂಗರಾಗಿರಬೇಕಿತ್ತು’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ರಾಮಮಂದಿರದ ಹುಂಡಿ ಮೂಲಕ ಸಂಗ್ರಹವಾದ ದೇಣಿಗೆ ಮತ್ತು ಲೆಕ್ಕಪತ್ರ ನಿರ್ವಹಣೆಯನ್ನು ಎಸ್‌ಬಿಐಗೆ ವಹಿಸಲಾಗಿದೆ ಎಂದು ಗಿರಿ ಮಹಾರಾಜ್ ಹೇಳಿದರು.

‘ವೈಯಕ್ತಿಕ ಅಂದಾಜಿನ ಪ್ರಕಾರ ₹3 ಕೋಟಿಯಷ್ಟು ದೇಣಿಗೆ ಕಳವು ಆಗಿರಬೇಕು, ಆದರೆ ಇದು ಅಧಿಕೃತ ಅಥವಾ ನಿಖರ ಅಂಕಿ ಅಂಶ ಅಲ್ಲ’ ಎಂದು ಅವರು ಹೇಳಿದರು. ದೇಣಿಗೆ ಕಳವು ಪ್ರಕರಣಕ್ಕೆ ಸಂಬಂಧಿಸಿ ಎಸ್‌ಐಟಿ ತನಿಖೆ ನಡೆಯುತ್ತಿರುವುದು ಮತ್ತು ಸುಪ್ರೀಂ ಕೋರ್ಟ್ ಇದರ ಮೇಲೆ ನಿಗಾ ವಹಿಸಿರುವುದರ ಮೇಲೆ ತೃಪ್ತಿ ಇದೆ ಎಂದರು.ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ಸ್ವಯಂಪ್ರೇರಣೆಯಿಂದ ರಾಜೀನಾಮೆ ನೀಡಿದ್ದಾರೆ. ಟ್ರಸ್ಟ್‌ನ ನಿಯಮಗಳ ಪ್ರಕಾರ ರಾಜೀನಾಮೆ ನೀಡಿದ ನಂತರ ಅದನ್ನು ಅಂಗೀಕರಿಸಲಾಗಿದೆ’ ಎಂದರು.

[t4b-ticker]
error: Content is protected !!