ರಾಜ್ಯ ಉಪಾಧ್ಯಕ್ಷ ಡಾ.ಕೆವಿ ರೇಣುಕಾಪ್ರಸಾದ್ ವಿಶೇಷ ಮುತುವರ್ಜಿ | ರಾಜ್ಯ ಒಕ್ಕಲಿಗ ಸಂಘದಿಂದ ಸುಳ್ಯದಲ್ಲಿ ನೂತನ ವಿದ್ಯಾರ್ಥಿ ನಿಲಯಕ್ಕೆ ಗುದ್ದಲಿಪೂಜೆ

Picture of Savistara

Savistara

Bureau Report

ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದಿಂದ ಒಕ್ಕಲಿಗ ಸಂಘ ರಾಜ್ಯ ಉಪಾಧ್ಯಕ್ಷರಾದ ಡಾ.ಕೆವಿ ರೇಣುಕಾಪ್ರಸಾದ್ ಮುತುವರ್ಜಿಯಿಂದ ಸುಳ್ಯದ ಕೇರ್ಪಳ ಬಳಿ ವಿದ್ಯಾರ್ಥಿನಿಯರ ನೂತನ ವಸತಿ ನಿಲಯ ನಿರ್ಮಾಣಗೊಳ್ಳಲಿದ್ದು ಈ ಹಿನ್ನಲೆಯಲ್ಲಿ ಶಂಕುಸ್ಥಾಪನಾ ಕಾರ್ಯಕ್ರಮ ಇಂದು ನಡೆಯಿತು.ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಎಲ್.ಶ್ರೀನಿವಾಸ್ ನೂತನ ವಿದ್ಯಾರ್ಥಿ ನಿಲಯಕ್ಕೆ ಗುದ್ದಲಿಪೂಜೆ ನೆರವೇರಿಸಿದರು.

ಒಕ್ಕಲಿಗ ಸಂಘದ ಗೌರವಾಧ್ಯಕ್ಷ ಡಿ.ಕೆಂಪಣ್ಣ ಗೌಡ, ಕಾರ್ಯಾಧ್ಯಕ್ಷ ಡಾ.ಟಿ.ಎಚ್.ಆಂಜನಪ್ಪ, ಸಂಘದ ಉಪಾಧ್ಯಕ್ಷ ಡಾ.ರೇಣುಕಾಪ್ರಸಾದ್ ಕೆ.ವಿ. ಮತ್ತು ಪುಟ್ಟಸ್ವಾಮಿ, ಪ್ರಧಾನ ಕಾರ್ಯದರ್ಶಿ ಸಿ.ಜಿ.ಗಂಗಾಧರ್, ಖಜಾಂಚಿ ಕೆ.ವಿ.ಶ್ರೀಧರ್, ವಸತಿ ನಿಲಯ ಸಮಿತಿ ಅಧ್ಯಕ್ಷ ವೆಂಕಟರಾಮೇ ಗೌಡ,ಒಕ್ಕಲಿಗ ಸಂಘದ ಹದಿನಾಲ್ಕು ಮಂದಿ ನಿರ್ದೇಶಕರು,,ಸುಳ್ಯ ತಾಲೂಕಿನ ಪ್ರಮುಖರು ಈ ವೇಳೆ ಉಪಸ್ಥಿತರಿದ್ದರು.ಬಡ ಮಧ್ಯಮ ವರ್ಗದ ಜನತೆಗೆ ಈ ನೂತನ ವಿದ್ಯಾರ್ಥಿ ನಿಲಯ ಮುಂದಿನ ದಿನಗಳಲ್ಲಿ ಅನುಕೂಲವಾಗಲಿದೆಯೆಂದು ತಿಳಿಸಿದ್ದಾರೆ. ಈ ನೂತನ ವಿದ್ಯಾರ್ಥಿ ನಿಲಯ 1.10 ಎಕರೆಯಲ್ಲಿ 6.50 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದ್ದು 148 ವಿದ್ಯಾರ್ಥಿಗಳಿಗೆ ಅವಕಾಶವಾಗಲಿದ್ದೂ ಹೆಣ್ಣು ಮಕ್ಕಳಿಗೆ ಆದ್ಯತೆ ನೀಡಲಾಗುವುದೆಂದು ಒಕ್ಕಲಿಗ ಸಂಘ ಪ್ರಮುಖರು ತಿಳಿಸಿದ್ದಾರೆ.

News Updates

ಕೇಂದ್ರ ಸರ್ಕಾರದಿಂದ ಶಿವಮೊಗ್ಗ ನಗರ ಬೈಪಾಸ್ ಹಾಗೂ ನಗರ ವ್ಯಾಪ್ತಿಯ ಹೆದ್ದಾರಿ ಅಭಿವೃದ್ಧಿಗೆ 466.74 ಕೋಟಿ ರೂ. ಮಂಜೂರು; ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಸಂಸದ ಬಿ.ವೈ. ರಾಘವೇಂದ್ರ

[t4b-ticker]
error: Content is protected !!