ಕೆಂಪೇಗೌಡ ವಿಮಾನ ನಿಲ್ದಾಣ: ₹10 ಕೋಟಿಯ ಗಾಂಜಾ ಜಪ್ತಿ: ಉ.ಪ್ರದೇಶದ ನಾಲ್ವರ ಬಂಧನ

Picture of Savistara

Savistara

Bureau Report

ದೇವನಹಳ್ಳಿ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ₹10.4 ಕೋಟಿ ಮೌಲ್ಯದ 30 ಕೆ.ಜಿಹೈಡೋಪೊನಿಕ್ ಗಾಂಜಾ ಸಾಗಿಸಲು ಯತ್ನಿಸಿದ ಉತ್ತರ ಪ್ರದೇಶದ ನಾಲ್ವರನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

ನಮನ್ ಶರ್ಮಾ, ಉಷಾ, ದೀಪಾಂಶು ಶರ್ಮಾ, ಭಾರತ್ ಚೌಧರಿ ಎಂಬುವರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಆರೋಪಿಗಳು ವಿಯೆಟ್ನಾಂ ಹಾಗೂ ಮಲೇಷ್ಯಾದಿಂದ ಪ್ರತ್ಯೇಕವಾಗಿ ಬೆಂಗಳೂರಿಗೆ ಬಂದಿದ್ದರು. ವಿಯೆಟ್ನಾಂನಿಂದ ನಮನ್ ಶರ್ಮಾ, ಉಷಾ ಬುಧವಾರ ರಾತ್ರಿ 11 ಗಂಟೆ ಸುಮಾರಿಗೆ ಕೆಐಎ ಟರ್ಮಿನಲ್-2ಕ್ಕೆ ಬಂದಿದ್ದರು. ಮತ್ತೊಂದೆಡೆ ನಮನ್‌ ಶರ್ಮಾ ಸಹೋದರ ದೀಪಾಂಶು ಶರ್ಮಾ, ಭಾರತ್ ಚೌಧರಿ ಮಲೇಷ್ಯಾದಿಂದ ರಾತ್ರಿ 10.43ರ ಸುಮಾರಿಗೆ ಅದೇ ಟರ್ಮಿನಲ್‌ಗೆ ಬಂದಿದ್ದರು.ಆರೋಪಿಗಳ ಬಗ್ಗೆ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಮೊದಲೇ ಮಾಹಿತಿ ಲಭ್ಯವಾಗಿತ್ತು. ಕಾರ್ಯಾಚರಣೆ ನಡೆಸಿ ಗಾಂಜಾ ಜಪ್ತಿ ಮಾಡಿದ್ದಾರೆ.

News Updates

ಕೇಂದ್ರ ಸರ್ಕಾರದಿಂದ ಶಿವಮೊಗ್ಗ ನಗರ ಬೈಪಾಸ್ ಹಾಗೂ ನಗರ ವ್ಯಾಪ್ತಿಯ ಹೆದ್ದಾರಿ ಅಭಿವೃದ್ಧಿಗೆ 466.74 ಕೋಟಿ ರೂ. ಮಂಜೂರು; ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಸಂಸದ ಬಿ.ವೈ. ರಾಘವೇಂದ್ರ

[t4b-ticker]
error: Content is protected !!