ಪೆಟ್ರೋಲ್ ₹5, ಡೀಸೆಲ್‌ಗೆ ₹3 ಹೆಚ್ಚಿಸಿದ ನಯಾರಾ

Picture of Savistara

Savistara

Bureau Report

ನವದೆಹಲಿ (ಪಿಟಿಐ): ದೇಶದ ಖಾಸಗಿ ವಲಯದ ಅತಿದೊಡ್ಡತೈಲೋತ್ಪನ್ನ ಮಾರಾಟ ಕಂಪನಿ ನಯಾರಾ ಎನರ್ಜಿ ಪೆಟ್ರೋಲ್ ಬೆಲೆಯನ್ನು ಲೀಟರಿಗೆ ₹5, ಡೀಸೆಲ್ ಬೆಲೆಯನ್ನು ₹3 ಹೆಚ್ಚಿಸಿದೆ.ಪರಿಷ್ಕೃತ ದರವು ಶನಿವಾರದಿಂದಲೇ ಜಾರಿಗೆ ಬಂದಿದೆ.

ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ಅಡಚಣೆಗಳು ಕಚ್ಚಾ ತೈಲ ಮತ್ತು ಉತ್ಪನ್ನಗಳ ಮೇಲೆ ಪರಿಣಾಮ ಬೀರಿದೆ. ಇದರಿಂದ ಇಂಧನ ದರ ಹೆಚ್ಚಳವಾಗುತ್ತಿದೆ. ಕಂಪನಿಯು ಈ ಬೆಲೆ ಏರಿಕೆಯನ್ನು ಸರಿದೂಗಿಸಲು ಶ್ರಮಿಸುತ್ತಿದೆ. ಆದರೆ, ಒತ್ತಡ ಹೆಚ್ಚಾಗುತ್ತಿರುವುದರಿಂದ ಇಂಧನ ದರ ಹೆಚ್ಚಳ ಮಾಡಿದೆ ಎಂದು ಮೂಲಗಳು ತಿಳಿಸಿವೆ.ಪ್ರಸ್ತುತ ದೇಶದಾದ್ಯಂತ ನಯಾರಾ ಕಂಪನಿಯು 7,108 ಪೆಟ್ರೋಲ್‌ ಬಂಕ್‌ಗಳನ್ನು ನಿರ್ವಹಣೆ ಮಾಡುತ್ತಿದೆ. ಗುಜರಾತ್‌ನ ವಾದಿನಾರ್ ಬಳಿ ಇರುವ ಘಟಕದಲ್ಲಿ ವಾರ್ಷಿಕ 2 ಕೋಟಿ ಟನ್‌ನಷ್ಟು ಇಂಧನವನ್ನು ಸಂಸ್ಕರಣೆ ಮಾಡುತ್ತದೆ.ಪಶ್ಚಿಮ ಏಷ್ಯಾ ಬಿಕ್ಕಟ್ಟು ಶುರುವಾದಾಗ ಇಂಧನ ಪೂರೈಕೆಗೆ ಅಡ್ಡಿ ಉಂಟಾಗಿತ್ತು. ಇದರಿಂದ ನಯಾರಾ ಮಾರ್ಚ್ 26ರಂದು ಪೆಟ್ರೋಲ್ ಮತ್ತು ಡೀಸೆಲ್‌ ದರವನ್ನು ಲೀಟರ್‌ಗೆ ಕ್ರಮವಾಗಿ ₹5 ಮತ್ತು ₹3 ಹೆಚ್ಚಿಸಿತ್ತು. ಆಗ ಕಂಪನಿಯ ಬಂಕ್‌ಗಳಲ್ಲಿ ದರವು ಕ್ರಮವಾಗಿ ₹100.71 ಮತ್ತು ಡೀಸೆಲ್ ₹91.31 ಇತ್ತು. ಆದರೆ, ಸಂಘರ್ಷ ಕಡಿಮೆಯಾಗಿದ್ದರಿಂದ ಜುಲೈ 1ರಂದು ಕಂಪನಿಯು ಇಂಧನ ದರವನ್ನು ಹೆಚ್ಚಿಸಿದಷ್ಟೇ ಕಡಿಮೆ ಮಾಡಿತ್ತು.

News Updates

ಕೇಂದ್ರ ಸರ್ಕಾರದಿಂದ ಶಿವಮೊಗ್ಗ ನಗರ ಬೈಪಾಸ್ ಹಾಗೂ ನಗರ ವ್ಯಾಪ್ತಿಯ ಹೆದ್ದಾರಿ ಅಭಿವೃದ್ಧಿಗೆ 466.74 ಕೋಟಿ ರೂ. ಮಂಜೂರು; ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಸಂಸದ ಬಿ.ವೈ. ರಾಘವೇಂದ್ರ

[t4b-ticker]
error: Content is protected !!