ಸುಳ್ಯ :ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ಕ್ಷೇತ್ರದಲ್ಲಿ ಸೆಪ್ಟೆಂಬರ್ 18 ರಂದು ಶತ ರುದ್ರಾಭಿಷೇಕ ಮಹೋತ್ಸವ | ಎಳನೀರು ನೀಡಿ ಸಹಕರಿಸುವಂತೆ ಭಕ್ತಾದಿಗಳ ಮನವಿ

Picture of Savistara

Savistara

Bureau Report

​ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಇದೇ ಶುಕ್ರವಾರ, ದಿನಾಂಕ 18-09-2026 ರಂದು ವಿಶೇಷ ಶತರುದ್ರಾಭಿಷೇಕ ಮಹೋತ್ಸವ ಜರಗಲಿದೆ.​ಶತರುದ್ರಾಭಿಷೇಕದಂತಹ ಪವಿತ್ರ ಕಾರ್ಯಕ್ಕೆ ಸುಮಾರು 1200 ಎಳನೀರು ಅಗತ್ಯವಿದ್ದು, ಸೀಮೆಯ ಎಲ್ಲಾ ಗ್ರಾಮಗಳ ಭಕ್ತರು ಕೈಜೋಡಿಸಬೇಕಾಗಿ ದೇವಸ್ಥಾನ ಭಕ್ತರ ವತಿಯಿಂದ ಭಕ್ತಿಪೂರ್ವಕ ಮನವಿ ಮಾಡಲಾಗಿದೆ.​

ಭಕ್ತರಿಗೆ ಮನವಿ:ಪ್ರತಿ ಗ್ರಾಮದಿಂದ, ಪ್ರತಿ ಮನೆಯಿಂದ ಸಾಧ್ಯವಾದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಎಳನೀರನ್ನು ಸಮರ್ಪಿಸಲು ಕೋರಲಾಗಿದೆ. ಕನಿಷ್ಠ 5 ರಿಂದ 10 ಎಳನೀರು ನೀಡುವಂತೆ ಮನವಿ ಮಾಡಲಾಗಿದ್ದು, 5 ಕ್ಕಿಂತ ಕಡಿಮೆ ಇದ್ದರೂ ಪರವಾಗಿಲ್ಲ. ತಮ್ಮ ಶಕ್ತ್ಯಾನುಸಾರ ಒಂದೆರಡು ಎಳನೀರನ್ನಾದರೂ ಶಿವನ ಸೇವೆಗೆ ಅರ್ಪಿಸಬಹುದು.​”ನಾವು ಅರ್ಪಿಸುವ ಪ್ರತಿಯೊಂದು ಎಳನೀರೂ ಭಕ್ತಿಯ ಸಮರ್ಪಣೆಯಾಗಲಿ, ನಮ್ಮ ಪ್ರತಿಯೊಂದು ಮನೆಯ ಸೇವೆಯೂ ಶಿವನ ಪಾದಗಳಿಗೆ ಅರ್ಪಣೆಯಾಗಲಿದೆ” ಎಂದು ಆಯೋಜಕರು ತಿಳಿಸಿದ್ದಾರೆ.​

ಭಕ್ತರು ಯಾರು ಎಷ್ಟು ಎಳನೀರು ನೀಡುತ್ತೀರಿ ಎಂಬುದನ್ನು ಗುರುವಾರ ಮಧ್ಯಾಹ್ನದೊಳಗೆ ಮುಂಚಿತವಾಗಿ ತಿಳಿಸಬೇಕಾಗಿ ವಿನಂತಿಸಲಾಗಿದೆ. ಈ ಮಹಾಪುಣ್ಯ ಕಾರ್ಯದಲ್ಲಿ ಸೀಮೆಯ ಎಲ್ಲಾ ಭಕ್ತರು ಭಾಗವಹಿಸಿ ಶ್ರೀ ಪರಿವಾರ ಪಂಚಲಿಂಗೇಶ್ವರ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕಾಗಿ ಹೃದಯಪೂರ್ವಕ ಮನವಿ ಮಾಡಲಾಗಿದೆ.

[t4b-ticker]
error: Content is protected !!