ಗಮನಿಸಿ: ಬ್ಯಾಂಕ್‌ ಮುಷ್ಕರ, ಇಂದಿನಿಂದ 4 ದಿನ ಇರಲ್ಲ ಬ್ಯಾಂಕ್ ಸೇವೆ

Picture of Savistara

Savistara

Bureau Report

ಕೆಲಸದ ದಿನಗಳನ್ನು ಐದು ದಿನಗಳಿಗೆ ನಿಗದಿಪಡಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಯುನೈಟೆಡ್ ಫೋರಮ್ ಆಫ್‌ ಬ್ಯಾಂಕ್‌ ಯೂನಿಯನ್ಸ್ (UFBU) ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ. ಇದರಿಂದಾಗಿ ದೇಶದಾದ್ಯಂತ ಇರುವ ಸಾರ್ವಜನಿಕ ವಲಯದ ಬ್ಯಾಂಕುಗಳ ಸೇವೆಯಲ್ಲಿ ವ್ಯತ್ಯಯವಾಗಿದೆ.

ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಸುಧಾರಣೆಗಳನ್ನು ಜಾರಿಗೆ ತರುವಂತೆ ಒತ್ತಾಯಿಸಿ ದೇಶದಾದ್ಯಂತ ಇರುವ ಬ್ಯಾಂಕ್ ಯೂನಿಯನ್‌ಗಳು ಸೆಪ್ಟೆಂಬರ್ 11ರಂದು ಒಂದು ದಿನ ಮುಷ್ಕರಕ್ಕೆ ಕರೆ ನೀಡಿವೆ. ಇದರ ಜೊತೆಯಲ್ಲಿ ಇಂದಿನಿಂದ ನಾಲ್ಕು ದಿನಗಳ ಕಾಲ ಬ್ಯಾಂಕ್ ಸೇವೆ ಇರುವುದಿಲ್ಲ ಎಂಬುದು ಗಮನಾರ್ಹ ಸಂಗತಿ

ನಾಲ್ಕು ದಿನ ರಜೆ

ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್‌ (UFBU) ಬ್ಯಾಂಕ್‌ ಮುಷ್ಕರಕ್ಕೆ ಕರೆ ನೀಡಿರುವುದರಿಂದ ಶುಕ್ರವಾರ ಬ್ಯಾಂಕ್‌ ಬಂದ್‌ ಆಗಿವೆ. ಅದರ ಜೊತೆಯಲ್ಲಿ ಶನಿವಾರದಿಂದ ಮೂರು ದಿನಗಳ ಕಾಲ ಬ್ಯಾಂಕ್ ಸೇವೆ ಇರುವುದಿಲ್ಲ.

ಶುಕ್ರವಾರ – ಸೋಮವಾರ

ಶುಕ್ರವಾರ ಬ್ಯಾಂಕ್‌ ಮುಷ್ಕರದ ಕಾರಣಕ್ಕೆ ಬ್ಯಾಂಕ್ ಸೌಲಭ್ಯ ಇರುವುದಿಲ್ಲ. ಶನಿವಾರ (ಸೆ. 12) ಎರಡನೇ ಶನಿವಾರ ಆಗಿರುವುದರಿಂದ ಬ್ಯಾಂಕುಗಳಿಗೆ ಸಾಮಾನ್ಯ ರಜೆ ಇರಲಿದೆ. ಇನ್ನೂ ಭಾನುವಾರ (ಸೆ. 13) ಸಾಮಾನ್ಯ ರಜಾ ದಿನ. ಸೋಮವಾರ (ಸೆ. 14) ಗಣೇಶ ಚತುರ್ಥಿ ನಿಮಿತ್ತ ಸಾರ್ವಜನಿಕ ರಜಾ ದಿನ ಇರಲಿದೆ. ಹಾಗಾಗಿ, ಸೋಮವಾರ ಕೂಡ ಬ್ಯಾಂಕ್ ರಜೆ ಇರಲಿದೆ. ಆ ಮೂಲಕ ಒಟ್ಟು ನಾಲ್ಕು ದಿನಗಳ ಕಾಲ ಬ್ಯಾಂಕ್ ಸೌಲಭ್ಯ ಇರುವುದಿಲ್ಲ.

ಗ್ರಾಹಕರಿಗೆ ಸಲಹೆನಿಮ್ಮ ಯಾವುದೇ ಬ್ಯಾಂಕಿನ ಕೆಲಸ, ಕಾರ್ಯಗಳು ಇದ್ದರೂ ಇಂದೇ (ಗುರುವಾರ) ಮುಗಿಸಿಕೊಳ್ಳುವುದು ಉತ್ತಮ.ಹಣ ಹಾಕುವುದು, ಹಣ ಹಿಂಪಡೆಯುವುದು, ಲೋನ್ ಪಾವತಿ ಸೇರಿ ಎಲ್ಲಾ ತುರ್ತು ಬ್ಯಾಂಕಿಂಗ್ ಕೆಲಸಗಳನ್ನು ಇಂದೇ ಮುಗಿಸಿಕೊಳ್ಳಿ

ATM ಹಣ ಸಿಗುವುದು ಅನುಮಾನ: ಸತತವಾಗಿ 4 ದಿನಗಳ ಕಾಲಬ್ಯಾಂಕ್ ರಜೆ ಇರುವುದರಿಂದ ಎಟಿಎಂನಲ್ಲಿ ಹಣ ಸಿಗುವುದು ಕೂಡ ಅನುಮಾನ.

ಬ್ಯಾಂಕ್ ರಜೆ ಇದ್ದರೇನು? ಎಟಿಎಂನಲ್ಲಿ ಕ್ಯಾಶ್ ತೆಗೆದುಕೊಳ್ಳಬಹುದು ಎಂದುಕೊಳ್ಳಬೇಡಿ. ಎಟಿಎಂ ಮಷಿನ್‌ಗೆ ಇಂದೇ ಹಣ ತುಂಬಿಸಿ ಬ್ಯಾಂಕ್‌ ಸಿಬ್ಬಂದಿ ರಜೆಗೆ ಹೋಗುವುದರಿಂದ ಹಣದ ಲಭ್ಯತೆ ಎಷ್ಟು ದಿನಗಳ ಕಾಲ ಇರಲಿದೆ ಎಂಬುದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ.ಒಟ್ಟಾರೆಯಾಗಿ ಮುಂದಿನ ನಾಲ್ಕು ದಿನಗಳ ಕಾಲ ಬ್ಯಾಂಕ್‌ ಸೌಲಭ್ಯದ ಬಹುತೇಕ ಇಲ್ಲದಿರುವುದರಿಂದ ಇಂದೇ ನಿಮ್ಮ ಎಲ್ಲಾ ಬ್ಯಾಂಕಿನ ಕೆಲಸ ಕಾರ್ಯಗಳನ್ನು ಮುಗಿಸಿಕೊಳ್ಳುವು ಉತ್ತಮ.

ಬ್ಯಾಂಕ್ ಮುಷ್ಕರ ಏಕೆ?

ವಾರದಲ್ಲಿ ಐದು ದಿನಗಳ ಕೆಲಸದ ಘೋಷಣೆ ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಯುನೈಟೆಡ್ ಫೋರಮ್ ಆಫ್ ಬ್ಯಾಂಕ್‌ ಯೂನಿಯನ್ಸ್‌ ಸರ್ಕಾರದ ಮುಂದಿಟ್ಟಿದೆ. ಈ ಬೇಡಿಕೆಗಳು ಈಡೇರದಿದ್ದರೆ ಮುಂದಿನ ದಿನಗಳಲ್ಲಿ 3 ದಿನಗಳ ಮುಷ್ಕರ ಹಾಗೂ ಅನಿರ್ದಿಷ್ಟಾವಧಿ ಮುಷ್ಕರವನ್ನೂ ನಡೆಸಲು ನಿರ್ಧರಿಸಿವೆ.ಸೆಪ್ಟೆಂಬರ್ 11ರ ಸಾಂಕೇತಿಕ ಮುಷ್ಕರದ ನಂತರವೂ ಸರ್ಕಾರ ಹಾಗೂ ಭಾರತೀಯ ಬ್ಯಾಂಕುಗಳ ಒಕ್ಕೂಟ (IBA) ಸ್ಪಂದಿಸದಿದ್ದರೆ, ಮುಂದಿನ ಹಂತದಲ್ಲಿ ಮೂರು ದಿನಗಳ ಕಾಲ ದೇಶದಾದ್ಯಂತ ಸಂಪೂರ್ಣ ಬ್ಯಾಂಕ್ ಬಂದ್‌ ನಡೆಸಲಾಗುವುದು ಎಂದು ಒಕ್ಕೂಟ ತಿಳಿಸಿದೆ.ವರದಿಗಳ ಪ್ರಕಾರ, ಈ ಮೂರು ದಿನಗಳ ಮುಷ್ಕರ ಸೆಪ್ಟೆಂಬ‌ರ್ 28ರಿಂದ ನಡೆಯುತ್ತದೆ. ಅದಕ್ಕೂ ಫಲ ಸಿಕ್ಕದಿದ್ದರೆ ಅಕ್ಟೋಬ‌ರ್ 26ರಂದು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸುವುದಾಗಿ ಸಂಘಟನೆಗಳು ಎಚ್ಚರಿಕೆ ನೀಡಿವೆ.

News Updates

BREAKING NEWS ಸುಳ್ಯ :ಪಂಜ ಕಾಂಗ್ರೆಸ್ ಪಕ್ಷದ ಹುದ್ದೆಗೆ ರಾಜಿನಾಮೆ ನೀಡಿದ ದಿನೇಶ್ ಪುಂಡಿಮನೆ, ಕುಸುಮಾಧರ ಕೆರೆಯಡ್ಕ,ಲೋಕನಾಥ್ ಕುದ್ವ |ನಮ್ಮ ಮಾತನ್ನು ಪಕ್ಷದ ನಾಯಕರು ಉಳಿಸಿಕೊಂಡಿಲ್ಲ, ದೇವಸ್ಥಾನ ವ್ಯವಸ್ಥೆ ಸರಿದಾರಿಗೆ ತರುವ ಕೆಲಸವಾಗಲಿ: ದಿನೇಶ್ ಪುಂಡಿಮನೆ

News Updates

ಬೆಳ್ತಂಗಡಿ : ಮೊಗ್ರು ಜೈ ಶ್ರೀರಾಮ ಸೇವಾ ಟ್ರಸ್ಟ್ ಅಲೆಕ್ಕಿ -ಮುಗೇರಡ್ಕ ಮೊಗ್ರು, ಶ್ರೀ ರಾಮ ಶಿಶುಮಂದಿರದ 5 ನೇ ವರ್ಷದ ಶ್ರೀ ಕೃಷ್ಣೋತ್ಸವ. |ಕಾಶಿ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಇವರ ಸ್ಮರಣಾರ್ಥ ಕಾಶಿ ಶೆಟ್ಟಿ ವಿದ್ಯಾ ಮಂದಿರ, ಹಾಗೂ ಶಾಸಕ ಹರೀಶ್ ಪೂಂಜಾರವರ ನೆರವಿನ ಅಡುಗೆ ಕೋಣೆ ಉದ್ಘಾಟನಾ ಕಾರ್ಯಕ್ರಮ |ಮಕ್ಕಳ ಶ್ರೀಕೃಷ್ಣ ಮತ್ತು ರಾಧೆಯರ ಸ್ಪರ್ಧೆ, ಮೊಸರು ಕುಡಿಕೆ, ಆಟೋಟ ಸ್ಪರ್ಧೆ

[t4b-ticker]
error: Content is protected !!