ಬೆಂಗಳೂರು, ಸೆ. 09: ಕರಾವಳಿ ಜನರ ಬಹುದಿನದ ಬೇಡಿಕೆಯಾಗಿದ್ದ ಯಶವಂತಪುರ – ಮಂಗಳೂರು ಜಂಕ್ಷನ್ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ಕನಸು ನನಸಾಗುವ ಹಂತಕ್ಕೆ ಬಂದಿದೆ.ನೈಋತ್ಯ ರೈಲ್ವೆ (SWR) ನಾಳೆ ದಿನಾಂಕ 10-09-2026 (ಗುರುವಾರ)ಈ ಮಾರ್ಗದಲ್ಲಿ 16 ಬೋಗಿಗಳ ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರ (Trial Run) ನಡೆಸಿದ್ದು
ವೇಳಾಪಟ್ಟಿ ಹೇಗಿರಲಿದೆ?
ಬೆಳಿಗ್ಗೆ 06.50 ಕ್ಕೆ ಯಶವಂತಪುರದಿಂದ (YPR) ಹೊರಡುವ ರೈಲು, ಹಾಸನ (09.33), ಸಕಲೇಶಪುರ (10.25), ಸುಬ್ರಹ್ಮಣ್ಯ ರೋಡ್ (12.50), ಕಬಕಪುತ್ತೂರು (14.34) ಮಾರ್ಗವಾಗಿ *ಮಧ್ಯಾಹ್ನ 02.50 ಕ್ಕೆ ಮಂಗಳೂರು ಜಂಕ್ಷನ್ (MAJN) ತಲುಪಲಿದೆ.
ವಾಪಸ್ ಮಂಗಳೂರಿನಿಂದ ಮಧ್ಯಾಹ್ನ 03.10 ಕ್ಕೆ ಹೊರಟು ರಾತ್ರಿ 10.30 ಕ್ಕೆ ಯಶವಂತಪುರ ತಲುಪಲಿದೆ.
ಘಾಟ್ ಸೆಕ್ಷನ್‌ನಲ್ಲಿ ರೈಲಿನ ವೇಗ, ಸುರಕ್ಷತೆ ಮತ್ತು ಸಮಯ ಪಾಲನೆಯನ್ನು ಪರಿಶೀಲಿಸಿ ವರದಿ ನೀಡುವಂತೆ ರೈಲ್ವೆ ಮಂಡಳಿ ಸೂಚಿಸಿದೆ. ಈ ಟ್ರಯಲ್ ರನ್ ಯಶಸ್ವಿಯಾದರೆ, ಶೀಘ್ರದಲ್ಲೇ ಅಧಿಕೃತವಾಗಿ ವಂದೇ ಭಾರತ್ ಸೇವೆ ಆರಂಭವಾಗುವ ನಿರೀಕ್ಷೆಯಿದ
















































