ಹಬ್ಬ- ರಜೆ: IRCTCಯಲ್ಲಿ ಒಂದೇ ದಿನ 20 ಲಕ್ಷ ಟಿಕೆಟ್ ಬುಕಿಂಗ್, ಹೊಸ ದಾಖಲೆ!

Picture of Savistara

Savistara

Bureau Report

ಹಬ್ಬದ ಹಿನ್ನೆಲೆ ಸಾಲು ಸಾಲು ರಜೆ ಇರುವ ಕಾರಣ, ನಗರಗಳಿಂದ ಊರಿಗೆ ತೆರಳುವವರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಬಸ್, ರೈಲುಗಳ ಟಿಕೆಟ್ ಬುಕಿಂಗ್ ಕೂಡ ದಾಖಲೆ ಬರೆದಿದೆ.

ಈ ಬಗ್ಗೆ ಭಾರತೀಯ ರೈಲ್ವೆ (ಐಆರ್‌ಸಿಟಿಸಿ) ಮಾಹಿತಿ ಹಂಚಿಕೊಂಡಿದ್ದು, ಸೆ.7ರಂದು ಒಂದೇ ದಿನ ಬರೋಬ್ಬರಿ 20 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳು ಬುಕ್ ಆಗಿವೆ. ಇದು ದಾಖಲೆಯಾಗಿದೆ. ಅದೇ ರೀತಿ ಸೆ.8 ರಂದು 19.50 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳು ಬುಕ್ ಆಗಿವೆ ಎಂದು ಹೇಳಿದೆ.ಕಳೆದ ವರ್ಷದ ಹಬ್ಬದ ಅವಧಿಯಲ್ಲಿ ಒಂದೇ ದಿನ 18 ಲಕ್ಷ ಟಿಕೆಟ್ ಬುಕ್ ಆಗಿದ್ದವು. ಈ ಸಲ ಇದರ ಪ್ರಮಾಣ ಶೇ 6 ರಷ್ಟು ಹೆಚ್ಚಾಗಿದೆ. ಶೇ 89ರಷ್ಟು ಸೀಟುಗಳ ಕಾಯ್ದಿರಿಸುವಿಕೆ ಆನ್‌ಲೈನ್‌ನಲ್ಲೇ ಆಗಿದೆ. ಒತ್ತಡ ನಿಭಾಯಿಸಲು ಹೊಸ ಸರ್ವ‌್ರಗಳನ್ನು ಅಳವಡಿಸಲಾಗಿದ್ದು, ಆನ್‌ಲೈನ್ ಟಿಕೆಟ್‌ ಬುಕಿಂಗ್ ವ್ಯವಸ್ಥೆಯ ಸಾಮರ್ಥ್ಯವು ದುಪ್ಪಟ್ಟಾಗಿದೆ ಎಂದು ಐಆರ್‌ಸಿಟಿಸಿ ಹೇಳಿದೆ.2026ರ ಜುಲೈ 15ರಂದು ಐಆರ್‌ಸಿಟಿಸಿ ಹೊಸ ವೆಬ್‌ಸೈಟ್‌ ಅನ್ನು ಪರಿಚಯಿಸಿದೆ. ಇದರ ಮೂಲಕ ಪ್ರಯಾಣಿಕರು ಒಂದೇ ಪರದೆಯ ಮೇಲೆ ವಿವಿಧ ದರ್ಜೆಗಳಲ್ಲಿನ ಆಸನಗಳ ಲಭ್ಯತೆಯನ್ನು ವೀಕ್ಷಿಸಬಹುದು. ಅಲ್ಲದೆ, ಆ್ಯಂಟಿ-ಬಾಟ್ ವ್ಯವಸ್ಥೆಯ ಮೂಲಕ ಅನುಮಾನಾಸ್ಪದ ಬಾಟ್ ದಟ್ಟಣೆಯನ್ನು ಶೇ 55-65 ರಷ್ಟು ಕಡಿಮೆ ಮಾಡಿದೆ ಎಂದು ತಿಳಿಸಿದೆ.

ಟಿಕೆಟ್ ಬುಕಿಂಗ್ ವೇದಿಕೆಯ ವ್ಯವಸ್ಥೆಯ ಅನ್ವಯ, ಬುಕಿಂಗ್ ಪ್ರಕ್ರಿಯೆ ಆರಂಭವಾದ ಮೊದಲ 10 ನಿಮಿಷಗಳಲ್ಲಿ (ಬೆಳಗ್ಗೆ 8 ರಿಂದ 8:10 ರವರೆಗೆ) ಅಧಿಕೃತ ಟಿಕೆಟ್ ಏಜೆಂಟ್‌ಗಳಿಗೆ ಟಿಕೆಟ್‌ ಕಾಯ್ದಿರಿಸಲು ಅವಕಾಶವಿರುವುದಿಲ್ಲ. ಕಾಯ್ದಿರಿಸುವಿಕೆ ಆರಂಭವಾದಾಗ ಟಿಕೆಟ್ ಬುಕ್ ಮಾಡುವ ಬಳಕೆದಾರರಿಗೆ ಆಧಾರ್ ಪರಿಶೀಲನೆಯೂ ಕಡ್ಡಾಯವಾಗಿರುತ್ತದೆ.ರೈಲ್ವೆ ಟಿಕೆಟ್ ಕಾಯ್ದಿರಿಸುವಿಕೆಯಲ್ಲಿ ನಡೆಯುವ ವಂಚನೆಯನ್ನು ತಡೆಯಲು ಭಾರತೀಯ ರೈಲ್ವೆ ಈ ಕ್ರಮ ಕೈಗೊಂಡಿತ್ತು. ಇದರ ಪರಿಣಾಮ, ಈವರೆಗೆ 3.04 ಕೋಟಿ ಬಳಕೆದಾರರ ಐಡಿಗಳನ್ನು ನಿಷ್ಕ್ರಿಯಗೊಳಿಸಿದೆ. 6.33 ಕೋಟಿ ಐಡಿಗಳನ್ನು ಮರು-ಪರಿಶೀಲನೆಗಾಗಿ ಪಟ್ಟಿ ಮಾಡಿದೆ.ದಾಖಲೆ ಮಟ್ಟದ ಬುಕಿಂಗ್ ನಡೆದಿದ್ದರೂ, ಹೊಸ ಆನ್‌ಲೈನ್ ಟಿಕೆಟ್ ಬುಕಿಂಗ್ ವ್ಯವಸ್ಥೆಯಲ್ಲಿ ಯಾವುದೇ ಪ್ರಮುಖ ತಾಂತ್ರಿಕ ದೋಷ ಅಥವಾ ವ್ಯತ್ಯಯ ಉಂಟಾಗಿಲ್ಲ ಎಂದು ಐಆರ್‌ಸಿಟಿಸಿ ಸ್ಪಷ್ಟಪಡಿಸಿದೆ.

News Updates

BREAKING NEWS ಸುಳ್ಯ :ಪಂಜ ಕಾಂಗ್ರೆಸ್ ಪಕ್ಷದ ಹುದ್ದೆಗೆ ರಾಜಿನಾಮೆ ನೀಡಿದ ದಿನೇಶ್ ಪುಂಡಿಮನೆ, ಕುಸುಮಾಧರ ಕೆರೆಯಡ್ಕ,ಲೋಕನಾಥ್ ಕುದ್ವ |ನಮ್ಮ ಮಾತನ್ನು ಪಕ್ಷದ ನಾಯಕರು ಉಳಿಸಿಕೊಂಡಿಲ್ಲ, ದೇವಸ್ಥಾನ ವ್ಯವಸ್ಥೆ ಸರಿದಾರಿಗೆ ತರುವ ಕೆಲಸವಾಗಲಿ: ದಿನೇಶ್ ಪುಂಡಿಮನೆ

News Updates

ಬೆಳ್ತಂಗಡಿ : ಮೊಗ್ರು ಜೈ ಶ್ರೀರಾಮ ಸೇವಾ ಟ್ರಸ್ಟ್ ಅಲೆಕ್ಕಿ -ಮುಗೇರಡ್ಕ ಮೊಗ್ರು, ಶ್ರೀ ರಾಮ ಶಿಶುಮಂದಿರದ 5 ನೇ ವರ್ಷದ ಶ್ರೀ ಕೃಷ್ಣೋತ್ಸವ. |ಕಾಶಿ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಇವರ ಸ್ಮರಣಾರ್ಥ ಕಾಶಿ ಶೆಟ್ಟಿ ವಿದ್ಯಾ ಮಂದಿರ, ಹಾಗೂ ಶಾಸಕ ಹರೀಶ್ ಪೂಂಜಾರವರ ನೆರವಿನ ಅಡುಗೆ ಕೋಣೆ ಉದ್ಘಾಟನಾ ಕಾರ್ಯಕ್ರಮ |ಮಕ್ಕಳ ಶ್ರೀಕೃಷ್ಣ ಮತ್ತು ರಾಧೆಯರ ಸ್ಪರ್ಧೆ, ಮೊಸರು ಕುಡಿಕೆ, ಆಟೋಟ ಸ್ಪರ್ಧೆ

[t4b-ticker]
error: Content is protected !!