ದಕ್ಷಿಣ ಕನ್ನಡದಲ್ಲಿ ಶೀಘ್ರ ಉಚಿತ AI ವಿಶ್ವವಿದ್ಯಾಲಯ ಮತ್ತು ಆಸ್ಪತ್ರೆ: ಸದ್ಗುರು ಶ್ರೀ ಮಧುಸೂದನ ಸಾಯಿ ಘೋಷಣೆ

Picture of Savistara

Savistara

Bureau Report

ಮಂಗಳೂರು, ಸೆ. 12: ದಕ್ಷಿಣ ಕನ್ನಡ ಜಿಲ್ಲೆಯ ಜನತೆಗೆ ಸಿಹಿ ಸುದ್ದಿ. ಬಂಟ್ವಾಳ ತಾಲೂಕಿನ ಮಡಿಯಾಲದಲ್ಲಿ ಅತ್ಯಾಧುನಿಕ ಉಚಿತ AI ವಿಶ್ವವಿದ್ಯಾಲಯ ಮತ್ತು ಮಂಗಳೂರಿನಲ್ಲಿ 50 ಹಾಸಿಗೆಗಳ ಉಚಿತ ಆಸ್ಪತ್ರೆ ಸ್ಥಾಪನೆಯಾಗಲಿದೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಘೋಷಿಸಿದ್ದಾರೆ.ನಗರದಲ್ಲಿ ನಡೆದ ‘ದಿವ್ಯ ಸಂಜೆ’ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಶಿಕ್ಷಣ ಮತ್ತು ಸೇವೆ ಮೂಲಕ ಉತ್ತಮ ಸಮಾಜದ ನಿರ್ಮಾಣ ನಮ್ಮ ಗುರಿ” ಎಂದರು.

ಪ್ರಮುಖ ಅಂಶಗಳು:

ಸ್ಥಳ: ಮಡಿಯಾಲ, ಬಂಟ್ವಾಳ ತಾಲೂಕು – AI ತಂತ್ರಜ್ಞಾನದಲ್ಲಿ ಉಚಿತ ಉನ್ನತ ಶಿಕ್ಷಣ ಕೇಂದ್ರ. ಎಲ್ಲಾ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತ ಶಿಕ್ಷಣ.

ಪ್ರವೇಶ ಪ್ರಾರಂಭ: 2027ರ ಜೂನ್ ನಿಂದ ಹೊಸ ಶೈಕ್ಷಣಿಕ ವರ್ಷದ ಪ್ರವೇಶ ಆರಂಭ.-

ಕೋರ್ಸ್‌ಗಳು: AI, Machine Learning, Computer Science, Data Science & Robotics ಕ್ಷೇತ್ರಗಳಲ್ಲಿ ಆಧುನಿಕ ಕೋರ್ಸ್‌ಗಳು, ಸಂಶೋಧನೆ ಮತ್ತು ಕೌಶಲ್ಯ ತರಬೇತಿ.-

ಆರೋಗ್ಯ ಸೇವೆ: ಮಂಗಳೂರಿನಲ್ಲಿ 50 ಹಾಸಿಗೆಗಳ ಚಾರಿಟಿ ಆಸ್ಪತ್ರೆ. ಬಡವರು ಮತ್ತು ಅಗತ್ಯವಿರುವವರಿಗೆ ಉಚಿತ ಚಿಕಿತ್ಸೆ.-

ಮಿಷನ್: One World One Family Mission – ಸೇವೆ, ಶಿಕ್ಷಣ, ಆರೋಗ್ಯ, ಮಾನವೀಯತೆ.

ಈ ಯೋಜನೆಯು ಕರಾವಳಿ ಭಾಗದ ವಿದ್ಯಾರ್ಥಿಗಳಿಗೆ ಅಂತರಾಷ್ಟ್ರೀಯ ಮಟ್ಟದ AI ಶಿಕ್ಷಣವನ್ನು ಉಚಿತವಾಗಿ ನೀಡುವ ಮಹತ್ವದ ಹೆಜ್ಜೆಯಾಗಿದೆ.

[t4b-ticker]
error: Content is protected !!