ಪಂಜ :ಪಂಜ ಸೀಮೆಯ ಪರಿವಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಮತ್ತೆ ಸುದ್ದಿಯಲ್ಲಿದ್ದು ಈ ಹಿಂದೆ ಲೆಕ್ಕಪತ್ರ ವಿಚಾರವಾಗಿ ಆಡಳಿತ ಸಮಿತಿ ಮತ್ತು ಭಕ್ತರ ನಡುವೆ ಸಭೆ ನಡೆದರು ಅಂತಿಮವಾಗಿ ಹೇಳಿಕೆಗೆ ಸೀಮಿತವಾಗಿ ವಿವಾದ ಮುಂದುವರಿದಿತ್ತು ತದನಂತರ ಮೂವರು ಟ್ರಸ್ತಿ ಗಳು ರಾಜೀನಾಮೆ ನೀಡಿದ್ದರು, ನಂತರ ಭಕ್ತರು ಕ್ಷೇತ್ರದಲ್ಲಿ ಶಿವ ಪಂಚಾಕ್ಷರಿ ಮಂತ್ರ ಪಠಣ ಪ್ರಾರಂಭಿಸಿದ್ದರು ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಬಿಜೆಪಿ ದೇವಸ್ಥಾನ ವಿಚಾರವಾಗಿ ರಾಜಕೀಯ ಮಾಡುತ್ತಿದೆಯೆಂದು ಪತ್ರಿಕಾಗೋಷ್ಠಿ ನಡೆಸಿ ಆರೋಪ ಮಾಡಿದ್ದರು ಈ ವೇಳೆ ಕಾಂಗ್ರೆಸ್ ಸ್ಥಳೀಯ ಮುಖಂಡರು ದೇವಸ್ಥಾನ ಅಧ್ಯಕ್ಷರು ರಾಜೀನಾಮೆ ನೀಡುವಂತೆ ಒತ್ತಾಯಿಸಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು ಇದೀಗ ಪರಿವಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಆರೋಪ ಹೊತ್ತಿರುವ ವ್ಯಕ್ತಿಯನ್ನು ಅರ್ಚಕರಾಗಿ ನೇಮಿಸಲಾಗಿದೆ ಎಂದು ಭಕ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಪ್ರಕರಣದ ಆರೋಪಿತನಾದ ಬೆಳ್ತಂಗಡಿ ತೆಕ್ಕಾರು ನಿವಾಸಿ ಶೇಷಗಿರಿ ಎಂಬಾತ ಪಿರ್ಯಾದಿದಾರರ ಮಗಳ ಮೊಬೈಲ್ ಸಂಖ್ಯೆಯನ್ನು ಪಡೆದುಕೊಂಡು ಆಕೆಯೊಂದಿಗೆ ದೂರವಾಣಿ ಮೂಲಕ ಸಂಪರ್ಕದಲ್ಲಿದ್ದ, ಆಕೆಯನ್ನು ಮದುವೆಯಾಗುವುದಾಗಿ ಒತ್ತಾಯಿಸಿ ಕಿರುಕುಳ ನೀಡಿರುತ್ತಾನೆ.
ಮುಂದುವರಿದಂತೆ ದಿನಾಂಕ: 29-11-2025 ರಂದು ತಡರಾತ್ರಿ ಸದ್ರಿ ಆರೋಪಿಯು ದೂರುದಾರರ ಮನೆ ಬಳಿಯ ಕೊಟ್ಟಿಗೆಗೆ ಕತ್ತಿಯನ್ನು ಹಿಡಿದುಕೊಂಡು ಬಂದಿರುತ್ತಾನೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ದಿನಾಂಕ: 30-11-2025 ರಂದು ಉಪ್ಪಿನಂಗಡಿ ಪೊಲೀಸ್ ಠಾಣಾ ಅ.ಕ್ರ: 112/2025, ៩០: 78(1)(i), 329(3), 329(4) BNS 2023 03 ಪ್ರಕರಣ ದಾಖಲಾಗಿರುತ್ತದೆ.
ಪ್ರಸ್ತುತ ಸದ್ರಿ ಪ್ರಕರಣದ ತನಿಖೆ ಮುಗಿದು ದಿನಾಂಕ: 25-02-2026 ರಂದು ಮಾನ್ಯ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದು, ಮಾನ್ಯ ನ್ಯಾಯಲಯದಲ್ಲಿ ವಿಚಾರಣೆಯಲ್ಲಿರುತ್ತದೆ. ಈ ಎಲ್ಲಾ ಅಂಶಗಳ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು ಇಂತಹ ಆರೋಪ ಹೊತ್ತಿರುವವರನ್ನು ನೇಮಕ ಮಾಡಿದ್ದೂ ಸರಿಯಲ್ಲವೆಂದು ಅಭಿಪ್ರಾಯ ಪಟ್ಟಿದ್ದಾರೆ. ಕಳೆದ ಅನೇಕ ದಿನಗಳಿಂದ ಅನೇಕ ಘಟನಾವಳಿ ನಡೆದಿದ್ದು ಧಾರ್ಮಿಕ ಕ್ಷೇತ್ರದಲ್ಲಿ ಈ ರೀತಿಯ ಬೆಳವಣಿಗೆ ಸರಿಯಲ್ಲವೆಂದು ಭಕ್ತರು ಅಭಿಪ್ರಾಯ ಪಟ್ಟಿದ್ದೂ ಇದಕ್ಕೆಲ್ಲ ತಾರ್ಕಿಕ ಅಂತ್ಯ ಹಾಡಬೇಕೆಂದು ಕ್ಷೇತ್ರದ ಭಕ್ತರ ಆಶಾಯವಾಗಿದೆ















































