ಪತಿಯನ್ನೇ ತೊರೆದು ಬಾಲ್ಯದ ಗೆಳೆಯನ ಜೊತೆ ಓಡಿಹೋದ ಪತ್ನಿ: ಠಾಣೆಯಲ್ಲೇ ಕಾದಿತ್ತು ಬಿಗ್ ಟ್ವಿಸ್ಟ್!

Picture of Savistara

Savistara

Bureau Report

​ಲಕ್ನೋ: ತನ್ನನ್ನು ಬಿಟ್ಟು ಬಾಲ್ಯದ ಗೆಳೆಯನೊಂದಿಗೆ ಬಾಳಲು ಹಠ ಹಿಡಿದ ಹೆಂಡತಿಯ ಇಷ್ಟಕ್ಕೆ ಅಡ್ಡಿಬಾರದೆ, ಸ್ವತಃ ಗಂಡನೇ ಮುಂದೆ ನಿಂತು ಆಕೆಯನ್ನು ಆಕೆಯ ಪ್ರೇಮಿಗೆ ಮದುವೆ ಮಾಡಿಸಿಕೊಟ್ಟು ಕಳುಹಿಸಿರುವ ಅಪರೂಪದ ಹಾಗೂ ಅಚ್ಚರಿಯ ಘಟನೆಯೊಂದು ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ.​

ಪ್ರಾಂತೀಯ ರಕ್ಷಕ ದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಿಕ್ಕಿ ಎಂಬುವವರೇ ಈ ದೊಡ್ಡ ಮನಸ್ಸು ಮಾಡಿದ ಪತಿ. ಈತನ ಪತ್ನಿ ಸೋನಾಲಿ ಹಾಗೂ ಆಕೆಯ ಪ್ರಿಯಕರ ಶಾಲಾ ದಿನಗಳಿಂದಲೂ ಜೊತೆಯಾಗಿ ಓದಿಕೊಂಡು ಬೆಳೆದವರು. ಬಾಲ್ಯದ ಆ ಸ್ನೇಹ ದಿನಗಳು ಕಳೆದಂತೆ ಗಾಢ ಪ್ರೇಮವಾಗಿ ಮಾರ್ಪಟ್ಟಿತ್ತು.​ಸುಮಾರು 1 ವರ್ಷದ ಹಿಂದೆ ಕುಟುಂಬದ ಹಿರಿಯರು ನಿಶ್ಚಯಿಸಿ ಸೋನಾಲಿಯನ್ನು ರಕ್ಷಕ ದಳದ ಸಿಬ್ಬಂದಿ ವಿಕ್ಕಿ ಜೊತೆ ಶಾಸ್ತ್ರೋಕ್ತವಾಗಿ ವಿವಾಹ ಮಾಡಿಕೊಟ್ಟಿದ್ದರು. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೇಲೂ ಸೋನಾಲಿಗೆ ತನ್ನ ಹಳೆಯ ಪ್ರೇಮವನ್ನು ಮರೆಯಲು ಸಾಧ್ಯವಾಗಿರಲಿಲ್ಲ. ನಿತ್ಯವೂ ಆಕೆ ತನ್ನ ಬಾಲ್ಯದ ಗೆಳೆಯನೊಂದಿಗೆ ದೂರವಾಣಿ ಮೂಲಕ ಸಂಪರ್ಕದಲ್ಲಿದ್ದು ಮಾತನಾಡುತ್ತಿದ್ದಳು.​

ಈ ನಡುವೆ ಸೆಪ್ಟೆಂಬರ್ 5 ರಂದು ಸೋನಾಲಿ ಗಂಡನ ಮನೆಯಿಂದ ಯಾರಿಗೂ ಹೇಳದೆ ಏಕಾಏಕಿ ನಾಪತ್ತೆಯಾಗಿದ್ದಳು. ಕುಟುಂಬಸ್ಥರು ಎಲ್ಲಾ ಕಡೆ ಹುಡುಕಾಡಿದರೂ ಆಕೆಯ ಸುಳಿವು ಸಿಗಲಿಲ್ಲ. ಕಂಗಾಲಾದ ಪತಿ ವಿಕ್ಕಿ ಕೊನೆಗೆ ಪೊಲೀಸ್ ಠಾಣೆಗೆ ತೆರಳಿ ಪತ್ನಿ ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಚುರುಕುಗೊಳಿಸಿ, ಪಕ್ಕದ ಜಿಲ್ಲೆಗಳಿಗೂ ಮಾಹಿತಿ ರವಾನಿಸಿದ್ದರು. ಸತತ ಹುಡುಕಾಟದ ಬಳಿಕ ಸೋನಾಲಿ ಹರ್ದೋಯಿ ಎಂಬಲ್ಲಿ ತನ್ನ ಪ್ರಿಯಕರನ ಜೊತೆಯಲ್ಲಿ ಇರುವುದು ಬುಧವಾರ ಪೊಲೀಸರ ಗಮನಕ್ಕೆ ಬಂದಿದೆ.​

ತಕ್ಷಣವೇ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದು, ಇತ್ತ ಪತಿ ವಿಕ್ಕಿ ಹಾಗೂ ಎರಡೂ ಕುಟುಂಬದ ಹಿರಿಯರನ್ನೂ ಠಾಣೆಗೆ ಕರೆಯಿಸಿ ಸುದೀರ್ಘ ಸಂಧಾನ ನಡೆಸಿದರು. ಪೊಲೀಸರು ಮತ್ತು ಕುಟುಂಬಸ್ಥರು ಎಷ್ಟೇ ತಿಳಿಹೇಳಿದರೂ ಸೋನಾಲಿ ಮಾತ್ರ ಗಂಡನ ಮನೆಗೆ ಮರಳಲು ಒಪ್ಪಲೇ ಇಲ್ಲ. ತನಗೆ ಬಾಲ್ಯದ ಪ್ರಿಯಕರನೊಂದಿಗೆ ಬದುಕುವುದಷ್ಟೇ ಇಷ್ಟ, ಗಂಡನ ಜೊತೆ ಒಂದು ಕ್ಷಣವೂ ಬಾಳಲಾರೆ ಎಂದು ಆಕೆ ಸ್ಪಷ್ಟವಾಗಿ ಹಠ ಹಿಡಿದು ಕುಳಿತಳು.​

ಪತ್ನಿಯ ಈ ದೃಢ ನಿರ್ಧಾರವನ್ನು ಕೇಳಿ ಪತಿ ವಿಕ್ಕಿ ಕೆಲಕಾಲ ತಬ್ಬಿಬ್ಬಾದರೂ, ವಾಸ್ತವ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡರು. ಪ್ರೀತಿಯಿಲ್ಲದ ಕಡೆ ಬಲವಂತವಾಗಿ ಸಂಸಾರ ನಡೆಸುವುದು ಸರಿಯಲ್ಲ ಎಂದು ಭಾವಿಸಿದ ಆತ, “ಇಲ್ಲಿ ಯಾರ ಮೇಲೂ ಬಲವಂತವಿಲ್ಲ, ನೀನು ಯಾರ ಜೊತೆ ಸಂತೋಷವಾಗಿ ಇರುತ್ತೀಯೋ ಅವರ ಜೊತೆಯೇ ಇರು” ಎಂದು ಹೇಳಿ ಎಲ್ಲರನ್ನೂ ನಿಬ್ಬೆರಗಾಗಿಸಿದರು.​

ಬಳಿಕ ಎರಡೂ ಕಡೆಯವರ ಪರಸ್ಪರ ಸಮ್ಮತಿಯೊಂದಿಗೆ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಯಿತು. ನಂತರ ಸ್ಥಳೀಯ ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯದಂತೆ ಸೋನಾಲಿ ಹಾಗೂ ಆಕೆಯ ಪ್ರಿಯಕರನಿಗೆ ಸಪ್ತಪದಿ ತುಳಿಸಿ ಮದುವೆ ಮಾಡಿಸಲಾಯಿತು. ಸ್ವತಃ ಪತಿಯೇ ಮುಂದೆ ನಿಂತು ತನ್ನ ಹೆಂಡತಿಯನ್ನು ಆಕೆಯ ಪ್ರೇಮಿಯ ಕೈಗೆ ಒಪ್ಪಿಸಿ ಕಳುಹಿಸಿಕೊಟ್ಟಿದ್ದಾರೆ.

News Updates

BREAKING NEWS ಸುಳ್ಯ :ಪಂಜ ಕಾಂಗ್ರೆಸ್ ಪಕ್ಷದ ಹುದ್ದೆಗೆ ರಾಜಿನಾಮೆ ನೀಡಿದ ದಿನೇಶ್ ಪುಂಡಿಮನೆ, ಕುಸುಮಾಧರ ಕೆರೆಯಡ್ಕ,ಲೋಕನಾಥ್ ಕುದ್ವ |ನಮ್ಮ ಮಾತನ್ನು ಪಕ್ಷದ ನಾಯಕರು ಉಳಿಸಿಕೊಂಡಿಲ್ಲ, ದೇವಸ್ಥಾನ ವ್ಯವಸ್ಥೆ ಸರಿದಾರಿಗೆ ತರುವ ಕೆಲಸವಾಗಲಿ: ದಿನೇಶ್ ಪುಂಡಿಮನೆ

News Updates

ಬೆಳ್ತಂಗಡಿ : ಮೊಗ್ರು ಜೈ ಶ್ರೀರಾಮ ಸೇವಾ ಟ್ರಸ್ಟ್ ಅಲೆಕ್ಕಿ -ಮುಗೇರಡ್ಕ ಮೊಗ್ರು, ಶ್ರೀ ರಾಮ ಶಿಶುಮಂದಿರದ 5 ನೇ ವರ್ಷದ ಶ್ರೀ ಕೃಷ್ಣೋತ್ಸವ. |ಕಾಶಿ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಇವರ ಸ್ಮರಣಾರ್ಥ ಕಾಶಿ ಶೆಟ್ಟಿ ವಿದ್ಯಾ ಮಂದಿರ, ಹಾಗೂ ಶಾಸಕ ಹರೀಶ್ ಪೂಂಜಾರವರ ನೆರವಿನ ಅಡುಗೆ ಕೋಣೆ ಉದ್ಘಾಟನಾ ಕಾರ್ಯಕ್ರಮ |ಮಕ್ಕಳ ಶ್ರೀಕೃಷ್ಣ ಮತ್ತು ರಾಧೆಯರ ಸ್ಪರ್ಧೆ, ಮೊಸರು ಕುಡಿಕೆ, ಆಟೋಟ ಸ್ಪರ್ಧೆ

[t4b-ticker]
error: Content is protected !!