ಮೈಸೂರು :ಧನಂಜಯ್ ಧಮ್ಕಿಗೆ ತಿರುಗೇಟು: ಟಿ. ನರಸೀಪುರದಲ್ಲಿ ಮಸೀದಿ ರಸ್ತೆಯಲ್ಲಿ ಶೋಭಾಯಾತ್ರೆಗೆ ಹಿಂದೂ ಜಾಗರಣ ವೇದಿಕೆ ಸಜ್ಜು |ಆಗಮಿಸಲಿದ್ದಾರೆ 5 ಸಾವಿರ ಹಿಂದೂ ಕಾರ್ಯಕರ್ತರು

Picture of Savistara

Savistara

Bureau Report

ಮೈಸೂರು: ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್ (Inspector Dhananjay) ಅವರ ಎಚ್ಚರಿಕೆಗೆ ಪ್ರತಿಯಾಗಿ ಹಿಂದೂ ಜಾಗರಣ ವೇದಿಕೆ(Hindu Jagarana Vedike) ಬಹಿರಂಗ ಸವಾಲು ಹಾಕಿದ್ದು, ಮಸೀದಿ ರಸ್ತೆಯಲ್ಲೇ ಭವ್ಯ ಗಣೇಶ ಶೋಭಾಯಾತ್ರೆ ನಡೆಸಲು ಸಕಲ ಸಿದ್ಧತೆ ಕೈಗೊಂಡಿದೆ.ಟಿ. ನರಸೀಪುರದಲ್ಲಿ(T. Narasipura) ಇದೇ ಮೊದಲ ಬಾರಿಗೆ ಪೊಲೀಸ್ ಠಾಣೆಯಿಂದ ಕೇವಲ 200 ಮೀಟರ್ ಅಂತರದಲ್ಲಿ ಹಿಂದೂ ಮಹಾಗಣಪತಿಯನ್ನು ಅದ್ಧೂರಿಯಾಗಿ ಪ್ರತಿಷ್ಠಾಪಿಸಲಾಗಿದೆ. ಮಸೀದಿ ಇರುವ ಲಿಂಕ್ ರಸ್ತೆಯಲ್ಲಿ ಮೆರವಣಿಗೆ ಬಂದರೆ ಗ್ರಹಚಾರ ಬಿಡಿಸುತ್ತೇನೆ” ಎಂದು ಇನ್‌ಸ್ಪೆಕ್ಟರ್ ಧನಂಜಯ್ ಎಚ್ಚರಿಕೆ ನೀಡಿದ್ದರು ಎನ್ನಲಾದ ವಿಚಾರ ತೀವ್ರ ಸಂಚಲನ ಮೂಡಿಸಿತ್ತು. ಈ ಸವಾಲನ್ನು ಸ್ವೀಕರಿಸಿರುವ ಹಿಂದೂ ಜಾಗರಣ ವೇದಿಕೆ, ಸೆಪ್ಟೆಂಬರ್ 18ರಂದು ಅದೇ ಮಸೀದಿ ಇರುವ ಲಿಂಕ್ ರಸ್ತೆಯಲ್ಲೇ ಭವ್ಯ ಶೋಭಾಯಾತ್ರೆ ನಡೆಸುವುದಾಗಿ ಘೋಷಿಸಿದೆಈ ಕುರಿತು ಪ್ರತಿಕ್ರಿಯಿಸಿರುವ ಹಿಂದೂ ಜಾಗರಣ ವೇದಿಕೆಯ ಮುಖಂಡ ಮಹೇಶ್, “ಇನ್ಸ್‌ಪೆಕ್ಟರ್‌ ಧನಂಜಯ್ ಅವರ ಸವಾಲನ್ನು ನಾವು ಸ್ವೀಕರಿಸಿದ್ದೇವೆ. ಸೆಪ್ಟೆಂಬರ್ 18ರಂದು ಮಸೀದಿ ಇರುವ ಲಿಂಕ್ ರಸ್ತೆಯಲ್ಲೇ ಗಣೇಶ ಮೂರ್ತಿಯ ಭವ್ಯ ಮೆರವಣಿಗೆ ನಡೆಯಲಿದೆ. ಈ ಶೋಭಾಯಾತ್ರೆಗೆ ರಾಜ್ಯದ ವಿವಿಧ ಮೂಲೆಗಳಿಂದ 5 ಸಾವಿರಕ್ಕೂ ಅಧಿಕ ಹಿಂದೂ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಈ ಐತಿಹಾಸಿಕ ಮೆರವಣಿಗೆಯನ್ನು ಇನ್‌ಸ್ಪೆಕ್ಟರ್ ಧನಂಜಯ್ ಅವರು ಕಣ್ತುಂಬ ನೋಡಿಕೊಳ್ಳಲಿ ಎಂದು ನೇರ ತಿರುಗೇಟು ನೀಡಿದ್ದಾರೆ.

[t4b-ticker]
error: Content is protected !!