ನಾಗೋಯಾ: ಏಷ್ಯನ್ ಗೇಮ್ಸ್ ನಲ್ಲಿ ಶನಿವಾರ ನಡೆದ ಕಬಡ್ಡಿಫೈನಲ್‌ನಲ್ಲಿ ಇರಾನ್ ವಿರುದ್ಧ ಭಾರತದ ಮಹಿಳಾ ತಂಡವು 37-34 ಅಂತರದಿಂದ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಚಿನ್ನದ ಪದಕಕ್ಕೆ ಮುತ್ತಿಕ್ಕಿದೆ.
ತೀವ್ರ ಜಿದ್ದಾಜಿದ್ದಿಯಿಂದ ಕೂಡಿದ ಪಂದ್ಯದ ಮೊದಲಾರ್ಧದಲ್ಲಿ ಭಾರತ ತಂಡ 22-16ರಿಂದ ಮುನ್ನಡೆ ಸಾಧಿಸಿತ್ತು. ಆದರೆ, ದ್ವಿತೀಯಾರ್ಧದಲ್ಲಿ ಚೇತರಿಸಿಕೊಂಡ ಇರಾನ್ ಉತ್ತಮ ಪ್ರದರ್ಶನ ನೀಡಿತು. ಆದಾಗ್ಯೂ, ಆರಂಭಿಕ ಹಿನ್ನಡೆಯನ್ನು ಮೀರಲು ಇರಾನ್‌ಗೆ ಸಾಧ್ಯವಾಗಲಿಲ್ಲ.ಈ ಐತಿಹಾಸಿಕ ಗೆಲುವಿನ ಹಿನ್ನೆಲೆಯಲ್ಲಿ ಕ್ರೀಡಾಂಗಣದಲ್ಲಿ ‘ವಂದೇ ಮಾತರಂ’ ಗೀತೆಯನ್ನು ಮೊಳಗಿಸಲಾಯಿತು. ಭಾರತ ತಂಡವು ವಿಜಯೋತ್ಸವ ಆಚರಿಸಿತು.ಕಬ್ಬಡಿಯಲ್ಲಿ ಭಾರತದ ಪುರುಷರ ತಂಡವೂ ಫೈನಲ್ ಪ್ರವೇಶಿಸಿದ್ದು, ಇರಾನ್ ವಿರುದ್ಧ ಸೆಣಸಾಟ ನಡೆಸಲಿದೆ.
ಏಷ್ಯನ್ ಕ್ರೀಡಾಕೂಟದ ಕಬಡ್ಡಿ ಕ್ರೀಡೆಯಲ್ಲಿ ಭಾರತೀಯರು ಸಂಪೂರ್ಣ ಪ್ರಾಬಲ್ಯ ಮೆರೆದಿದ್ದಾರೆ. ಕೇವಲ ಒಂದು ಆವೃತ್ತಿಯನ್ನು ಹೊರತುಪಡಿಸಿ ಉಳಿದೆಲ್ಲಾ ಆವೃತ್ತಿಗಳಲ್ಲಿ ಪುರುಷರ ಮತ್ತು ಮಹಿಳೆಯರ ತಂಡಗಳು ಚಿನ್ನದ ಪದಕ ಗೆದ್ದುಕೊಂಡಿವೆ.2018ರ ಜಕಾರ್ತ ಗೇಮ್ಸ್‌ನಲ್ಲಿ ಇರಾನ್ ವಿರುದ್ದ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದನ್ನು ಹೊರತುಪಡಿಸಿ, ಭಾರತೀಯ ಮಹಿಳಾ ಕಬಡ್ಡಿ ತಂಡವು ಏಷ್ಯನ್ ಗೇಮ್ಸ್‌ನ ಪ್ರತಿಯೊಂದು ಆವೃತ್ತಿಯಲ್ಲೂ ಚಿನ್ನದ ಪದಕವನ್ನು ಗೆದ್ದುಕೊಂಡಿದೆ.
















































