ದಸರಾ ಉದ್ಘಾಟನೆಗೆ ಸರ್ಕಾರದ ವತಿಯಿಂದ 28ರಂದು ಅಧಿಕೃತ ಆಹ್ವಾನ: ತಂಗಡಗಿ

Picture of Savistara

Savistara

Bureau Report

ಕೊಪ್ಪಳ: ನಾಡಹಬ್ಬ ಮೈಸೂರು ದಸರಾವನ್ನು ಕೊಪ್ಪಳದ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಯೇ ಉದ್ಘಾಟನೆ ಮಾಡಲಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳಿಗೆ ಕಿವಿಗೊಡಬಾರದು ಎಂದು ಮಠದ ಮೂಲಗಳು ತಿಳಿಸಿವೆ.

ಸ್ವಾಮೀಜಿ ದಸರಾ ಉದ್ಘಾಟನೆ ನಿರಾಕರಿಸಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಆದರೆ, ಇದು ಸತ್ಯವಲ್ಲ’ ಎಂದು ಮೂಲಗಳು ಖಚಿತಪಡಿಸಿವೆ. ಸ್ವಾಮೀಜಿ ನಿರಾಕರಿಸಿರುವ ಬಗ್ಗೆ ಮಠದಿಂದ ಯಾವುದೇ ಅಧಿಕೃತ ಪ್ರಕಟಣೆ ಬಿಡುಗಡೆಯಾಗಿಲ್ಲ.’ಕೊಪ್ಪಳದ ಗವಿಮಠದ ಜಾತ್ರೆಗೆ ಪ್ರತಿವರ್ಷವೂ ನಾಡಿನ ವಿವಿಧೆಡೆಯಿಂದ ಗಣ್ಯರನ್ನು ಕರೆಯಿಸಲಾಗುತ್ತದೆ. ಆದರೆ, ಈ ಬಾರಿ ನಾಡಹಬ್ಬಕ್ಕೆ ಕೊಪ್ಪಳದವರನ್ನೇ ಉದ್ಘಾಟನೆಗೆ ಆಯ್ಕೆ ಮಾಡಿದ್ದು ಎಲ್ಲರಿಗೂ ಹೆಮ್ಮೆಯ ವಿಚಾರ. ಸ್ವಾಮೀಜಿ ದಸರಾವನ್ನು ಸಂತೋಷದಿಂದ ಉದ್ಘಾಟನೆ ಮಾಡಲಿದ್ದಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ’ ಎಂದು ಮೂಲಗಳು ಸ್ಪಷ್ಟಪಡಿಸಿವೆ.’ಯಾವ ಉಹಾಪೋಹಕ್ಕೂ ಕಿವಿಗೊಡಬಾರದು. ಸ್ವಾಮೀಜಿ ಅವರೇ ದಸರಾ ಉದ್ಘಾಟಿಸಲಿದ್ದು ಸರ್ಕಾರದ ವತಿಯಿಂದ ಸೆ. 28ರಂದು ಸರ್ಕಾರದ ವತಿಯಿಂದ ಆಹ್ವಾನ ನೀಡಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ತಿಳಿಸಿದರು.

[t4b-ticker]
error: Content is protected !!