ಖ್ಯಾತ ಡ್ರಮ್ ವಾದಕ ‘ಡ್ರಮ್ಮರ್ ದೇವಾ’ ನಿಧನ

Picture of Savistara

Savistara

Bureau Report

ಬೆಂಗಳೂರು: ಕನ್ನಡ ಚಿತ್ರರಂಗ ಹಾಗೂ ಐಪಿಎಲ್ ಕ್ರಿಕೆಟ್ಪಂದ್ಯಗಳ ಮೂಲಕ ಅಪಾರ ಜನಪ್ರಿಯತೆಗಳಿಸಿದ್ದ ಡ್ರಮ್ಮರ್ ದೇವಾ ಎಂದೇ ಪರಿಚತರಾಗಿದ್ದ ದೇವೇಂದ್ರ ಕುಮಾ‌ರ್ (64) ಅವರು ಶನಿವಾರ ರಾತ್ರಿ ನಿಧನರಾಗಿದ್ದಾರೆ.ಚಾಮರಾಜಪೇಟೆ ನಿವಾಸಿಯಾಗಿದ್ದ ದೇವೇಂದ್ರ ಕುಮಾರ್ ಅವರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಕಳೆದ ಹಲವು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಗ್ಯಾಂಗ್ರಿನ್ ಸಮಸ್ಯೆಯಿಂದ ಇತ್ತೀಚೆಗೆ ಬಲಗಾಲನ್ನು ಕಳೆದುಕೊಂಡಿದ್ದರು.ಶಂಕರ್ ನಾಗ್ ಅವರ ಸಂಕೇತ್ ಸ್ಟುಡಿಯೊ ಮೂಲಕ ಮದ್ರಾಸ್‌ನಿಂದ ಬೆಂಗಳೂರಿಗೆ ಬಂದಿದ್ದ ಡ್ರಮ್ಮರ್ ದೇವಾ, ಕನ್ನಡ ಸೇರಿದಂತೆ ವಿವಿಧ ಭಾಷೆಗಳ ಸುಮಾರು 800ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಡ್ರಮ್‌ ನುಡಿಸಿ ವಿಶಿಷ್ಟ ಛಾಪು ಮೂಡಿಸಿದ್ದರು. ಐಪಿಎಲ್ ಟಿ20 ಕ್ರಿಕೆಟ್ ಟೂರ್ನಿಯ ಅನೇಕ ಪಂದ್ಯಗಳಲ್ಲೂ ತಮ್ಮ ಡ್ರಮ್ ವಾದನದಿಂದ ಕ್ರೀಡಾಭಿಮಾನಿಗಳ ಮೆಚ್ಚುಗೆ ಗಳಿಸಿದ್ದರು.ಡ್ರಮ್ಮರ್ ದೇವಾ ಅವರ ನಿಧನಕ್ಕೆ ಚಿತ್ರರಂಗ ಹಾಗೂ ಸಂಗೀತ ಕ್ಷೇತ್ರದ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

[t4b-ticker]
error: Content is protected !!