ಸೌಜನ್ಯ ಪ್ರಕರಣ ತನಿಖೆಗೆ ಪ್ರಣಾಬ್ ಮೊಹಂತಿ ನೇಮಕಕ್ಕೆ ಆಗ್ರಹ! ಎನ್. ಶಶಿಕುಮಾ‌ರ್ ನೇತೃತ್ವದಲ್ಲಿ ಸತ್ಯ ಹೊರಬರಲ್ಲ ಎಂದ ಹೋರಾಟಗಾರರು

Picture of Savistara

Savistara

Bureau Report

ಮಂಗಳೂರು:ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗಾಗಿ ರಾಜ್ಯ ಸರ್ಕಾರ ರಚಿಸಿರುವ SIT ತಂಡದ ಮುಖ್ಯಸ್ಥರ ವಿರುದ್ಧ ಸೌಜನ್ಯ ತಾಯಿ ಕುಸುಮಾವತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. SIT ಮುಖ್ಯಸ್ಥರಾಗಿ ಎನ್‌. ಶಶಿಕುಮಾ‌ರ್ ಅವರನ್ನು ನೇಮಕ ಮಾಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಸೌಜನ್ಯ ಪರ ಹೋರಾಟಗಾರರು, ತನಿಖೆಯ ಹೊಣೆಯನ್ನು ಹಿರಿಯ ಪೊಲೀಸ್ ಅಧಿಕಾರಿ ಪ್ರಣಾಬ್ ಮೊಹಂತಿಗೆ ವಹಿಸುವಂತೆ ಆಗ್ರಹಿಸಿದ್ದಾರೆ.

ಎನ್. ಶಶಿಕುಮಾ‌ರ್ ನೇತೃತ್ವದಲ್ಲಿ ಪ್ರಕರಣದ ಸತ್ಯ ಹೊರಬರುವುದಿಲ್ಲ ಎಂದು ಹೋರಾಟಗಾರರು ಆರೋಪಿಸಿದ್ದಾರೆ.ಈ ಹಿಂದೆ ಎನ್. ಶಶಿಕುಮಾ‌ರ್ ಅವರ ವಿರುದ್ಧ ಹಲವು ಆರೋಪಗಳು ಕೇಳಿಬಂದಿವೆ. ಹೀಗಾಗಿ ಅವರ ನೇತೃತ್ವದ SIT ಮೇಲೆ ನಮಗೆ ವಿಶ್ವಾಸವಿಲ್ಲ ಎಂದು ಸೌಜನ್ಯ ಪರ ಹೋರಾಟಗಾರರು ಹೇಳಿದ್ದಾರೆ. ಸೌಜನ್ಯ ತಾಯಿಯ 14 ವರ್ಷಗಳ ಹೋರಾಟಕ್ಕೆ ನ್ಯಾಯ ಸಿಗಬೇಕು. ಪ್ರಕರಣದ ಮರುತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.

[t4b-ticker]
error: Content is protected !!