ಕರಾವಳಿ ಕಡಲತೀರದಲ್ಲಿ ರೌದ್ರಾವತಾರ: ಮಂಗಳೂರು-ಮುಲ್ಕಿ ತೀರಕ್ಕೆ ಬೃಹತ್ ಅಲೆಗಳ ಅಪ್ಪಳಿಸುವ ಭೀತಿ

Picture of Savistara

Savistara

Bureau Report

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯಿಂದ ಮಂಗಳೂರು ನಡುವಿನ ಕರಾವಳಿ ತೀರ ಪ್ರದೇಶದಲ್ಲಿ ಕಡಲ ಅಲೆಗಳ ಅಬ್ಬರ ತೀವ್ರಗೊಳ್ಳುವ ಸಾಧ್ಯತೆಯಿದ್ದು, ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಸೇವೆಗಳ ಕೇಂದ್ರ (INCOIS) ಅಧಿಕೃತ ಮುನ್ನೆಚ್ಚರಿಕೆ ಸಂದೇಶ ರವಾನಿಸಿದೆ.ಸಮುದ್ರದಲ್ಲಿ ಉಂಟಾಗಿರುವ ಹವಾಮಾನ ವೈಪರೀತ್ಯದಿಂದಾಗಿ ಬೃಹತ್ ಅಲೆಗಳು ತೀರಕ್ಕೆ ಅಪ್ಪಳಿಸುವ ಆತಂಕ ಎದುರಾಗಿದೆ. ಸೆಪ್ಟೆಂಬರ್ 27ರ ಸಂಜೆ 5:30 ರಿಂದ ಸೆಪ್ಟೆಂಬರ್ 29ರ ರಾತ್ರಿ 11:30 ರವರೆಗಿನ ಅವಧಿಯಲ್ಲಿ ಸಮುದ್ರದಲ್ಲಿ 0.8 ರಿಂದ 1.1 ಮೀಟರ್ ಎತ್ತರದ ಅಲೆಗಳು ಏಳುವ ಸಾಧ್ಯತೆಯಿದೆ. ಈ ಅವಧಿಯಲ್ಲಿ ಪ್ರತಿಯೊಂದು ಅಲೆಯ ಕಾಲಾವಧಿಯು (Wave Period) ಸುಮಾರು 16.0 ರಿಂದ 18.0 ಸೆಕೆಂಡುಗಳಷ್ಟಿರಲಿದೆ ಎಂದು ಸಂಸ್ಥೆ ಅಂದಾಜಿಸಿದೆ.

ಈ ಹಿನ್ನೆಲೆಯಲ್ಲಿ ಕಡಲತೀರದ ಪ್ರವಾಸಿ ತಾಣಗಳಲ್ಲಿ ಸಮುದ್ರದ ನೀರು ದಿಢೀರನೆ ದಡಕ್ಕೆ ನುಗ್ಗುವ ಭೀತಿ ಉಂಟಾಗಿದೆ. ತೀರ ಪ್ರದೇಶದಲ್ಲಿ ಸಂಚರಿಸುವ ದೋಣಿಗಳು ಮತ್ತು ದೋಣಿ ಚಾಲಕರು ಅತ್ಯಂತ ಜಾಗರೂಕತೆಯಿಂದ ಇರಬೇಕು ಎಂದು ಸೂಚಿಸಲಾಗಿದೆ. ಹಾಗೆಯೇ, ಪ್ರವಾಸಿಗರು ಮತ್ತು ಸಾರ್ವಜನಿಕರು ಕಡಲತೀರಕ್ಕೆ ತೆರಳಿದಾಗ ನೀರಿಗಿಳಿಯದೆ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಆಡಳಿತ ಹಾಗೂ ಹವಾಮಾನ ಇಲಾಖೆ ತಿಳಿಸಿದೆ.

[t4b-ticker]
error: Content is protected !!