ಐವರ್ನಾಡು ಗ್ರಾಮದಲ್ಲಿ ನಿರಂತರ ಪವರ್ ಕಟ್ ಗ್ಯಾಂಗ್ ಮ್ಯಾನ್ ಮತ್ತು 20 GOS ಅಳವಡಿಕೆಗೆ ಕೃಷಿಕರ ಹಿತರಕ್ಷಣಾ ಸಮಿತಿಯಿಂದ ಆಗ್ರಹ ಐವರ್ನಾಡು ಗ್ರಾಮದಲ್ಲಿ ಕಳೆದ ಹಲವು ದಿನಗಳಿಂದ ನಿರಂತರ ಮಳೆಯಿಂದಾಗಿ ವಿದ್ಯುತ್ ವ್ಯತ್ಯಯ ಸಮಸ್ಯೆ ತೀವ್ರಗೊಂಡಿದ್ದು, ರೈತರು ಮತ್ತು ಸಾರ್ವಜನಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ದಿನವಿಡೀ ಹಲವು ಬಾರಿ ವಿದ್ಯುತ್ ಕಡಿತವಾಗುತ್ತಿರುವುದರಿಂದ ಕೃಷಿ ಚಟುವಟಿಕೆಗಳಿಗೆ ಅಡಚಣೆ ಯಾಗಿದೆ. ವಿಶೇಷವಾಗಿ ರಾತ್ರಿ ವೇಳೆ ವಿದ್ಯುತ್ ಇಲ್ಲದ ಕಾರಣ ನೀರಾವರಿ ಪಂಪ್‌ಸೆಟ್‌ಗಳು ಸ್ಥಗಿತಗೊಂಡು ಬೆಳೆಗಳಿಗೆ ನೀರು ಹಾಯಿಸಲು ಸಾಧ್ಯವಾಗದ ರೈತರು ಅತಂಕಗೊಂಡಿದ್ದಾರೆ.ಪ್ರಸ್ತುತ ಐವರ್ನಾಡು ವ್ಯಾಪ್ತಿಯಲ್ಲಿ ಒಬ್ಬನೇ ಲೈನ್‌ಮನ್ ಕಾರ್ಯನಿರ್ವಹಿಸುತ್ತಿದ್ದು, ಮಳೆ ಮತ್ತು ಗಾಳಿಗೆ ಮರದ ವಿದ್ಯುತ್ ತಂತಿಗೆ ಬೀಳುವುದು, ಕಂಬಗಳು ಹಾನಿಯಾಗುವುದು ಸಾಮಾನ್ಯವಾಗಿದೆ.
ದುರಸ್ತಿ ಕಾರ್ಯಕ್ಕೆ ಒಬ್ಬರೇ ಸಿಬ್ಬಂದಿ ಇರುವುದರಿಂದ ಸಮಸ್ಯೆ ಪರಿಹಾರ ತಡವಾಗುತ್ತಿದೆ.ಈ ಹಿನ್ನಲೆಯಲ್ಲಿ ಕೃಷಿಕರ ವೇದಿಕೆ ಸಂಚಾಲಕ ಕೃಷ್ಣಪ್ರಸಾದ್ ಮಡ್ತಿಲ ಅವರು MESCOM ಸಹಾಯಕ ಇಂಜಿನಿಯರ್ ಹರೀಶ್ ಅವರ ಗಮನಕ್ಕೆ ತಂದಾಗ ಮನವಿಯಲ್ಲಿ ಕೂಡಲೇ 2 ರಿಂದ 3 ಗ್ಯಾಂಗ್ ಮ್ಯಾನ್‌ಗಳನ್ನು ನೇಮಿಸಬೇಕು ಮತ್ತು 20 GOS (Gang Operating Switch) ಅನ್ನು ಅಳವಡಿಸಿ ವಿದ್ಯುತ್ ಸಂಪರ್ಕವನ್ನು ಸುಭದ್ರಪಡಿಸಬೇಕು ಎಂದು ಒತ್ತಾಯಿಸಿದ್ದಾರೆ. AE ಹರೀಶ್ ಅವರು ಒಂದು ವಾರದೊಳಗೆ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿ, ಅಗತ್ಯವಿರುವ 20 GOS ಗಳನ್ನು ಅಳವಡಿಸುವುದಾಗಿ ಭರವಸೆ ನೀಡಿದ್ದಾರೆ.
ಒಂದು ವಾರದೊಳಗೆ ಸಮಸ್ಯೆ ಬಗೆಹರಿಸದಿದ್ದಲ್ಲಿ ಕೃಷಿಕರ ವೇದಿಕೆ ವತಿಯಿಂದ MESCOM ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಕೃಷಿಕ ಹಿತರಕ್ಷಣಾ ಸಮಿತಿಯ ಕೃಷ್ಣಪ್ರಸಾದ್ ಮಡ್ತಿಲ ತಿಳಿಸಿದ್ದಾರೆ












































