ಪಾದರಸದಿಂದ ನಿಜವಾದ ಚಿನ್ನ ಸೃಷ್ಟಿ: ಸೈನ್ಸ್ ಸಿನಿಮಾ ಶೈಲಿಯಲ್ಲಿ ಅಮೆರಿಕ ಕಂಪೆನಿ ಕಮಾಲ್!

Picture of Savistara

Savistara

Bureau Report

​ಸ್ಯಾನ್ ಫ್ರಾನ್ಸಿಸ್ಕೋ: ರಸವಿದ್ಯೆಯ ಮೂಲಕ ಚಿನ್ನ ತಯಾರಿಸುವ ಶತಮಾನಗಳ ಕನಸು ಇದೀಗ ವಿಜ್ಞಾನದ ಮೂಲಕ ನನಸಾಗುವ ಲಕ್ಷಣಗಳು ಕಾಣಿಸುತ್ತಿವೆ. ಅಮೆರಿಕದ ‘ಮ್ಯಾರಥಾನ್ ಫ್ಯೂಷನ್’ (Marathon Fusion) ಎಂಬ ನವೋದ್ಯಮ ಕಂಪೆನಿಯು ಪಾದರಸದಿಂದ (Mercury) ನಿಜವಾದ ಚಿನ್ನವನ್ನು ಸೃಷ್ಟಿಸುವಲ್ಲಿ ಗಮನಾರ್ಹ ಯಶಸ್ಸು ಸಾಧಿಸಿರುವುದಾಗಿ ವರದಿಯಾಗಿದೆ.​

ವಿಜ್ಞಾನದ ಪವಾಡ ನಡೆದಿದ್ದು ಹೇಗೆ?​

ಫ್ಯೂಷನ್ ತಂತ್ರಜ್ಞಾನ: ಕಂಪೆನಿಯು ಫ್ಯೂಷನ್ ರಿಯಾಕ್ಟರ್‌ ಮೂಲಕ ನ್ಯೂಟ್ರಾನ್‌ಗಳನ್ನು ಬಳಸಿ, ‘ಮರ್ಕ್ಯುರಿ-198’ ಐಸೊಟೋಪ್ ಅನ್ನು ‘ಗೋಲ್ಡ್-197’ (ಸ್ಥಿರ ಚಿನ್ನ) ಆಗಿ ಪರಿವರ್ತಿಸುವ ಪರಮಾಣು ಕ್ರಿಯೆಯಲ್ಲಿ ಯಶಸ್ವಿಯಾಗಿದೆ.​

10 ಪಟ್ಟು ವೇಗ: 2025 ರಲ್ಲಿ ವಿಶ್ವಪ್ರಸಿದ್ಧ ‘CERN’ ಸಂಸ್ಥೆ ಬರೆದಿದ್ದ ದಾಖಲೆಗಿಂತ 10 ಪಟ್ಟು ಹೆಚ್ಚು ವೇಗವಾಗಿ ಚಿನ್ನ ಉತ್ಪಾದಿಸಿರುವುದಾಗಿ ಕಂಪೆನಿ ಕ್ಲೈಮ್ ಮಾಡಿದೆ.​

ಕ್ಯಾನ್ಸರ್ ಚಿಕಿತ್ಸೆಗೆ ಕೊಡುಗೆ: ಈ ತಂತ್ರಜ್ಞಾನ ಕೇವಲ ಚಿನ್ನ ಸೃಷ್ಟಿಗೆ ಮಾತ್ರ ಸೀಮಿತವಾಗಿರದೆ, ಕ್ಯಾನ್ಸರ್ ರೋಗನಿರ್ಣಯ ಹಾಗೂ ಚಿಕಿತ್ಸೆಗೆ ಬಳಸುವ ವಿಕಿರಣಶೀಲ ಐಸೊಟೋಪ್‌ಗಳ ತಯಾರಿಕೆಗೂ ನೆರವಾಗಲಿದೆ.

​

ಅಗ್ಗದ ಚಿನ್ನ ಸಿಗೋದು ಸುಲಭನಾ?:

ಈ ಹಿಂದೆ CERN ವಿಜ್ಞಾನಿಗಳು 4 ವರ್ಷ ಶ್ರಮಿಸಿ ಅತ್ಯಂತ ಕನಿಷ್ಠ (29 ಪಿಕೋಗ್ರಾಮ್) ಪ್ರಮಾಣದ ಚಿನ್ನ ಉತ್ಪಾದಿಸಿದ್ದರು. ಮ್ಯಾರಥಾನ್ ಫ್ಯೂಷನ್ ಕಂಪೆನಿಯು ಇದನ್ನು 10 ಪಟ್ಟು ವೇಗವಾಗಿ ಮಾಡಿದ್ದೇವೆ ಎಂದಿದ್ದರೂ, ಮಾರುಕಟ್ಟೆಯಲ್ಲಿ ಅಗ್ಗದ ದರದಲ್ಲಿ ವಾಣಿಜ್ಯಿಕವಾಗಿ ಚಿನ್ನ ಸಿಗಲು ಇನ್ನೂ ಸಾಕಷ್ಟು ಸಮಯ ಬೇಕಾಗಬಹುದು.

[t4b-ticker]
error: Content is protected !!