ಸುಳ್ಯ :ರಕ್ತೇಶ್ವರಿ ಸಾನಿಧ್ಯ ಭೂಮಿ ವಕ್ಫ್‌ಗೆ ಮಂಜೂರು 28 ಕ್ಕೆ ಸುಳ್ಯದಲ್ಲಿ ಬೃಹತ್ ಪ್ರತಿಭಟನೆ: ಜಗನ್ನಾಥ ಜಯನಗರ

Picture of Savistara

Savistara

Bureau Report

​ಸುಳ್ಯ/ಮಂಗಳೂರು: ರೈತರು ತಲೆತಲಾಂತರದಿಂದ ಅನುಭವಿಸಿಕೊಂಡು ಬರುತ್ತಿದ್ದ ಕುಮ್ಕಿ ಜಮೀನನ್ನು ಯಾವುದೇ ಮುನ್ಸೂಚನೆ ಹಾಗೂ ನೋಟಿಸ್ ನೀಡದೆ ವಕ್ಫ್ ಬೋರ್ಡ್‌ಗೆ ಮಂಜೂರು ಮಾಡಿರುವುದು ಕಂದಾಯ ಕಾಯ್ದೆಯ ಉಲ್ಲಂಘನೆ ಮತ್ತು ಘೋರ ಅನ್ಯಾಯ ಎಂದು ಬಿಜೆಪಿ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಜಗನ್ನಾಥ ಜಯನಗರ ಆಕ್ರೋಶ ಹೊರಹಾಕಿದ್ದಾರೆ.​

ಪ್ರಕರಣದ ಮುಖ್ಯ ಅಂಶಗಳು:​ನೋಟಿಸ್ ನೀಡದೆ ಆದೇಶ: ಕಂದಾಯ ನಿಯಮಗಳ ಪ್ರಕಾರ ಕುಮ್ಕಿ ಜಮೀನಿನ ವಾರಸುದಾರರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಬೇಕಿತ್ತು. ಆದರೆ ಜಿಲ್ಲಾಧಿಕಾರಿಗಳು ಏಕಾಏಕಿ ಈ ಭೂಮಿಯನ್ನು ವಕ್ಫ್ ಬೋರ್ಡ್ ದಫನ ಭೂಮಿಗಾಗಿ ಕಾಯ್ದಿರಿಸಿ ಆದೇಶಿಸಿದ್ದಾರೆ.

​ರಕ್ತೇಶ್ವರಿ ಸಾನಿಧ್ಯದ ಜಾಗ: ಮುರುಳ್ಯ ರಕ್ತೇಶ್ವರಿ ದೇವಿ ಸಾನಿಧ್ಯವಿರುವ ಹಾಗೂ ಹಿಂದೂ ರೈತರು ದಶಕಗಳಿಂದ ಉಳುಮೆ ಮಾಡುತ್ತಿರುವ ಜಮೀನನ್ನು ದಫನ ಭೂಮಿಗೆ ಮಂಜೂರು ಮಾಡಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.​ಬೃಹತ್ ಪ್ರತಿಭಟನೆಗೆ ಕರೆ: ಈ ಆದೇಶವನ್ನು ತಕ್ಷಣವೇ ಹಿಂಪಡೆಯಬೇಕೆಂದು ಆಗ್ರಹಿಸಿ ಅ.28 ರ ಬುಧವಾರ ಬೆಳಿಗ್ಗೆ 10 ಗಂಟೆಗೆ ‘ಹಿಂದೂ ಹಿತರಕ್ಷಣಾ ವೇದಿಕೆ’ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಭಾಗವಹಿಸುವಂತೆ ಮನವಿ ಮಾಡಲಾಗಿದೆ.

[t4b-ticker]
error: Content is protected !!