ಮುರುಳ್ಯದಲ್ಲಿ ವಕ್ಫ್ ವಿರುದ್ಧದ ಪ್ರತಿಭಟನೆಗೆ ದ.ಕ. ಬಿಜೆಪಿ ಜಿಲ್ಲಾ ಘಟಕದಿಂದ ಬೆಂಬಲ

Picture of Savistara

Savistara

Bureau Report

ಮಂಗಳೂರು: ಸುಳ್ಯ ತಾಲೂಕಿನ ಮುರುಳ್ಯ ಗ್ರಾಮದಲ್ಲಿರುವ ರಕೇಶ್ವರಿ ದೇವಿಯ ಸಾನಿಧ್ಯವುಳ್ಳ ಹಿಂದೂಗಳ ಕೃಷಿ ಭೂಮಿಯನ್ನು ವಕ್ಫ್ ಬೋರ್ಡ್ ಅಕ್ರಮವಾಗಿ ಮುಸ್ಲಿಂ ದಫನ ಭೂಮಿಯನ್ನಾಗಿ ಕಾಯ್ದಿರಿಸಿ ಹೊರಡಿಸಿರುವ ಆದೇಶದ ವಿರುದ್ಧ ಅ.28 ರಂದು ನಡೆಯಲಿರುವ ಪ್ರತಿಭಟನೆಗೆ ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲಾ ಘಟಕ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಆರ್ವಾರ್ ತಿಳಿಸಿದ್ದಾರೆ.

ಹಿಂದೂ ಹಿತರಕ್ಷಣಾ ವೇದಿಕೆ, ಮುರುಳ್ಯ ನೇತೃತ್ವದಲ್ಲಿ ಅಕ್ಟೋಬರ್ 28, ಬುಧವಾರ ಬೆಳಿಗ್ಗೆ 10 ಗಂಟೆಗೆ ಮುರುಳ್ಯದಲ್ಲಿ ಈ ಬೃಹತ್ ಪ್ರತಿಭಟನಾ ಸಭೆ ನಡೆಯಲಿದೆ.ಹಿಂದೂಗಳ ಕೃಷಿ ಭೂಮಿಯನ್ನು ಯಾವುದೇ ದಾಖಲೆ, ವಿಚಾರಣೆ ಇಲ್ಲದೆ ವಕ್ಫ್ ಬೋರ್ಡ್ ತನ್ನ ಆಸ್ತಿ ಎಂದು ಘೋಷಿಸಿರುವುದು ಖಂಡನೀಯವಾಗಿದ್ದು, ಇದು ಹಿಂದೂ ಸಮಾಜದ ಮೇಲೆ ನಡೆದ ಅನ್ಯಾಯವಾಗಿದೆ. ಈ ಅನ್ಯಾಯದ ವಿರುದ್ಧದ ಹೋರಾಟದಲ್ಲಿ ಬಿಜೆಪಿ ಜಿಲ್ಲಾ ಘಟಕವು ಹಿಂದೂ ಸಮಾಜದ ಜೊತೆಗಿದೆ ಎಂದು ಯತೀಶ್ ಆರ್ವಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು, ಹಿಂದೂ ಬಾಂಧವರು ಭಾಗವಹಿಸಬೇಕೆಂದು ಅವರು ಕರೆ ನೀಡಿದ್ದಾರೆ.

[t4b-ticker]
error: Content is protected !!