ಮಂಡಿನೋವು ಎಫೆಕ್ಟ್ – ಹೊಸ ಕಾರಲ್ಲಿ ಸಿಎಂ ಓಡಾಟ: ಟೊಯೋಟಾ ವೆಲ್ಫೈರ್ ಖರೀದಿಗೆ ಮುಂದಾದ ಸಿದ್ದರಾಮಯ್ಯ

Picture of Savistara

Savistara

Bureau Report

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಡಗಾಲು ಮಂಡಿನೋವಿನಿಂದ ಬಳಲುತ್ತಿದ್ದು, ಸರ್ಕಾರಿ ಕಾರಿನಲ್ಲಿ ಕಾಲು ಮಡಚಿ ಇಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಹೊಸ ಕಾರು ಖರೀದಿಸುವ ಯೋಜನೆಯಲ್ಲಿ ಸಿಎಂ ಪ್ರಯೋಗಾರ್ಥವಾಗಿ ಬೇರೊಂದು ಕಾರನ್ನು ಬಳಸುತ್ತಿದ್ದಾರೆ.

ಬೆಂಗಳೂರು: ಮಂಡಿನೋವಿನಿಂದ ಬಳಲುತ್ತಿರುವ ಸಿಎಂ ಸಿದ್ದರಾಮಯ್ಯ ಅವರು ಇದೀಗ ಹೊಸ Toyota Vellfire​​​ ಕಾರು ಖರೀದಿ ಮಾಡಲು ಮುಂದಾಗಿದ್ದಾರೆ.ಸಿಎಂ ಮೊದಲು ತಮ್ಮ ಸರ್ಕಾರಿ ಫಾರ್ಚೂನರ್​ ಕಾರನ್ನು ಬಳಸುತ್ತಿದ್ದರು. ಈಗ ಮಂಡಿ ನೋವಿದ್ದು, ಕಾಲಿಗೆ ಬೆಲ್ಟ್ ಅಳವಡಿಸಲಾಗಿದೆ. ಹೀಗಾಗಿ ಮುಖ್ಯಮಂತ್ರಿಗಳಿಗೆ ಅವರ ಸರ್ಕಾರಿ ಕಾರಿನಲ್ಲಿ ಹತ್ತಲು ಮತ್ತು ಇಳಿಯಲು, ಕಾಲನ್ನು ಮುಂದಕ್ಕೆ ಚಾಚಿ ಇಡಲು ಕಷ್ಟವಾಗುತ್ತಿದೆ. ಈ ಹಿನ್ನೆಲೆ ಹೊಸ ಕಾರು ಖರೀದಿಗೆ ಮುಂದಾಗಿದ್ದಾರೆ.

ಟೊಯೋಟಾ Vellfire ಕಾರಲ್ಲಿ ಓಡಾಟ: ತಮ್ಮ ಆಪ್ತರು ಹೊಸ ಕಾರು ಖರೀದಿಸಲು ನೀಡಿದ ಸಲಹೆ ಹಿನ್ನೆಲೆ ಸದ್ಯ ಸಿಎಂ ಪ್ರಯೋಗಾರ್ಥವಾಗಿ ಟೊಯೋಟಾ ವೆಲ್ಫೈರ್​​ ಕಾರನ್ನು ಬಳಲಸುತ್ತಿದ್ದು, ಬಹುತೇಕ ಅದೇ ಕಾರನ್ನು ಖರೀದಿಸುವ ಸಾಧ್ಯತೆ ಇದೆ ಎಂದು ಸಿಎಂ ಸಚಿವಾಲಯದ ಮೂಲಗಳು ತಿಳಿಸಿವೆ.ಕಳೆದ ಒಂದು ವಾರದಿಂದ ಸಿದ್ದರಾಮಯ್ಯ ಅವರು ತಮ್ಮ ಅಧಿಕೃತ ಕಾರ್ಯಕ್ರಮಗಳಿಗೆ ಸರ್ಕಾರಿ ಕಾರು ಬದಲಿಗೆ Toyota Vellfire​​​ ​ ಕಾರಲ್ಲೇ ಓಡಾಟ ನಡೆಸುತ್ತಿದ್ದಾರೆ.

ವಿಧಾನಸೌಧದಲ್ಲಿ ಕಳೆದ ಮೂರು ದಿನಗಳಿಂದ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಳ್ಳಲು ಸಹ ಸಿಎಂ ಇದೇ ಕಾರಲ್ಲಿ ಆಗಮಿಸಿದ್ದರು. ಬಳಿಕ ಕಾರಿನಿಂದ ಇಳಿದು ವ್ಹೀಲ್ ಚೇರ್​ನಲ್ಲಿ ಕುಳಿತು ವಿಧಾನಸೌಧದ ಒಳಕ್ಕೆ ಹೋದರು. ವೈದ್ಯರ ಸಲಹೆ ಮೇರೆಗೆ ಗಾಲಿ ಕುರ್ಚಿಯಲ್ಲೇ ಸಿಎಂ ಕೆಲ ದಿನಗಳ ಕಾಲ ಕೂರಬೇಕಾಗಿದೆ‌.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!