ನಿಂತಿಕಲ್ಲು :ಮುರುಳ್ಯದಲ್ಲಿ ರಕ್ತೇಶ್ವರಿ ಸಾನಿಧ್ಯಕ್ಕೆ ಮೀಸಲಿದ್ದ ಕುಮ್ಕಿ ಜಾಗ ದಫನ ಭೂಮಿಗೆ ಕಾದಿರಿಸಿದ್ದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ

Picture of Savistara

Savistara

Bureau Report

ಕಾಣಿಯೂರು, ನ.23:ಮುರುಳ್ಯದಲ್ಲಿ ಶ್ರೀ ರಕ್ತೇಶ್ವರಿ ಸಾನಿಧ್ಯ ನಿರ್ಮಾಣಕ್ಕೆ ಮೀಸಲಿದ್ದ ಕುಮ್ಕಿ ಜಾಗವನ್ನು ದಫನ ಭೂಮಿಗೆ ಕಾದಿರಿಸಿ ಕಂದಾಯ ಇಲಾಖೆ ಹೊರಡಿಸಿದ್ದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.

Advertisement

ರಿಟ್ ಅರ್ಜಿ ಸಲ್ಲಿಸಿದವರು ಯಾರು?

Advertisement

ಚೇತನಾ ಕೆ.ಸಿ. – ಮುರುಳ್ಯ ಹುದೇರಿಯ ಕಿಶನ್ ಅವರ ಪತ್ನಿ.

Advertisement

ತಮ್ಮ ಸ್ವಾಧೀನದ ಕುಮ್ಕಿ ಭೂಮಿಯನ್ನು ಏಕಾಏಕಿಯಾಗಿ ಮುಸ್ಲಿಮರ ದಫನ ಭೂಮಿಗೆಂದು ಕಾದಿರಿಸಿ ಕಂದಾಯ ಇಲಾಖೆ ಆದೇಶಿಸಿದೆ ಎಂದು ಅವರು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿ, ಆದೇಶಕ್ಕೆ ತಡೆಯಾಜ್ಞೆ ಕೋರಿದ್ದರು.ಜಿಲ್ಲಾಧಿಕಾರಿ ಮತ್ತು ಸುಳ್ಯ ತಹಶೀಲ್ದಾರ್ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿತ್ತು.

Advertisement

Advertisement

ನ್ಯಾ. ಇ.ಎಸ್. ಇಂದಿರೇಶ್ ಅವರಿದ್ದ ಏಕಸದಸ್ಯ ಪೀಠ ಆದೇಶಕ್ಕೆ ತಡೆ ನೀಡಿ, ಪ್ರತಿವಾದಿಗಳಿಗೆ ನೋಟಿಸ್ ಜಾರಿಗೆ ಆದೇಶಿಸಿದೆ.ಅರ್ಜಿದಾರರ ಪರ ಹಿರಿಯ ವಕೀಲ ಡಾ. ಅರುಣ್‌ಶ್ಯಾಂ ವಾದಿಸಿದ್ದರು. ವಕೀಲ ಸುಯೋಗ್ ಹೇರಳೆ ವಕಾಲತ್ತು ವಹಿಸಿದ್ದರು.

Advertisement
[t4b-ticker]
error: Content is protected !!