ದುಬೈ: ಪಾಕಿಸ್ಥಾನ ವಿರುದ್ಧ ರವಿವಾರ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿದ್ದ ದಾಖಲೆ ಮುರಿದಿದ್ದಾರೆ.ಏಕದಿನ ಕ್ರಿಕೆಟ್ ನಲ್ಲಿ 14000 ರನ್ ಪೂರೈಸಿದ ಕೊಹ್ಲಿ ದಾಖಲೆ ಪುಸ್ತಕದಲ್ಲಿ ತಮ್ಮ ಹೆಸರನ್ನು ಬರೆದಿದ್ದಾರೆ. ಹಾರಿಸ್ ರೌಫ್ ಎಸೆದ ಚೆಂಡನ್ನು ಬೌಂಡರಿಗಟ್ಟಿ ದಾಖಲೆ ಬರೆದರು. ಕೊಹ್ಲಿ ಕೇವಲ 287 ಇನ್ನಿಂಗ್ಸ್‌ಗಳಲ್ಲಿ ಅತಿವೇಗವಾಗಿ ಹೆಗ್ಗುರುತನ್ನು ತಲುಪಿದರು.
ಸಚಿನ್ ತೆಂಡೂಲ್ಕರ್ 2006 ರಲ್ಲಿ ಪೇಶಾವರದಲ್ಲಿ ಪಾಕಿಸ್ಥಾನನ ವಿರುದ್ಧವೇ 350 ಇನ್ನಿಂಗ್ಸ್‌ಗಳಲ್ಲಿ 14000 ರನ್ ಪೂರೈಸಿದ ದಾಖಲೆ ಬರೆದಿದ್ದರು. 2015 ರಲ್ಲಿ ಸಿಡ್ನಿಯಲ್ಲಿ ಆಸ್ಟ್ರೇಲಿಯ ವಿರುದ್ಧ 378 ಇನ್ನಿಂಗ್ಸ್‌ಗಳಲ್ಲಿ ಕುಮಾರ ಸಂಗಕ್ಕಾರ ಈ ದಾಖಲೆ ಮಾಡಿದ್ದರು.ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ಥಾನ 49.4 ಓವರ್ ಗಳಲ್ಲಿ 241 ರನ್ ಗೆ ಆಲೌಟಾಗಿತ್ತು.













































